»   » ನರ್ತಕಿಯಿಂದ '.ರೆ' ಎತ್ತಂಗಡಿಯಾಯ್ತು, ಇನ್ನೊಂದ್ ಲವ್ ಸ್ಟೋರಿ ಬಂತು

ನರ್ತಕಿಯಿಂದ '.ರೆ' ಎತ್ತಂಗಡಿಯಾಯ್ತು, ಇನ್ನೊಂದ್ ಲವ್ ಸ್ಟೋರಿ ಬಂತು

Posted By:
Subscribe to Filmibeat Kannada

ಕಳೆದ ವಾರ ಕರ್ನಾಟಕದಾದ್ಯಂತ ತೆರೆ ಕಂಡ '...ರೆ' ಸಿನಿಮಾದ ಬಗ್ಗೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮಾತ್ರವಲ್ಲ ಪ್ರೇಕ್ಷಕರು ಕೂಡ ಬಹಳ ಕುತೂಹಲ ಇಟ್ಟುಕೊಂಡಿದ್ದರು. ಆದರೆ ಎಲ್ಲರ ಕುತೂಹಲಕ್ಕೆ ತಣ್ಣೀರೆರೆಚಿದ '....ರೆ' ಈ ವಾರ ಮುಖ್ಯ ಚಿತ್ರಮಂದಿರ ನರ್ತಕಿಯಿಂದ ಎತ್ತಂಗಡಿಯಾಗುತ್ತಿದೆ.

ಬೆಂಗಳೂರಿನ 'ನರ್ತಕಿ' ಚಿತ್ರಮಂದಿರ ಸೇರಿದಂತೆ ಇತರೆ ಎಲ್ಲಾ ಕಡೆ ಚಿತ್ರಮಂದಿರಗಳಲ್ಲಿ ಮಾರ್ಚ್ 4ರಂದು '..ರೆ' ಸಿನಿಮಾ ತೆರೆ ಕಂಡಿತ್ತು. [ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'..... ]ಆದರೆ ಈ ವಾರ ನರ್ತಕಿ ಚಿತ್ರಮಂದಿರದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ತೆರೆ ಕಾಣುತ್ತಿದೆ.

'Simplag Innond Love Story' to replace 'Re' in Narthaki Theater

'...ರೆ' ಜಾಗವನ್ನು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಅವರ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಆಕ್ರಮಿಸಿಕೊಂಡಿದ್ದು, ನರ್ತಕಿಯಿಂದ ದೇಸಾಯಿ ಅವರ '...ರೆ' ಎತ್ತಂಗಡಿಯಾಗಿದೆ.

ಕಾರಣವೇನೆಂದು ಕೇಳಿದರೆ, ಪ್ರೇಕ್ಷಕರ ಕೊರತೆ ಎನ್ನುತ್ತಾರೆ ಥಿಯೇಟರ್ ಮಾಲಿಕರು. ಚಿತ್ರ ಬಿಡುಗಡೆ ಆದ ದಿನದಿಂದ ಹಲವಾರು ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದ ಪರಿಣಾಮ ಹಲವಾರು ಚಿತ್ರಮಂದಿರಗಳಿಂದ '...ರೆ' ಸಿನಿಮಾ ಗೇಟ್ ಪಾಸ್ ಪಡೆದುಕೊಂಡಿದೆ.[ಮಾರ್ಚ್ 11ಕ್ಕೆ ಸಿಂಪಲ್ ಸುನಿಯ ಮತ್ತೊಂದು ಹಣೆಬರಹದ ಸಾಲು]

'Simplag Innond Love Story' to replace 'Re' in Narthaki Theater

ನಿರ್ದೇಶಕ ಸಿಂಪಲ್ ಸುನಿ ಅವರಿಗೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾವನ್ನು 'ಅನುಪಮ' ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೆಂದು ಭಾರಿ ಆಸೆ ಇತ್ತು. ಅದಕ್ಕೆ ಕಾರಣವೂ ಇದೆ ಅವರ ಮೊದಲ ಭಾಗ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಇದೇ ಚಿತ್ರಮಂದಿರದಲ್ಲಿ ತೆರೆ ಕಂಡಿತ್ತು.

ಆದರೆ ಸದ್ಯಕ್ಕೆ 'ಅನುಪಮ' ಚಿತ್ರಮಂದಿರದಲ್ಲಿ ವಿನೋದ್ ಪ್ರಭಾಕರ್ ಅವರ 'ಟೈಸನ್' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಅಲ್ಲಂತೂ ಖಂಡಿತ ಸಾಧ್ಯವಿಲ್ಲ. ಕೊನೆಗೆ ನರ್ತಕಿಯಲ್ಲಿಯೇ ಸಿಂಪಲ್ ಸುನಿ ಅವರ 'ಲವ್ ಸ್ಟೋರಿ' ಆರಂಭವಾಗುತ್ತಿದೆ.[ಪ್ರವೀಣ್-ಮೇಘನಾ ಗಾಂವ್ಕರ್ ಜೊತೆ ಡಿನ್ನರ್ ಮಾಡುವ ಆಸೆ ಇದ್ಯಾ?]

'Simplag Innond Love Story' to replace 'Re' in Narthaki Theater

'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟ ಪ್ರವೀಣ್, 'ಚಾರ್ ಮಿನಾರ್' ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ಮಾರ್ಚ್ 11 ರಂದು ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.

English summary
Kannada Movie 'Simplag Innond Love Story' will be replacing 'Re' in Narthaki Theater. 'Simplag Innond Love Story' all set to releasing on March 11th. The movie is directed by Simple Suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada