Just In
Don't Miss!
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- News
ಕರ್ನಾಟಕದಾದ್ಯಂತ ಚಳಿ ಇಳಿಕೆ, ತಾಪಮಾನ ಏರಿಕೆ
- Sports
ಐಎಸ್ಎಲ್: ಚೆನ್ನೈಯಿನ್ ವಿರುದ್ಧ ಒತ್ತಡವೇ ಇಲ್ಲವೆಂದ ಬಾಗನ್ ಕೋಚ್
- Automobiles
ಪ್ರತಿ ಚಾರ್ಜ್ 150 ಕಿ.ಮೀ ಮೈಲೇಜ್ ನೀಡುವ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಕೊಮಾಕಿ
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬರಹಗಾರರು ಬೇಕು, ಕಂಡಿಷನ್ಸ್ ಅಪ್ಲೈ: ನಿರ್ದೇಶಕ ಸುನಿ
ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಡಬಲ್ ಮೀನಿಂಗ್ ಡೈಲಾಗ್ ಟ್ರೆಂಡ್ ಮರು ಜೀವ ನೀಡಿದ್ದ ನಿರ್ದೇಶಕ ಸುನಿ ಈಗ ಅಂತಹ ಡೈಲಾಗ್ ಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ.
ಹೌದು, ಬಜಾರ್ ಚಿತ್ರದ ಮೂಲಕ ಧನ್ವಿರ್ ಎಂಬ ಯುವ ನಟನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದ ಸುನಿ, ಈಗ ಶರಣ್ ಜೊತೆಯಲ್ಲಿ ಅವತಾರ್ ಪುರುಷ ಎಂಬ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಇದೀಗ, ಸುನಿ ಕಡೆಯಿಂದ ಸಾರ್ವಜನಿಕ ಪ್ರಕಟಣೆಯೊಂದು ಬಂದಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕು, ಸ್ಕ್ರಿಪ್ಟ್ ಬರೆಯಬೇಕು, ಡೈಲಾಗ್ ಬರೆಯಬೇಕು, ಎಂಬ ಕನಸುಗಳನ್ನಿಟ್ಟು ಸಿಲಿಕಾನ್ ಸಿಟಿಗೆ ಬಂದಿರುವ ಪ್ರತಿಬೆಗಳಿಗೆ ಇಲ್ಲೊಂದು ಅವಕಾಶ ಹುಡುಕಿಕೊಂಡು ಬಂದಿದೆ.
ಶರಣ್, ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ
"ಕಥೆ ಮತ್ತು ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಬರೆಯುವಂತ ಬರಹಗಾರರು ಬೇಕು'' ಎಂದು ನಿರ್ದೇಶಕ ಸುನಿ ಪ್ರಕಟಣೆ ಮಾಡಿದ್ದಾರೆ. ಆದರೆ, ಅದಕ್ಕೆ ಕೆಲವು ಷರತ್ತುಗಳು ಅನ್ವಯ ಎಂದು ಕೂಡ ತಿಳಿಸಿದ್ದಾರೆ.
ಮುಂಬೈ ಓನರ್ ನೀತಾ ಅಂಬಾನಿ ಬಗ್ಗೆ ಆ ಒಂದು ಸೀಕ್ರೆಟ್ ತಿಳಿಯಬೇಕಂತೆ ಸುನಿ
ಕಾಮಿಡಿ ಪಂಚಿಂಗ್...
ಮಾಸ್ ಡೈಲಾಗ್ಸ್...
ಡಬ್ಬಲ್ ಮೀನಿಂಗ್...
ವಾಟ್ಸಪ್ ಫಾರ್ವಡ್..
ಪೋಲಿ ಡೈಲಾಗ್ಸ್ ಇವನ್ನೆಲ್ಲಾ ಬಿಟ್ಟು..
"ಕಥೆ ಮತ್ತು ವಸ್ತುಸ್ಥಿತಿ"ಯನ್ನು ಅರ್ಥ ಮಾಡಿಕೊಂಡು ಬರೆಯುವಂತ ಬರಹಗಾರರು ಬೇಕಾಗಿದ್ದಾರೆ.... ಎಂದು ಸುನಿ ಟ್ವಿಟ್ಟರ್ ನಲ್ಲಿ ಆಹ್ವಾನ ನೀಡಿದ್ದಾರೆ. ಆಸಕ್ತಿದಾರರು ಸುನಿ ಅವರನ್ನ ಸಂಪರ್ಕಿಸಬಹುದು ಅಥವಾ ಅವರ ಟ್ವಿಟ್ಟರ್ ಖಾತೆಯಲ್ಲಿ ಒಮ್ಮೆ ಪರಿಶೀಲಿಸಬಹುದು.