»   » ಸುನಿಯ 'ಆಪರೇಷನ್ ಅಲಮೇಲಮ್ಮ' ಪೋಸ್ಟರ್ ಹೇಗಿದೆ ಅಂದ್ರೆ.!

ಸುನಿಯ 'ಆಪರೇಷನ್ ಅಲಮೇಲಮ್ಮ' ಪೋಸ್ಟರ್ ಹೇಗಿದೆ ಅಂದ್ರೆ.!

Posted By:
Subscribe to Filmibeat Kannada

ಚಿಕ್ಕ-ಚಿಕ್ಕ ವಿಷಯಗಳನ್ನು ಇಟ್ಟುಕೊಂಡು ರಸವತ್ತಾದ ಹಾಸ್ಯದ ಜೊತೆಗೆ ಪ್ರೇಕ್ಷಕರಿಗೆ ಭೂರಿ ಭೋಜನ ಒದಗಿಸುವುದರಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರದು ಎತ್ತಿದ ಕೈ. ಇದಕ್ಕೆಲ್ಲಾ ಉತ್ತಮ ನಿದರ್ಶನ ಅಂದ್ರೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಮತ್ತು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರಗಳು.

ಇದೀಗ ಈ ಎರಡು ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ 'ಆಪರೇಷನ್ ಅಲಮೇಲಮ್ಮ'. ಈಗಾಗಲೇ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆ ಆಗಿವೆ.[ಅಲಮೇಲಮ್ಮನಿಗೆ ಆಪರೇಶನ್ ಮಾಡಲು ಹೊರಟ ಸಿಂಪಲ್ ಸುನಿ]

Simple Suni's 'Operation Alamelamma' first look posters released

ಅಪಹರಣದ ಕುರಿತಾದ ಕಥೆಯನ್ನು ಹೊಂದಿರುವ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಹಾಸ್ಯದ ಮೂಲಕ ಕೊಂಚ ರೋಚಕತೆಯ ಟಚ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕಿರುತೆರೆ ನಟ ಮನೀಷ್ ರಿಷಿ ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದು, ಇವರಿಗೆ ನಾಯಕಿಯಾಗಿ 'ಯು-ಟರ್ನ್' ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಮಿಂಚಿದ್ದಾರೆ.

Simple Suni's 'Operation Alamelamma' first look posters released

ನಟಿ ಶ್ರದ್ಧಾ ಶ್ರೀನಾಥ್ ಅವರು ಈ ಚಿತ್ರದಲ್ಲಿ ಶಾಲಾ ಶಿಕ್ಷಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಸುಮಾರು 15 ದಿನಗಳ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಶಾಲೆಯ ಸುತ್ತ-ಮುತ್ತಲಿನ ಭಾಗದ ಚಿತ್ರೀಕರಣ ಮಾಡುತ್ತಿದ್ದಾರೆ.

ಬಹುತೇಕ ಹೊಸಬರ ತಂಡವನ್ನು ಕಟ್ಟಿಕೊಂಡು ಚಿತ್ರೀಕರಣ ನಡೆಸುತ್ತಿರುವ ನಿರ್ದೇಶಕ ಸುನಿ ಅವರು ಆಗಸ್ಟ್ ತಿಂಗಳಿನಲ್ಲಿ ಹಾಡುಗಳ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಅಮೆರ್ಜ್ ಅವರು ಬಂಡವಾಳ ಹೂಡುತ್ತಿದ್ದಾರೆ.

English summary
Kannada Movie 'Operation Alamelamma' first look posters released. Kannada Actor Manish Rishi, Actress Shraddha Srinath in the lead role. The movie is directed by Simple Suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada