For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಫಸ್ಟ್ ಲುಕ್ ಕುರಿತು ಸುನಿ ಬಣ್ಣಿಸಿದ ರೀತಿ ವಿಶೇಷ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಡಿ ಬಾಸ್ ಫಸ್ಟ್ ಲುಕ್ ಎಂಟ್ರಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ, ಸ್ಯಾಂಡಲ್ವುಡ್ ತಾರೆಯರು ಕೂಡ ರಾಬರ್ಟ್ ಗೆ ಶುಭಕೋರಿದ್ದಾರೆ.

  ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಅನೂಪ್ ಭಂಡಾರಿ, ನಿರ್ದೇಶಕ ಎಪಿ ಅರ್ಜುನ್, ನಿರ್ಮಾಪಕಿ ಶೈಲಜಾ ನಾಗ್, ನಿರ್ದೇಶಕ ಚೇತನ್ ಕುಮಾರ್ ಸೇರಿದಂತೆ ಹಲವರು ರಾಬರ್ಟ್ ಮೋಷನ್ ಪೋಸ್ಟರ್ ವೆಲ್ ಕಮ್ ಮಾಡಿದ್ದಾರೆ.

  'ರಾಬರ್ಟ್' ಫಸ್ಟ್ ಲುಕ್ ಆರ್ಭಟ: ಇಲ್ಲೂ ಇದೆ ಆ 'ಸಾಮಾನ್ಯ ಅಂಶ''ರಾಬರ್ಟ್' ಫಸ್ಟ್ ಲುಕ್ ಆರ್ಭಟ: ಇಲ್ಲೂ ಇದೆ ಆ 'ಸಾಮಾನ್ಯ ಅಂಶ'

  ಈ ಮಧ್ಯೆ ಸಿಂಪಲ್ ಡೈರೆಕ್ಟರ್ ಸುನಿ ವಿಶೇಷವಾಗಿ ರಾಬರ್ಟ್ ಗೆ ಜೈ ಎಂದಿದ್ದಾರೆ. ತಮ್ಮದೇ ಕೆಲವು ಸಾಲುಗಳನ್ನು ಬರೆದು, ಗಮನ ಸೆಳೆದಿದ್ದಾರೆ. ''ಉದ್ದ ಆರಡಿ,,,,ಹೃದಯ ಮೆಲೋಡಿ,,,ಕೋಪ ಕಾಲಡಿ,,,ಬಾ ಬಾ ಬಾ ,,,ನಾ ರೆಡಿ,,,ಶ್ಯೂರ್ ಶಾಟ್ ಬರೆದಿಡಿ..'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸುನಿ ಅವರ ಈ ಸಾಲುಗಳನ್ನು ನೋಡಿದ ದರ್ಶನ್ ಅಭಿಮಾನಿಗಳು, ಥ್ರಿಲ್ ಆಗಿದ್ದು, ಇದು ರಾಬರ್ಟ್ ಚಿತ್ರದಲ್ಲಿ ಬರುವ ಹಾಡು ಇರಬಹುದು ಎಂದು ಊಹಿಸುತ್ತಿದ್ದಾರೆ. ಅಭಿಮಾನಿಗಳ ಈ ಊಹೆಯಲ್ಲಿ ಸತ್ಯ ಇದ್ದರೂ ಇರಬಹುದು.

  ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇದೆ. ಆಶಾ ಭಟ್ ನಾಯಕಿಯಾಗಿದ್ದಾರೆ. ಜಗಪತಿ ಬಾಬು, ರವಿಕಿಶನ್ ಮತ್ತು ವಿನೋದ್ ಪ್ರಭಾಕರ್ ತಾರಬಳಗದಲ್ಲಿದ್ದಾರೆ. ವಾರಾಣಸಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ರಾಬರ್ಟ್ ಸದ್ಯದಲ್ಲೇ ಕುಂಬಳಕಾಯಿ ಹೊಡೆಯುವ ತಯಾರಿಯಲ್ಲಿದೆ.

  English summary
  Kannada Director Simple Suni has appreciate Robert first look motion poster. the movie starring challenging star darshan in lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X