For Quick Alerts
  ALLOW NOTIFICATIONS  
  For Daily Alerts

  ಪಿ.ಟಿ ಉಷಾ ಬಯೋಪಿಕ್ ನಲ್ಲಿ ಸಿಂಧು ಲೋಕನಾಥ್.?

  By Bharath Kumar
  |
  ಹೀಗೊಂದು ದಿನ' ಏನಗುತ್ತೆ?, ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ | Filmibeat Kannada

  ಕನ್ನಡದಲ್ಲಿ ಕ್ರೀಡಾ ಆಧಾರಿತ ಸಿನಿಮಾ ಬರುವುದು ಅಪರೂಪ ಮತ್ತು ವಿರಳ. ಎಲ್ಲೋ ಒಂದೊಂದು ಸಿನಿಮಾಗಳು ಸ್ಪೋರ್ಟ್ಸ್ ವ್ಯಕ್ತಿಗಳ ಕುರಿತಾಗಿ ಸಿದ್ದವಾಗುತ್ತೆ. ಇದೀಗ ಕನ್ನಡ ನಟಿ ಸಿಂಧು ಲೋಕನಾಥ್ ಭಾರತದ ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಅವರ ಬಯೋಪಿಕ್ ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

  ಸಿಂಧು ಲೋಕನಾಥ್ ಮೂಲತಃ ಕ್ರೀಡಾಪಟುವಾಗಿದ್ದು, ಕಾಲೇಜು ದಿನಗಳಲ್ಲಿ ಅತ್ಯುತ್ತಮ ಅಥ್ಲೀಟ್ ಆಗಿದ್ದರು. ಹೀಗಾಗಿ, ಚಿತ್ರರಂಗದಲ್ಲಿ ಯಾವ ಕನಸಿನ ಪಾತ್ರ ನಿರ್ವಹಿಸಬೇಕು ಎಂದು ಕೇಳಿದ್ದಕ್ಕೆ ''ನನಗೆ ಪಿ.ಟಿ ಉಷಾ ಅವರ ಬಗ್ಗೆ ಸಿನಿಮಾ ಮಾಡುವ ಅಸೆ ಇದೆ. ನಾನು ಕೂಡ ಅಥ್ಲೀಟ್ ಆಗಿರುವುದರಿಂದ ಅವರ ಪಾತ್ರದಲ್ಲಿ ನಟಿಸುವ ಕನಸಿದೆ. ಕನ್ನಡದಲ್ಲಿ ಯಾರಾದ್ರೂ ಅವರ ಬಗ್ಗೆ ಸಿನಿಮಾ ಮಾಡಲು ಮುಂದಾದ್ರೆ, ಖಂಡಿತವಾಗಿ ನಾನು ಅಭಿನಯಿಸುತ್ತೇನೆ'' ಎಂದು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

  ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್

  ಇನ್ನು ಇದೇ ವೇಳೆ ಮಾತನಾಡಿದ ನಟಿ ಸಿಂಧು ''ಒಂದು ವೇಳೆ ನಾನು ಸಿನಿಮಾ ನಟಿ ಆಗಿರಲಿಲ್ಲ ಅಂದ್ರೆ ಖಂಡಿತವಾಗಿಯೂ ಅಥ್ಲೀಟ್ ಆಗುತ್ತಿದ್ದೆ. ನನಗೆ ಭರವಸೆ ಇದೆ, ನಾನು ಸಿನಿಮಾ ಜೀವನದಿಂದ ನಿವೃತ್ತಿ ಆಗುವಷ್ಟರಲ್ಲಿ ಈ ಪಾತ್ರ ನಿಭಾಯಿಸುವ ಅವಕಾಶ ಸಿಗಬಹುದು'' ಎಂದು ತಮ್ಮ ಆಸೆಯನ್ನ ಹೊರಹಾಕಿದ್ದಾರೆ.

  ಸದ್ಯ, ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ವಿಕ್ರಮ್ ಯೋಗಾನಂದ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮಾರ್ಚ್ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಸಿಂಧು ಲೋಕನಾಥ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  'ಹೀಗೊಂದು ದಿನ' ಏನಾಗುತ್ತೆ? ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ'ಹೀಗೊಂದು ದಿನ' ಏನಾಗುತ್ತೆ? ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ

  ಇನ್ನುಳಿದಂತೆ ಬಾಲಿವುಡ್ ನಲ್ಲಿ ಪಿಟಿ ಉಷಾ ಅವರ ಬಗ್ಗೆ ಬಯೋಪಿಕ್ ಸಿನಿಮಾ ಮಾಡಲು ತಯಾರಿ ನಡೆಸಲಾಗುತ್ತಿದೆ. ನಟಿ ಸೋನಮ್ ಕಪೂರ್ ಪಿಟಿ ಉಷಾ ಅವರ ಜೀವನ ಆಧಾರಿತ ಚಿತ್ರದಲ್ಲಿ ನಟಿಸಬೇಕು ಎಂದು ಹೇಳಿಕೊಂಡಿದ್ದರು. ಮತ್ತೊಂದೆಡೆ ಪ್ರಿಯಾಂಕಾ ಚೋಪ್ರಾ ಕೂಡ ಈ ಪ್ರಾಜೆಕ್ಟ್ ನಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

  English summary
  kannada actress sindhu lokanath wishes a biopic to be made on Indian track and field athlete P.T Usha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X