»   » ಸಿಂಧು ಮೆನನ್ : ಯಾರೇ ನೀ ಹುಡುಗಿ?

ಸಿಂಧು ಮೆನನ್ : ಯಾರೇ ನೀ ಹುಡುಗಿ?

Posted By: Staff
Subscribe to Filmibeat Kannada
Sindhu Menon
ಬೆಂಗಳೂರು ಮೂಲದ ಈ ಹುಡುಗಿಗೆ ಅದೃಷ್ಟವಿಲ್ಲ ಅನ್ನುವಂತಿಲ್ಲ. ಯಾಕೆಂದರೆ ಇತರೆ ಭಾಷೆಗಳಲ್ಲಿ ಅವರು ಗೆದ್ದಿದ್ದಾರೆ. ಎಲ್ಲಿ ಗೆದ್ದರೂ, ಕನ್ನಡ ಪ್ರೇಕ್ಷಕರು ಮಾತ್ರ ಸದ್ಯಕ್ಕೆ ಒಪ್ಪಿಲ್ಲ. 'ಸಿಂಧು ಮೆನನ್ ಚೆನ್ನಾಗಿದ್ದಾರೆ.. ಚೆನ್ನಾಗಿ ನಟಿಸುತ್ತಾರೆ' ಎಂದು ಹೇಳುತ್ತಾರೆಯೇ ಹೊರತು,ಚಿತ್ರಗಳ ಒಪ್ಪುತ್ತಿಲ್ಲ. ಆದರೂ ಸಿಂಧು ಮೆನನ್ ಉತ್ಸಾಹ ಕಳೆದುಕೊಂಡಿಲ್ಲ.

ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕಣ್ಮರೆಯಾಗಿದ್ದ ಸಿಂಧು ಮೆನನ್, ಈಗ ಮತ್ತೆ ತವರಿಗೆ ಮರಳಿದ್ದಾರೆ. 'ಯಾರೇ ನೀ ಹುಡುಗಿ?' ಚಿತ್ರದಲ್ಲಿ ಅವರು ಅಭಿನಯಿಸುವುದರ ಮುಖಾಂತರ, ಇನ್ನೊಮ್ಮೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಚಿತ್ರದ ನಾಯಕ ಅನಿರುದ್ಧ. ಸತತ ಸೋಲುಗಳ ಮಧ್ಯೆ ಗೆಲುವಿಗಾಗಿ ಹಂಬಲಿಸುತ್ತಿರುವ ಅನಿರುದ್ಧ ಮತ್ತು ಸ್ಯಾಂಡಲ್ ವುಡ್ ನಲ್ಲಿ ಕಾಲೂರಲು ಕಸರತ್ತು ನಡೆಸಿರುವ ಸಿಂಧು ಮೆನನ್ ಗೆ ಈ ಚಿತ್ರ ನಿಜಕ್ಕೂ ಸವಾಲು.

ಈಗಾಗಲೇ 13ಮಲಯಾಳಂ, 8ಕನ್ನಡ, 6ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಸಿಂಧು, ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ. 'ಶ್ರೀಮಾನ್ ಶ್ರೀಮತಿ' ಮತ್ತು 'ಶ್ರೀ ಹೃದಯಂ' ಅವರಿಗೆ ಖ್ಯಾತಿ ತಂದು ಕೊಟ್ಟ ಧಾರಾವಾಹಿಗಳು. ಈ ಮಧ್ಯೆ ಆಂಧ್ರದಲ್ಲಿ ಬಿಡುಗಡೆಯಾದ 'ಚಂದಮಾಮ'ಚಿತ್ರ ಬಾಕ್ಸಾಫೀಸಲ್ಲಿ ಗೆದ್ದ ಖುಷಿ, ಸಿಂಧು ಜೊತೆಯಲ್ಲಿದೆ.

ಬಣ್ಣದ ಬದುಕಿನ ಸೆಳೆತದ ಮಧ್ಯೆಯೂ ಅವರು ಓದುವುದನ್ನು ನಿಲ್ಲಿಸಿಲ್ಲ. ದೂರ ಶಿಕ್ಷಣದ ಮುಖಾಂತರ ಅವರ ವಿದ್ಯಾಭ್ಯಾಸ ಮುಂದುವರೆದಿದೆ. ಮತ್ತೊಂದು ಕಡೆ ಭರತನಾಟ್ಯ ಸೇರಿದಂತೆ ಅವರ ಕಲಿಕೆಯ ವ್ಯಾಪ್ತಿ ಹಿರಿದಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada