For Quick Alerts
  ALLOW NOTIFICATIONS  
  For Daily Alerts

  ಕೃತಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್

  |

  ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಹೇಮಂತ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕೃತಿಕಾ ಎನ್ನುವವರ ಜೊತೆ ಬುಧವಾರ (ಆಗಸ್ಟ್ 11) ರಂದು ಹೊಸ ಜೀವನ ಆರಂಭಿಸಿದರು. ಬೆಂಗಳೂರಿನ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೃತಿಕಾ ಜೊತೆ ಸಪ್ತಪದಿ ತುಳಿದಿದ್ದಾರೆ ಎಂದು ತಿಳಿದು ಬಂದಿದೆ.

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್

  ಕೃತಿಕಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ Nephrologist ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿ ನಡೆದ ಹೇಮಂತ್ ಅವರ ವಿವಾಹ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಭಾಗವಹಿಸಿ ಶುಭಕೋರಿದ್ದಾರೆ.

  ಮಗಳ ಮದುವೆಗೆ ಭಾರಿ ಹಣ ಖರ್ಚು ಮಾಡಿದ ನಿರ್ದೇಶಕ ಶಂಕರ್ಮಗಳ ಮದುವೆಗೆ ಭಾರಿ ಹಣ ಖರ್ಚು ಮಾಡಿದ ನಿರ್ದೇಶಕ ಶಂಕರ್

  ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ಉಪೇಂದ್ರ, ದರ್ಶನ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಸ್ಟಾರ್ ನಟರ ಚಿತ್ರಗಳಲ್ಲಿ ಹೇಮಂತ್ ಹಾಡಿದ್ದಾರೆ. ಹೇಮಂತ್ ವೃತ್ತಿ ಜೀವನದಲ್ಲಿ ಹಲವು ಹಿಟ್ ಗೀತೆಗಳಿವೆ. ವಿ ಮನೋಹರ್, ಗುರುಕಿರಣ್, ಮನೋಮೂರ್ತಿ, ಅರ್ಜುನ್ ಜನ್ಯ, ಶ್ರೀಧರ್ ವಿ ಸಂಭ್ರಮ್, ಹಂಸಲೇಖ, ಸಾಧು ಕೋಕಿಲಾ ಅಂತಹ ಸಂಗೀತ ನಿರ್ದೇಶಕದ ಹಾಡುಗಳಿಗೆ ಹೇಮಂತ್ ಧ್ವನಿಯಾಗಿದ್ದಾರೆ.

  ನಾದಬ್ರಹ್ಮ ಹಂಸಲೇಖ ಅವರ ಬಳಿ ಸಹಾಯಕರಾಗಿ ಕೆಲಸ ಆರಂಭಿಸಿದ ಹೇಮಂತ್, 2000ನೇ ವರ್ಷದಲ್ಲಿ ಚಿತ್ರರಂಗಕ್ಕೆ ಅಧಿಕೃತವಾಗಿ ಪ್ರವೇಶಿಸಿದರು. ಉಪೇಂದ್ರ-ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಪ್ರೀತ್ಸೆ' ಸಿನಿಮಾದಲ್ಲಿ ಮೊದಲ ಸಲ ಹಾಡಿದರು. ಚಿತ್ರದ ಟೈಟಲ್ ಹಾಡು 'ಪ್ರೀತ್ಸೆ ಪ್ರೀತ್ಸೆ.....' ಉದಿತ್ ನಾರಾಯಣ್ ಹಾಡಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಉದಿತ್ ಲಭ್ಯವಾಗದ ಕಾರಣ ಹೇಮಂತ್ ಅವರಿಂದ ಈ ಹಾಡಿ ಹಾಡಿಸಿದ್ದರು ಹಂಸಲೇಖ. ಪ್ರೀತ್ಸೆ ಸಾಂಗ್ ದೊಡ್ಡ ಹಿಟ್ ಆಯಿತು. ಹೇಮಂತ್ ಗಾಯಕರಾಗಿ ಗುರುತಿಸಿಕೊಂಡರು.

  Singer Hemanth Ties Knot with Krutika

  ವಿಶೇಷವಾಗಿ ಹೇಮಂತ್ ಅಂದ್ರೆ ನಟ ದರ್ಶನ್ ಅವರಿಗೆ ಹೆಚ್ಚು ಇಷ್ಟ. ಜಗ್ಗುದಾದ, ಸಂಗೊಳ್ಳಿ ರಾಯಣ್ಣ, ಮಿಸ್ಟರ್ ಐರಾವತ, ಬುಲ್ ಬುಲ್ ಸಿನಿಮಾಗಳಲ್ಲಿ ಹೇಮಂತ್ ಹಾಡಿದ್ದು, ದರ್ಶನ್ ಅವರ ವಾಯ್ಸ್ ಎನ್ನುವಷ್ಟು ಮೋಡಿ ಮಾಡಿದ್ದಾರೆ.

  English summary
  Kannada Playback singer Hemanth Ties Knot with Kriti at bangalore today (august 11).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X