»   » ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ

ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ

By: ಗೀತಾ
Subscribe to Filmibeat Kannada

ಹಲವು ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಗಾಯಕ ಎನ್.ಎಲ್. ಶಾಸ್ತ್ರಿಯವರು ಇಹಲೋಕ ತ್ಯಜಿಸಿದ್ದಾರೆ. ತಮ್ಮ ವಿಶಿಷ್ಟ ಕಂಠದಿಂದಲೇ ಸಂಗೀತ ಪ್ರಿಯರಲ್ಲಿ ಮನೆ ಮಾಡಿದ್ದ ಎಲ್.ಎನ್.ಶಾಸ್ತ್ರಿ (ಚೈತನ್ಯ) ಅವರು ತಮ್ಮ ಸುಶ್ರಾವ್ಯ ಗೀತೆಗಳಿಂದಲ್ಲದೇ ಸಂಗೀತ ನಿರ್ದೇಶನದಿಂದಲೂ ತಮ್ಮದೇ ವರ್ಚಸ್ಸನ್ನು ರೂಪಿಸಿಕೊಂಡಿದ್ದರು.

L. N shastri passed away | Filmibeat Kannada

1996ರಲ್ಲಿ ತೆರೆಕಂಡ ಕಾಶೀನಾಥ್ ಅಭಿನಯದ 'ಅಜಗಜಾಂತರ' ಚಿತ್ರದಿಂದ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಶಾಸ್ತ್ರಿಯವರು ಇದುವರೆಗೂ 3000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವುದಲ್ಲದೆ 25 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.

Singer LN Shastri dies after battling Cancer

ಕನ್ನಡದ ಹೆಸರಾಂತ ಗಾಯಕ ಎಲ್ ಎನ್ ಶಾಸ್ತ್ರಿ ವಿಧಿವಶ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿ ಟಿ.ಎಸ್.ನಾಗಾಭರಣ ನಿರ್ದೇಶಿಸಿದ್ದ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವ..' ಗೀತೆಯಿಂದಲೇ ಇಂದಿಗೂ ಪ್ರಸಿದ್ಧಿ ಹೊಂದಿರುವ ಲ.ನಾ.ಶಾಸ್ತ್ರಿಗೆ ಆ ಗೀತೆಗಾಗಿ ರಾಜ್ಯ ಸರ್ಕಾರದಿಂದ ಶ್ರೇಷ್ಠ ಗಾಯಕ ಪ್ರಶಸ್ತಿಗೆ ಭಾಜನರಾದರು.

ನಾದಬ್ರಹ್ಮ ಹಂಸಲೇಖ ಹಾಗೂ ವಿ.ಮನೋಹರ್ ಅವರ ಬಳಿ ಶಿಷ್ಯ ವೃತ್ತಿಯನ್ನೂ ಮಾಡಿದ್ದ ಎಲ್.ಎನ್.ಶಾಸ್ತ್ರಿಯವರು 'ಕನಸಲ್ಲೂ ನೀನೇ ಮನಸಲ್ಲೂ ನೀನೇ' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವಾತಂತ್ರ್ಯ ಸಂಗೀತ ನಿರ್ದೇಶಕರಾದರು.

'ರವಿಮಾಮ', 'ಆಂಟಿ ಪ್ರೀತ್ಸೆ', 'ಹಾಲು ಸಕ್ಕರೆ', 'ನಿನಗೋಸ್ಕರ', 'ಬಳ್ಳಾರಿ ನಾಗ', 'ಡೆಡ್ಲಿ -2', 'ಫ್ಲಾಪ್', 'ಮೆಲೋಡಿ' ಮುಂತಾದ ಗೀತೆಗಳಿಗೆ ಸಂಗೀತವನ್ನು ನೀಡಿದ್ದಾರೆ. ಎಲ್.ಎನ್.ಶಾಸ್ತ್ರಿಯವರ ನಿಧನಕ್ಕೆ ನಾದ ಬ್ರಹ್ಮ ಹಂಸಲೇಖ, ವಿ.ಮನೋಹರ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಸಂತಾಪವನ್ನು ಸೂಚಿಸಿದ್ದಾರೆ.

English summary
It's a huge loss for Kannada film industry, Popular Singer and music composer L N Shastri passed away today (August 30).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada