»   » ಟಾಲಿವುಡ್ ನಲ್ಲಿ ಅಕೌಂಟ್ ಓಪನ್ ಮಾಡಿದ ರಘು ದೀಕ್ಷಿತ್

ಟಾಲಿವುಡ್ ನಲ್ಲಿ ಅಕೌಂಟ್ ಓಪನ್ ಮಾಡಿದ ರಘು ದೀಕ್ಷಿತ್

Posted By:
Subscribe to Filmibeat Kannada

''ನಿನ್ನ ಪೂಜೆಗೆ ಬಂದೆ ಮಹಾದೇಶ್ವರ...'' ಅಂತ ಭಕ್ತಿಗೀತೆಗೂ ರಾಕ್ ಸ್ಟೈಲ್ ಟಚ್ ಕೊಟ್ಟು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಗಾಯಕ ಕಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್.

ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ಸಂಗೀತ ಸಂಯೋಜಿಸಿ ಸೈ ಅನಿಸಿಕೊಂಡಿರುವ ರಘು ದೀಕ್ಷಿತ್ ವಿಶ್ವದಾದ್ಯಂತ ತಮ್ಮ ಆಲ್ಬಂಗಳಿಂದ ಜನಪ್ರಿಯತೆ ಪಡೆದಿದ್ದಾರೆ. ಇಂತಿಪ್ಪ ರಘುದೀಕ್ಷಿತ್ ಇದೀಗ ಟಾಲಿವುಡ್ ನ ಹಿಟ್ ಡೈರೆಕ್ಟರ್ ತ್ರಿವಿಕ್ರಮ್ ಕಣ್ಣಿಗೆ ಬಿದ್ದಿದ್ದಾರೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗಾಗಿ ತ್ರಿವಿಕ್ರಮ್ ಹೊಸ ಸಿನಿಮಾ ಮಾಡ್ತಿರೋದು ನಿಮ್ಗೆಲ್ಲಾ ಗೊತ್ತು. ಹಾಗೆ, ಅದೇ ಚಿತ್ರದಲ್ಲಿ ಕನ್ನಡಿಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ['ಉಪ್ಪಿಟ್ಟು' ಬಿಟ್ಟು ಆಂಧ್ರ ಮೀಲ್ಸ್ ಗೆ ಕೈಹಾಕಿದ ಉಪೇಂದ್ರ]

Singer Raghu Dixit croons for Allu Arjun starrer Son of Satyamurthy

ಇದೀಗ ಇದೇ ಅಡ್ಡಕ್ಕೆ ಉಪ್ಪಿ ಜೊತೆ ಮತ್ತೊಬ್ಬ ಕನ್ನಡಿಗ, ಅಂದ್ರೆ ರಘು ದೀಕ್ಷಿತ್ ಎಂಟ್ರಿಕೊಟ್ಟಿದ್ದಾರೆ. ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾ ''ಸನ್ ಆಫ್ ಸತ್ಯಮೂರ್ತಿ'' ಚಿತ್ರದ ಸೂಪರ್ ಸಾಂಗ್ ಗೆ ರಘು ದೀಕ್ಷಿತ್ ದನಿಯಾಗಿದ್ದಾರೆ.

ಮ್ಯೂಸಿಕ್ ಮಾಂತ್ರಿಕ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆಯಲ್ಲಿ ರಘು ದೀಕ್ಷಿತ್ ಗಾನ ಸುಧೆ ಹರಿಸಿದ್ದಾರೆ. ಈ ಬಗ್ಗೆ ತಮ್ಮೆಲ್ಲಾ ಅಭಿಮಾನಿಗಳೊಂದಿಗೆ ಟ್ವಿಟ್ಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಅಲ್ಲಿಗೆ, ಟಾಲಿವುಡ್ ಅಂಗಳದಲ್ಲೂ ಕನ್ನಡಿಗ ರಘು ದೀಕ್ಷಿತ್ ಖಾತೆ ಓಪನ್ ಆಗಿದೆ. ಇನ್ಮುಂದೆ ತೆಲುಗು ಸಿನಿ ಅಂಗಳದಲ್ಲೂ ಅವರದ್ದೇ ಹವಾ ಕ್ರಿಯೇಟ್ ಆದರೆ, ಅವರ ಅಭಿಮಾನಿಗಳಿಗೆ ಖುಷಿ.

English summary
Rockstar Raghu Dixit has bagged an opportunity to sing in the upcoming movie of Trivikram-Allu Arjun's 'Son of Satyamurthy'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada