»   » ಪತ್ನಿಯ ಪುರುಷತ್ವದ ಆರೋಪ,ರಾಜೇಶ್ ಕೃಷ್ಣನ್ ತಿರುಗೇಟು

ಪತ್ನಿಯ ಪುರುಷತ್ವದ ಆರೋಪ,ರಾಜೇಶ್ ಕೃಷ್ಣನ್ ತಿರುಗೇಟು

Posted By:
Subscribe to Filmibeat Kannada

ಪತ್ನಿ ರಮ್ಯಾ ವಸಿಷ್ಠ ಅವರು ವಿವಾಹ ರದ್ದತಿ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಸುಮಾರು ಇಪ್ಪತ್ತು ದಿನದ ನಂತರ ಗಾಯಕ ರಾಜೇಶ್‌ ಕೃಷ್ಣನ್‌ ನ್ಯಾಯಲಯದ ಮುಂದೆ ಹಾಜರಾಗಿದ್ದಾರೆ.

ನನ್ನ ಪತಿ ರಾಜೇಶ್‌ ಕೃಷ್ಣನ್‌ ಅವರಿಗೆ ಪುರುಷತ್ವದ ಸಮಸ್ಯೆಯಿದೆ. ಈ ವಿಚಾರವನ್ನು ಮದುವೆಯಾಗುವ ಸಮಯದಲ್ಲಿ ನನತೆ ತಿಳಿಸಿಲ್ಲ. ಅವರೊಂದಿಗಿನ ವಿವಾಹ ಮಾನ್ಯತೆಯನ್ನು ರದ್ದು ಪಡಿಸುವಂತೆ ಕೋರಿ ರಾಜೇಶ್ ಕೃಷ್ಣನ್‌ ಅವರ ಮೂರನೇ ಪತ್ನಿ ರಮ್ಯಾ ವಸಿಷ್ಠ ಕೌಟುಂಬಿಕ ನ್ಯಾಯಾಲಯಕ್ಕೆ ಫೆಬ್ರವರಿ 5ರಂದು ಅರ್ಜಿ ಸಲ್ಲಿಸಿದ್ದರು.

ದೂರಿನ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ರಮ್ಯಾ ಆರೋಪಗಳಿಗೆ ಆಕ್ಷೇಪಣೆ ಸಲ್ಲಿಸುವುದಾದರೆ ಸಲ್ಲಿಸಬಹುದು ಎಂದು ರಾಜೇಶ್ ಕೃಷ್ಣನ್‌ ಅವರಿಗೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.

2011ರ ನವೆಂಬರ್ 7ರಂದು ರಮ್ಯಾ ವಸಿಷ್ಠ ಅವರನ್ನು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ರಾಜೇಶ್ ಕೃಷ್ಣನ್‌ ವರಿಸಿದ್ದರು. ರಮ್ಯಾ ವಸಿಷ್ಠ ಅವರು ಕಿರುತೆರೆ ನಟಿ ಕಮ್ ಗಾಯಕಿ, ಈಟಿವಿ ಕನ್ನಡ ವಾಹಿಹಿಯ ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಮ್ಯಾ, ರಾಜೇಶ್ ಕೃಷ್ಣನ್‌ ಜೊತೆಯಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೇಶ್ ಕೃಷ್ಣನ್‌

ಕೌಟುಂಬಿಕ ನ್ಯಾಯಲಯದ ಆದೇಶದಂತೆ ಕೋರ್ಟಿಗೆ ಹಾಜರಾದ ರಾಜೇಶ್, ನನ್ನ ಹೆಂಡತಿ ಮಾಡಿದ ಆರೋಪ ಸತ್ಯಕ್ಕೆ ದೂರ ನನಗೆ ಪುರುಷತ್ವದ ಸಮಸ್ಯೆಯಿಲ್ಲ.

ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೇಶ್ ಕೃಷ್ಣನ್‌

ನನ್ನ ಪತ್ನಿ ಮಾಡಿದ ಆರೋಪವನ್ನು ನ್ಯಾಯಲಯ ಮನ್ನಿಸಬಾರದು. ನನಗೆ ಪುರುಷತ್ವದ ಸಮಸ್ಯೆ ಇದ್ದಿದ್ದರೆ ಮದುವೆಗೆ ಮುನ್ನವೇ ಆಕೆಗೆ ತಿಳಿಸುತ್ತಿದ್ದೆ ಎಂದು ರಾಜೇಶ್ ಆಕ್ಷೇಪಣೆ ಸಲ್ಲಿಸಿದ್ದಾರೆ.

ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೇಶ್ ಕೃಷ್ಣನ್‌

ರಾಜೇಶ್ ಕೃಷ್ಣನ್‌ ಆಕ್ಷೇಪಣೆಯನ್ನು ಆಲಿಸಿದ ನ್ಯಾಯಲಯ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ. ಮದುವೆಯಾಗಿ ಒಂದು ವರ್ಷವಾದರೂ ಅವರು ಲೈಂಗಿಕ ಸಂಪರ್ಕ ನಡೆಸಿಲ್ಲ. ಅವರಿಗೆ ದೈಹಿಕ ಮತ್ತು ಮಾನಸಿಕ ಶಕ್ತಿ ಇಲ್ಲ ಎಂದು ಅರ್ಜಿಯಲ್ಲಿ ರಮ್ಯಾ ದೂರಿದ್ದರು.

ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೇಶ್ ಕೃಷ್ಣನ್‌

ಈ ಹಿಂದೆ ಎರಡು ಬಾರಿ ರಾಜೇಶ್ ವಿವಾಹ ಮಾಡಿಕೊಂಡಿದ್ದರು. ಅವರ ಪ್ರಥಮ ಪತ್ನಿ ಸೌಮ್ಯಾ ರಾವ್. ಸೌಮ್ಯಾ ಜೊತೆ ಒಂದಷ್ಟು ದಿನ ಸಂಸಾರ ಮಾಡಿದ ರಾಜೇಶ್ ವೈವಾಹಿಕ ಜೀವನ ವಿಚ್ಛೇದನದಲ್ಲಿ ಬೇರ್ಪಟ್ಟಿತ್ತು.

ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೇಶ್ ಕೃಷ್ಣನ್‌

ನಂತರ ರಾಜೇಶ್, ಹರಿಪ್ರಿಯಾ ಎಂಬ ದಂತವೈದ್ಯರನ್ನು ಮದುವೆಯಾಗಿದ್ದರು. ಈ ಮದುವೆಯೂ ಬಹಳ ದಿನ ಉಳಿಯಲಿಲ್ಲ. ಸ್ವಲ್ಪ ದಿನ ಏಕಾಂತದಲ್ಲಿದ್ದ ರಾಜೇಶ್ ಮೂರನೆಯವರಾಗಿ ರಮ್ಯಾ ವಸಿಷ್ಠ ಅವರನ್ನು ವರಿಸಿದ್ದರು ಎನ್ನುವುದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದಾಗಿದೆ.

English summary
Singer Rajesh Krishna was in Family Court, Bangalore on Monday (Apr 8). He said, wife Ramya Vashishta has given false statement. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada