For Quick Alerts
  ALLOW NOTIFICATIONS  
  For Daily Alerts

  ಎಸ್‌ಪಿ ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ಶಿಫ್ಟ್

  |

  ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದೆ, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಪ್ರಕಟಣೆ ಮಾಡಿದ್ದಾರೆ.

  Upendra ತೆಲುಗು, ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾ ಮಾಡದಿರಲು ಇದೇ ಕಾರಣ

  ಆಗಸ್ಟ್ 5 ರಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ನಂತರ ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ದಾಖಲಾಗಿದ್ದರು. ಇದೀಗ, ಎಸ್‌ಪಿಬಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಕಾರಣ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  ವೈದ್ಯರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಏನಿದೆ:
  'ಆಗಸ್ಟ್ 5 ರಿಂದ ಕೊರೊನಾ ವೈರಸ್‌ಗೆ ತುತ್ತಾಗಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಹಿನ್ನಡೆ ಉಂಟಾಗಿದೆ. ಆಗಸ್ಟ್ 13ರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ತಜ್ಞ ವೈದ್ಯರ ಸಲಹೆಯ ಹಿನ್ನೆಲೆ, ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ. ಕೃತಕ ಉಸಿರಾಟದ ಸಹಾಯದಲ್ಲಿದ್ದಾರೆ' ಎಂದು ತಿಳಿಸಿದೆ.

  ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಎಸ್ ಪಿ ಬಿ ಗರಂಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಎಸ್ ಪಿ ಬಿ ಗರಂ

  ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 50 ಸಾವಿರಕ್ಕೂ ಅಧಿಕ ಸಿನಿಮಾ ಗೀತೆಗಳನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. 75 ವರ್ಷದ ಎಸ್‌ಪಿಬಿ ಅವರ ಆರೋಗ್ಯದಲ್ಲಿ ಈ ಹಿಂದೆಯೂ ವ್ಯತ್ಯಾಸವಾಗಿತ್ತು.

  English summary
  Singer SP Balasubrahmanyam diagnosed with COVID-19 is critical, on life support.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X