For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ

  |
  Yajamana Movie: ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಹಳ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಈಗಂತೂ ಹಾಡುಗಳ ಮೂಲಕ ಯಜಮಾನ ಬಗ್ಗೆ ಅತಿಯಾದ ನಿರೀಕ್ಷೆ ಹುಟ್ಟಿದೆ.

  ನಿನ್ನೆಯಷ್ಟೇ ಯಜಮಾನ ಚಿತ್ರದ ಟೈಟಲ್ ಹಾಡು ರಿಲೀಸ್ ಆಗಿತ್ತು. ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿರುವ ಈ ಹಾಡಿಗ, ಹರಿಕೃಷ್ಣ ಅವರ ಸಂಗೀತ ಮತ್ತು ವಿಜಯ್ ಪ್ರಕಾಶ್ ಗಾಯನ ಸೇರಿ ಅದ್ಭುತವೆನ್ನುವಂತಿದೆ.

  ಹರಿಕೃಷ್ಣ ಬರ್ತ್ ಡೇ : ದರ್ಶನ್ ಸೇರಿದಂತೆ ಅನೇಕರ ಶುಭಾಶಯ ಹೀಗಿವೆ

  ಇದೀಗ, ಈ ಹಾಡು ಒಂದು ಮಿಲಿಯನ್ ವೀಕ್ಷಣೆ ದಾಟಿ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಈಗ ವಿಶೇಷ ಅಂದ್ರೆ, ಇದು ಯಜಮಾನ ಚಿತ್ರದ ಹಾಡಲ್ಲ, ಇದು ದರ್ಶನ್ ಅವರ ಜೀವನ ಚರಿತ್ರೆ. ಹೀಗಂತ ಸ್ವತಃ ಹರಿಕೃಷ್ಣ ಅವರೇ ಹೇಳಿದ್ದಾರಂತೆ. ಮುಂದೆ ಓದಿ.....

  ಇದು ದರ್ಶನ್ ಜೀವನ ಚರಿತ್ರೆ

  ಇದು ದರ್ಶನ್ ಜೀವನ ಚರಿತ್ರೆ

  ಯಜಮಾನ ಚಿತ್ರದ ಟೈಟಲ್ ಹಾಡು, ದರ್ಶನ್ ಅವರ ಜೀವನ ಚರಿತ್ರೆ ಎಂದು ಸಂಗೀತ ನಿರ್ದೇಶಕ ಹರಿಕೃಷ್ಣ, ಗಾಯಕ ವಿಜಯ್ ಪ್ರಕಾಶ್ ಅವರ ಬಳಿ ಹೇಳಿದ್ರಂತೆ. ಈ ಹಾಡಿನ ರೂಪದಲ್ಲಿ ಅವರ ಜೀವನ ತೋರಿಸುತ್ತಿದ್ದೇನೆ. ಸಂತೋಷ್ ಅವರು ಅದೇ ರೀತಿ ಸಾಹಿತ್ಯ ಬರೆದಿದ್ದಾರೆ. ನೀವು ಹಾಗೆ ಹಾಡಬೇಕು ಎಂದು ಕೇಳಿದ್ದರಂತೆ. ಹಾಗಾಗಿ ಈ ಹಾಡು ತುಂಬಾ ವಿಶೇಷವಾಗಿ ಬರಬೇಕು ಎಂದು ಶ್ರಮಪಟ್ಟು, ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿ ರೆಡಿ ಮಾಡಲಾಗಿದೆಯಂತೆ.

  6 ನಿಮಿಷದಲ್ಲಿ ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.!

  ದರ್ಶನ್ ಗೆ ಮೊದಲ ಸಲ

  ದರ್ಶನ್ ಗೆ ಮೊದಲ ಸಲ

  ಗಾಯಕ ವಿಜಯ್ ಪ್ರಕಾಶ್ ಅವರು ಇದುವರೆಗೂ ದರ್ಶನ್ ಸಿನಿಮಾಗಳಲ್ಲಿ ಸೋಲೋ ಸಾಂಗ್ ಹಾಡಿರಲಿಲ್ಲ. ಈ ಹಾಡಿನ ಮೂಲಕ ಅಂತಹ ಅವಕಾಶ ಸಿಕ್ಕಿದೆ ಎಂದು ಸ್ವತಃ ವಿಜಯ್ ಪ್ರಕಾಶ್ ಅವರೇ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಂತೋಷ್ ಆನಂದ್ ರಾಮ್ ಅವರಿಗೂ ಕೂಡ ದರ್ಶನ್ ಚಿತ್ರಕ್ಕೆ ಹಾಡು ಬರೆಯುವ ಚಾನ್ಸ್ ಸಿಕ್ಕಿದೆ.

  ರಾಜಕುಮಾರ ನಂತರ 'ಯಜಮಾನ'ನಿಗೆ ಹಾಡು ಬರೆದ ಸಂತೋಷ್

  ಅನೇಕ ಬಾರಿ ಹಾಡಿ ಫೈನಲ್ ಮಾಡಲಾಗಿದೆ

  ಅನೇಕ ಬಾರಿ ಹಾಡಿ ಫೈನಲ್ ಮಾಡಲಾಗಿದೆ

  ''ಹರಿಕೃಷ್ಣ ಅವರ ಜೊತೆ ಮಾತನಾಡಿದ ನಂತರ ಒಂದೆರಡು ದಿನ ಟೈಂ ತಗೊಂಡೆ. ಆಮೇಲೆ ಒಂದು ಸಲ ಹಾಡಿದೆ. ಅದು ಹರಿ ಸರ್ ಗೆ ಇಷ್ಟ ಆಯ್ತು. ಅದಾದ ಬಳಿಕ ಇನ್ನೊಂದು ಸಲ ಹಾಡಿದೆ. ಅದು ಹರಿ ಸರ್ ಗೆ ಓಕೆ ಆಗ್ಲಿಲ್ಲ. ಬಳಿಕ ನಾನು ಬಾಂಬೆ ಸ್ಟುಡಿಯೋದಲ್ಲಿ ಮೊದಲ ಹಾಡಿದ್ದೇ ಹಾಡನ್ನೇ ಫೈನಲ್ ಮಾಡೋಣ ಅಂತ ಡಿಸೈಡ್ ಆದ್ರು. ಸ್ವತಃ ಹರಿಕೃಷ್ಣ ಅವರೇ ಬಾಂಬೆಗೆ ಬಂದು ಮತ್ತೆ ರೆಕಾರ್ಡಿಂಗ್ ಮಾಡಿದ್ವಿ. ಹೀಗೆ ಬಹಳ ಸೂಕ್ಷ್ಮವಾಗಿ ಈ ಹಾಡನ್ನ ತರಲಾಗಿದೆ'' ಎಂದು ವಿಜಯ್ ಪ್ರಕಾಶ್ ಹೇಳಿಕೊಂಡಿದ್ದಾರೆ.

  ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

  ರಾಜಕುಮಾರ ನಂತರ ಯಜಮಾನ

  ರಾಜಕುಮಾರ ನಂತರ ಯಜಮಾನ

  ಸಂತೋಷ್ ಆನಂದ್ ರಾಮ್, ವಿಜಯ್ ಪ್ರಕಾಶ್, ಹರಿಕೃಷ್ಣ ಅವರ ಕಾಂಬಿನೇಷನ್ ನಲ್ಲಿ ರಾಜಕುಮಾರ ಟೈಟಲ್ ಹಾಡು ಬಂದಿತ್ತು. ಬಹಳ ದೊಡ್ಡ ಹಿಟ್ ಆಗಿತ್ತು. ಇದೀಗ, ಈ ಮೂವರ ಕಾಂಬಿನೇಷನ್ ನಲ್ಲಿ ಯಜಮಾನ ಟೈಟಲ್ ಹಾಡು ಬಂದಿದೆ. ಇದು ಕೂಡ ದೊಡ್ಡ ಹಿಟ್ ಆಗಿದೆ.

  English summary
  Challenging star darshan starrer yajamana movie title track released yesterday. music by v harikrishna. Singer vijay prakash spoke about yajamana song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X