For Quick Alerts
  ALLOW NOTIFICATIONS  
  For Daily Alerts

  ಆಶ್ಲೀಲ ವಿಡಿಯೋ ನೋಡೀರಿ ಜೋಕೆ: ಪೊಲೀಸರು ನಿಮ್ಮನ್ನು ನೋಡುತ್ತಿದ್ದಾರೆ

  By ಕಾರವಾರ ಪ್ರತಿನಿಧಿ
  |

  ಅಶ್ಲೀಲ ವಿಡಿಯೊ ಪ್ರಕರಣ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದರೆಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದ್ದು, ತನಿಖೆ ಜಾರಿಯಲ್ಲಿದೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿಯೂ ಅಶ್ಲೀಲ ವಿಡಿಯೋ ವೀಕ್ಷಣೆ, ಅಪ್‌ಲೋಡ್‌ಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ದಾಖಲಾಗಿವೆ.

  ಮಕ್ಕಳ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುವುದು ಹಾಗೂ ಅಪ್ಲೋಡ್ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೇ ಪ್ರಕರಣಗಳಿಗೆ ಸಂಭಂಧಿಸಿದಂತೆ ಕಾರವಾರ ಜಿಲ್ಲೆಯಲ್ಲಿ ಈವರೆಗೆ ಆರು ಪ್ರಕರಣಗಳು ದಾಖಲಾಗಿದ್ದು, ಆರೋಪಿತರ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ.

  ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ 2018ರಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಹಾಗೂ ವೀಕ್ಷಣೆ ಮಾಡುವುದು ಅಪರಾಧವೆಂದು ಘೋಷಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸೈಬರ್ ಅಪರಾಧಗಳ ತಡೆಗಟ್ಟುವ ವಿಭಾಗ, ರಾಷ್ಟ್ರೀಯ ಸೈಬರ್ ಅಪರಾಧಗಳ ವರದಿ ಪೋರ್ಟಲ್ ಸೇರಿ ಒಟ್ಟು ಮೂರು ಕಣ್ಗಾವಲು ತಾಣಗಳನ್ನು ತೆರೆದಿತ್ತು.

  ಕೇಂದ್ರ ತನ್ನ ಕಣ್ಗಾವಲು ತಾಣಗಳ ಮೂಲಕ ಯಾರು ಮಕ್ಕಳ ಅಶ್ಲೀಲ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮತ್ತು ವೀಕ್ಷಣೆ ಮಾಡುತ್ತಾರೋ, ಅಂಥಹವರನ್ನ ಗುರುತಿಸಿ ದೂರು ದಾಖಲಿಸುವ ಕಾರ್ಯ ನಡೆಸುತ್ತಿದೆ. 2019ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈವರೆಗೆ ದೇಶಾದ್ಯಂತ ಹಲವರ ಮೇಲೆ ಪ್ರಕರಣಗಳು ದಾಖಲಾಗಿವೆ. ಯಾವ ಮೊಬೈಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಾರೋ ಅಥವಾ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದರೆ ಅಥವಾ ಯಾವುದೇ ವೆಬ್‌ಸೈಟ್‌ಗಳ ಮೂಲಕ ವೀಕ್ಷಣೆ ಮಾಡಿದರೆ ಅಂಥ ಮೊಬೈಲ್ ನಂಬರ್‌ಗಳನ್ನು ಪತ್ತೆ ಮಾಡಿ, ಅವರ ವಿಳಾಸದ ಮಾಹಿತಿಯನ್ನು ಕಣ್ಗಾವಲು ತಾಣಗಳ ಸಹಾಯದಿಂದ ಪತ್ತೆ ಮಾಡಲಾಗುತ್ತಿದೆ. ಅಲ್ಲದೇ ಕಂಪ್ಯೂಟರ್ ಮೂಲಕ ವೀಕ್ಷಣೆ ಅಥವಾ ಅಪ್‌ಲೋಡ್ ಮಾಡಿದರೂ ಐಪಿ ಅಡ್ರೆಸ್ ಮೂಲಕ ಗುರುತಿಸಲಾಗುತ್ತಿದೆ.

  ಈ ರೀತಿ ಗುರುತಿಸಲ್ಪಟ್ಟಿರುವ ಮಾಹಿತಿಗಳನ್ನು ಕೇಂದ್ರವು ಆಯಾ ರಾಜ್ಯದ ಸಿಐಡಿ ವಿಭಾಗಕ್ಕೆ, ಸಿಐಡಿಯಿಂದ ಪ್ರತಿ ಜಿಲ್ಲೆಯ ಸೈಬರ್ ಅಪರಾಧ ಠಾಣೆಗಳಿಗೆ ನೀಡಲಾಗುತ್ತಿದೆ. ಆಯಾ ಜಿಲ್ಲೆಯಲ್ಲಿ ಆ ಆರೋಪಿಗಳ ಮೇಲೆ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿ ಬಂಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 2020 ಹಾಗೂ 2021ರಲ್ಲಿ ಈವರೆಗೆ ಜಿಲ್ಲೆಯಲ್ಲಿ 6 ಪ್ರಕರಣಗಳು ಕೇಂದ್ರದ ಮಾಹಿತಿ ಮೇರೆಗೆ ಕಾರವಾರದ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿತರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುವ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಕೆಲವರು ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬAಧಿಸಿದAತೆ ಜಾಮೀನು ಸಹ ಪಡೆದಿದ್ದು, ಇನ್ನೂ ಮೂರು ಪ್ರಕರಣಗಳು ಸಿಐಡಿಯಿಂದ ಜಿಲ್ಲೆಗೆ ವರ್ಗಾವಣೆಯಾಗಲಿದೆ ಎನ್ನಲಾಗಿದೆ.

  ಎಲ್ಲೋ ಕುಳಿತು ಮೊಬೈಲ್‌ನಲ್ಲಿ ನಾವು ಗುಪ್ತವಾಗಿ ಏನಾದರು ಮಾಡಬಹುದು ಅಂದುಕೊAಡವರಿಗೆ ಇದು ಕಂಟಕವಾಗಲಿದೆ. ಇನ್ನೊಂದೆಡೆ ಅರಿವಿಲ್ಲದೇ ಯಾರೋ ಕಳಿಸುವ ವಿಡಿಯೋಗಳನ್ನ ಡೌನ್‌ಲೋಡ್ ಮಾಡಿ ಬೇರೆಯವರಿಗೆ ಕಳುಹಿಸುವ ಪ್ರಯತ್ನ ಮಾಡಿದವರ ಮೇಲೂ ಪ್ರಕರಣ ದಾಖಲಾಗಿದ್ದು, ಸೈಬರ್ ಅಪರಾಧ ಠಾಣೆಗೆ ಬಂದು ವಿಚಾರಣೆಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದೆ.

  ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅದನ್ನ ತಡೆಗಟ್ಟಲು ಸುಪ್ರೀಂ ಕೇಂದ್ರಕ್ಕೆ ಸೂಚನೆ ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕಳೆದ ಒಂದೆರಡು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಿದ ಪ್ರಕರಣಗಳನ್ನ ಸಹ ಪತ್ತೆ ಹಚ್ಚಿ ಪ್ರಕರಣ ದಾಖಲಿಸುತ್ತಿದ್ದು, ಎಲ್ಲೋ ಮೂಲೆಯಲ್ಲಿ ಕುಳಿತು ಅಪ್‌ಲೋಡ್ ಮಾಡಿದವರನ್ನು ಗುರುತಿಸಿ ಪ್ರಕರಣ ದಾಖಲಿಸುವ ಕಾರ್ಯ ಮಾಡುತ್ತಿದೆ. ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳದೇ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎನ್ನುವುದು ಪೊಲೀಸರ ಸಲಹೆಯಾಗಿದೆ.

  English summary
  Six case Registered in Uttar Kannada district for uploading indecent videos related to children. Police investigating the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X