Don't Miss!
- News
ಫೇಸ್ಬುಕ್ ಉದ್ಯೋಗಿಗಳಿಗೆ ಮತ್ತೆ ಕೆಟ್ಟ ಸುದ್ದಿ: ಮುಂಬರುವ ದಿನಗಳಲ್ಲಿ ಇನ್ನಷ್ಟು ವಜಾ- ಇಲ್ಲಿದೆ ವರದಿ, ಮಾಹಿತಿ
- Sports
WIPL 2023: ಮಹಿಳಾ IPLನಲ್ಲಿ ಆರ್ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿ
- Lifestyle
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುದೀಪ್ ಬೆಂಬಲಕ್ಕೆ ದರ್ಶನ್ ಧನ್ಯವಾದ: ಹಳೆಯದನ್ನು ಮರೆತು ಇಬ್ಬರು ಅಪ್ಪಿಕೊಳ್ಳಿ ಎಂದ ಜಗ್ಗೇಶ್
ಹೊಸಪೇಟೆ ಘಟನೆ ಖಂಡಿಸಿ ಇತ್ತೀಚೆಗೆ ನಟ ಸುದೀಪ್ ಸುದೀರ್ಘ ಪತ್ರ ಬರೆದು, ದರ್ಶನ್ ಬೆಂಬಲಕ್ಕೆ ನಿಂತಿದ್ದರು. ಅದಕ್ಕೆ ಇದೀಗ ನಟ ದರ್ಶನ್ " ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ.
ಸುದೀಪ್ ಬೆಂಬಲದ ಮಾತುಗಳಿಗೆ ದರ್ಶನ್ ಧನ್ಯವಾದ ತಿಳಿಸುತ್ತಿದ್ದಂತೆ ನಟ ಜಗ್ಗೇಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ಆದಷ್ಟು ಬೇಗ ವೈಮನಸ್ಸು ಬಿಟ್ಟು ಒಂದಾಗಿ ಎಂದು ಸಲಹೆ ನೀಡಿದ್ದಾರೆ. 5 ವರ್ಷಗಳ ಹಿಂದೆ ಸುದೀಪ್ ಹಾಗೂ ದರ್ಶನ್ ಯಾವುದೋ ವೈಮನಸ್ಸಿನಿಂದ ದೂರಾಗಿದ್ದರು. ಆ ನಂತರ ದರ್ಶನ್ ಎಂದಿಗೂ ಸುದೀಪ್ ಹೆಸರು ತೆಗೆದುಕೊಂಡಿರಲಿಲ್ಲ. ಇಬ್ಬರು ನಾನೊಂದು ತೀರ ನೀನೊಂದು ತೀರ ಎನ್ನುವಂತೆ ಇದ್ದರು. ಇದ್ದಿದ್ದರಲ್ಲಿ ಸುದೀಪ್ ಕೆಲ ದಿನಗಳ ಕಾಲ ಸ್ನೇಹದ ಹಸ್ತ ಚಾಚಿದ್ದರು. ಆದರೆ ದರ್ಶನ್ ಮಾತ್ರ ಪಟ್ಟು ಬಿಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಸುದೀಪ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
'ನಿಮ್ಮ
ಪ್ರೀತಿಯ
ಸಾಲುಗಳಿಗೆ
ಧನ್ಯವಾದಗಳು'
:
5
ವರ್ಷಗಳ
ಬಳಿಕ
ಕಿಚ್ಚನಿಗೆ
ದರ್ಶನ್
ಪ್ರತಿಕ್ರಿಯೆ!
ಬಹಳ ದಿನಗಳಿಂದ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಇಬ್ಬರ ಒಂದಾಗಲಿ ಎಂದು ಆಶಿಸುತ್ತಲೇ ಇದ್ದರು. ಒಂದ್ಕಾಲದಲ್ಲಿ ಕುಚಿಚು ಸ್ನೇಹಿತರಾಗಿದ್ದವರು ಮತ್ತೆ ಅದೇ ರೀತಿ ಒಟ್ಟಿಗೆ ಕಾಣಿಸಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಈಗ ದರ್ಶನ್‌ಗೆ ಇದೇ ಸಲಹೆ ನೀಡಿದ್ದಾರೆ.

ಹಳೆಯದು ಮರೆತು ಒಂದಾಗಿ
"ಪ್ರೀತಿಯ ದರ್ಶನ್ ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆದು ಸುದೀಪ್ ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲು ಹರಸಿ. ನೀವಿಬ್ಬರು ಒಂದಾದರೆ ಕೋಟಿಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ. ಹಳೆಯದನ್ನು ಮರೆತು ಇಬ್ಬರು ಅಪ್ಪಿಕೊಳ್ಳಿ" ಜಗ್ಗಣ್ಣ ಟ್ವೀಟ್ ಮಾಡಿದ್ದಾರೆ.

ದರ್ಶನ್ ಟ್ವೀಟ್ ವೈರಲ್
ಸುದೀಪ್ ಬೆಂಬಲದ ಮಾತುಗಳಿಗೆ ಹೀಗೆ ನಟ ದರ್ಶನ್ ಪ್ರತಿಕ್ರಿಯಿಸುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ರಿಪ್ಲೇ ಟ್ವೀಟ್ 9 ಸಾವಿರಕ್ಕೂ ಅಧಿಕ ರೀಟ್ವೀಟ್, ಸಾವಿರಕ್ಕೂ ಅಧಿಕ ಕಾಮೆಂಟ್ ಹಾಗೂ 25 ಸಾವಿರಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ. ಅಭಿಮಾನಿಗಳು "ಇದು ರಾಜ್ಯವೇ ಖುಷಿಪಡುವ ಸುದ್ದಿ" ಎಂದು ಹೇಳಿ ಸಂಭ್ರಮಿಸುತ್ತಿದ್ದಾರೆ. ಆದಷ್ಟು ಬೇಗ ಇಬ್ಬರು ಒಂದಾಗಿ. ನಿಮ್ಮನ್ನು ಮತ್ತೆ ಕುಚುಕು ಗೆಳೆಯರಾಗಿ ನೋಡಲು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಹೊಸಪೇಟೆ ಘಟನೆ ಖಂಡಿಸಿದ್ದ ಕಿಚ್ಚ
ನಿನ್ನೆ ನಟ ಕಿಚ್ಚ ಸುದೀಪ್ ಹೊಸಪೇಟೆ ಘಟನೆ ಕುರಿತು ಸುದೀರ್ಘ ಪತ್ರ ಬರೆದಿದ್ದರು. ಅದರಲ್ಲೂ ಮುಖ್ಯವಾಗಿ "ದರ್ಶನ್ ಮತ್ತು ಪುನೀತ್ ಅಭಿಮಾನಿಗಳಲ್ಲಿ ಕೆಲವೊಂದು ವಿಷಗಳಿಗೆ ಅಸಮಾಧಾನ ಇದೆ ಎನ್ನುವುದು ನನಗೆ ಗೊತ್ತು. ಆದರೆ ಪುನೀತ್ ಅವರು ಕೂಡ ಇಂತಹ ಘಟನೆ ಒಪ್ಪುತ್ತಿರಲಿಲ್ಲ ಮತ್ತು ಸಹಕರಿಸುತ್ತಿರಲಿಲ್ಲ. ಯಾಕೆಂದರೆ ಅವರು ಎಲ್ಲರನ್ನು ಗೌರವಿಸುತ್ತಿದ್ದರು. ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಮತ್ತು ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ನನ್ನ ಮನಸ್ಸಿನಲ್ಲಿ ಇರುವುದನ್ನು ನಾನು ಹೇಳಲೇಬೇಕು. ನಿಜಕ್ಕೂ ಈ ಘಟನೆ ನನ್ನನ್ನು ವಿಚಲಿತನನನ್ನಾಗಿ ಮಾಡಿದೆ" ಎಂದು ಬರೆದಿದ್ದರು.

ನಟ ದರ್ಶನ್‌ಗೆ ಅವಮಾನ
ಭಾನುವಾರ ಸಂಜೆ ಹೊಸಪೇಟೆಯಲ್ಲಿ 'ಕ್ರಾಂತಿ' ಚಿತ್ರದ 2ನೇ ಹಾಡು ಬಿಡುಗಡೆ ಆಯಿತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ನಟ ದರ್ಶನ್ ವೇದಿಕೆ ಮೇಲೆ ನಿಂತಿದ್ದಾಗ ಅಭಿಮಾನಿಗಳ ಗುಂಪಿನಿಂದ ಕಿಡಿಗೇಡಿ ಒಬ್ಬ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿದ್ದ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಹಾಗೂ ಚಿತ್ರರಂಗ ಕಲಾವಿದರು ನಟ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಈ ಕೃತ್ಯ ಎಸಗಿದ ಕಿಡಿಗೇಡಿಯನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.