»   » 'ರವಿಶಾಸ್ತ್ರಿ' ಗೆಳತಿ ಸ್ನೇಹಾಳ ಮದುವೆ ಟಿವಿಯಲ್ಲಿ ಪ್ರಸಾರ

'ರವಿಶಾಸ್ತ್ರಿ' ಗೆಳತಿ ಸ್ನೇಹಾಳ ಮದುವೆ ಟಿವಿಯಲ್ಲಿ ಪ್ರಸಾರ

Posted By:
Subscribe to Filmibeat Kannada
ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಅಭಿನಯಿಸಿದ್ದ ತಾರೆ ಸ್ನೇಹಾ ಹಾಗೂ ಪ್ರಸನ್ನ ಮದುವೆಯ ಟಿವಿ ಪ್ರಸಾರದ ಹಕ್ಕುಗಳು ತಮಿಳಿನ ವಿಜಯ್ ಟಿವಿ ಪಾಲಾಗಿದೆ. ಆದರೆ ಎಷ್ಟು ದುಡ್ಡು ಕೊಟ್ಟು ಟಿವಿ ಹಕ್ಕುಗಳನ್ನು ಖರೀದಿಸಿದ್ದಾರೆ ಎಂಬ ಅಂಶ ಬಹಿರಂಗವಾಗಿಲ್ಲ.

ಸ್ನೇಹಾ ಮದುವೆ ಮೇ 11ರಂದು ಬೆಳಗ್ಗೆ 9ಗಂಟೆಯ ಶುಭ ಮುಹೂರ್ತದಲ್ಲಿ ನೆರವೇರಲಿದೆ. ಚೆನ್ನೈನ ಶ್ರೀವಾರು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇವರಿಬ್ಬರ ಮದುವೆಗೆ ಗಟ್ಟಿಮೇಳ ಮೊಳಗಲಿದೆ. ಸ್ನೇಹಾರ ಮದುವೆಗೆ ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೂ ಮದುವೆ ಆಮಂತ್ರಣ ಪತ್ರ ತಲುಪಿದೆ. ಪ್ರಸನ್ನ ಹಾಗೂ ಸ್ನೇಹಾ ಇಬ್ಬರೂ ಒಟ್ಟಿಗೆ ತಮಿಳಿನ 'ಅಚಮುಂಡು ಅಚಮುಂಡು' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು. ತಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಶೀಘ್ರದಲ್ಲೆ ಮದುವೆಯನ್ನೂ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದು ಈಗ ನಿಜವಾಗುತ್ತಿದೆ. (ಏಜೆನ್ಸೀಸ್)

English summary
Actress Sneha and Prasanna marriage will take place on May 11, 2012 at Sri Varu Venkateshwara Kalyana Mandapam in Chennai. The telecast rights of their wedding sold to Vijay TV for a fancy price.
Please Wait while comments are loading...