For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ ಡ್ರಗ್ ನಂಟು ಇದೆ, ರಕ್ಷಣೆ ಕೊಟ್ಟರೆ ವಿವರ ಕೊಡ್ತೀನಿ: ಇಂದ್ರಜಿತ್ ಲಂಕೇಶ್

  |

  ಚಂದನವನದ ಕೆಲವು ನಟ-ನಟಿಯರು, ಸಂಗೀತ ನಿರ್ದೇಶಕರು ಡ್ರಗ್ ದಾಸರಾಗಿದ್ದಾರೆ. ಡ್ರಗ್ ಮಾಫಿಯಾ ಜೊತೆಗೆ ಅವರಿಗೆ ಸಂಬಂಧವಿದೆ ಎಂಬ ಅಂಶ ನಿನ್ನೆ ಎನ್‌ಸಿಬಿ ಮಾಡಿದ ದಾಳಿಯಿಂದ ಹೊರಗೆ ಬಂದಿದೆ.

  ಡ್ರಗ್ಸ್ ಬಗ್ಗೆ ಕೇಳಿದ್ದಕ್ಕೆ ರಚಿತಾ ರಾಮ್ ಫುಲ್ ಗರಂ | Filmibeat Kannada

  ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ನ ಅಧಿಕಾರಿಗಳು ನಿನ್ನೆ ಬೆಂಗಳೂರಿನ ಕಲ್ಯಾಣ ನಗರದ ಐಶಾರಾಮಿ ಹೋಟೆಲ್ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಿ ಒಬ್ಬ ಮಹಿಳೆ ಸೇರಿ ಮೂವರನ್ನು ಡ್ರಗ್ಸ್ ದಾಸ್ತಾನು, ಮಾರಾಟ ಕಾರಣಕ್ಕೆ ಬಂಧಿಸಿದ್ದಾರೆ.

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ, ಅನಿಕಾ ಬಿಚ್ಚಿಟ್ಟ ಸೆಲೆಬ್ರಿಟಿಗಳ ನಂಟು!

  ಬಂಧಿತ ಮಹಿಳೆಯು ಒಂದೂವರೆ ವರ್ಷದಿಂದಲೂ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದುದಾಗಿ ಗೊತ್ತಾಗಿದ್ದು, ಕನ್ನಡದ ನಟ-ನಟಿಯರು, ಸಂಗೀತ ನಿರ್ದೇಶಕರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದುದಾಗಿ ಹೇಳಿದ್ದಾರೆ.

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಡೀಲ್ ಆರೋಪ: ಸುಮಲತಾ, ರಾಕ್‌ಲೈನ್‌ ಹೇಳಿದ್ದೇನು?

  ಚಂದನವನಕ್ಕೆ ಡ್ರಗ್ಸ್ ಲಿಂಕ್ ಆರೋಪದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ಸೇರಿ ಹಲವರು, ಇದೊಂದು ಸುಳ್ಳು ಆರೋಪ. ಮಾದಕ ವ್ಯಸನಿಗಳು ಚಂದನವನದಲ್ಲಿ ಇಲ್ಲವೆಂದು ಹೇಳಿದ್ದಾರೆ. ಆದರೆ ಮಾದಕ ವ್ಯಸನ ಚಿತ್ರರಂಗದಲ್ಲಿ ಇದೆಯೆಂದು ಇನ್ನು ಕೆಲವರು ಹೇಳುತ್ತಿದ್ದಾರೆ.

  ಡ್ರಗ್ಸ್ ಮಾಫಿಯಾ ಇರುವುದನ್ನು ನಾನೇ ನೋಡಿದ್ದೇನೆ: ಇಂದ್ರಜಿತ್

  ಡ್ರಗ್ಸ್ ಮಾಫಿಯಾ ಇರುವುದನ್ನು ನಾನೇ ನೋಡಿದ್ದೇನೆ: ಇಂದ್ರಜಿತ್

  ಚಂದನವನದ ಕೆಲವು ನಟ-ನಟಿಯರಿಗೆ ಡ್ರಗ್ಸ್ ನ ವ್ಯಸನ ಇದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಇಂದ್ರಜಿತ್, ಚಂದನವನದಲ್ಲಿ ಡ್ರಗ್‌ ಮಾಫಿಯಾ ಇರುವುದು ನಿಜ ನಾನೇ ಕಣ್ಣಾರೆ ನೋಡಿದ್ದೇನೆ' ಎಂದಿದ್ದಾರೆ.

  'ಯುವ ನಟ-ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದಾರೆ'

  'ಯುವ ನಟ-ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದಾರೆ'

  ಹಲವು ಯುವ ನಟ-ನಟಿಯರು ಡ್ರಗ್ಸ್‌ನ ಹಿಂದೆ ಬಿದ್ದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ರೇವ್ ಪಾರ್ಟಿ, ನೈಟ್‌ ಪಾರ್ಟಿಗಳು ನಡೆಯುತ್ತವೆ. ಅಲ್ಲೆಲ್ಲಾ ಡ್ರಗ್ಸ್ ಹರಿದಾಡುತ್ತದೆ, ಹಲವು ಯುವ ನಟರು ಡ್ರಗ್ಸ್‌ನ ಚಟಕ್ಕೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ ಇಂದ್ರಜಿತ್ ಲಂಕೇಶ್.

  'ದೊಡ್ಡ ಸ್ಟಾರ್‌ಗಳು ಡ್ರಗ್ಸ್‌ನಿಂದ ದೂರ'

  'ದೊಡ್ಡ ಸ್ಟಾರ್‌ಗಳು ಡ್ರಗ್ಸ್‌ನಿಂದ ದೂರ'

  ದೊಡ್ಡ ಸ್ಟಾರ್ ನಟರುಗಳು ಇಂಥಹುದರಲ್ಲಿ ಇಲ್ಲ. ಆದರೆ ಒಂದೆರಡು ಸಿನಿಮಾ ಮಾಡಿದ ಯುವ ನಟರು ಕೆಲವರು ಡ್ರಗ್ಸ್‌ಗೆ ದಾಸರಾಗಿದ್ದಾರೆ. ದುಡ್ಡಿನ ವ್ಯಾಮೋಹ, ಹಣದ ಆಸೆಗೆ ಬಿದ್ದು ಕೆಲವರು ಮಾಫಿಯಾದ ಒಳಕ್ಕೆ ಸೇರಿದ್ದಾರೆ. ಕೊಕೇನ್‌ ರೀತಿಯ ಅಪಾಯಕಾರಿ ಮಾದಕ ವಸ್ತು ಸಹ ಚಂದನವನ ನಟ-ನಟಿಯರ ಕೈಗೆ ಎಟುಕುತ್ತಿದೆ ಎಂದು ಶಾಕಿಂಗ್ ಅಂಶ ಬಹಿರಂಗಪಡಿಸಿದ್ದಾರೆ ಇಂದ್ರಜಿತ್.

  ರಕ್ಷಣೆ ಕೊಟ್ಟರೆ ಹೆಸರು ಬಹಿರಂಗ

  ರಕ್ಷಣೆ ಕೊಟ್ಟರೆ ಹೆಸರು ಬಹಿರಂಗ

  ಯಾರು ಯಾರೆಲ್ಲಾ ಈ ಮಾಫಿಯಾದಲ್ಲಿದ್ದಾರೆ. ಯಾರೆಲ್ಲಾ ದಾಸರಾಗಿದ್ದಾರೆ ಎಂಬುದನ್ನು ನಾನು ಬೇಕಾದರೆ ಬಹಿರಂಗಪಡಿಸುತ್ತೇನೆ. ಆದರೆ ಪೊಲೀಸರು ನನಗೆ ಸೂಕ್ತ ರಕ್ಷಣೆ ಕೊಡುವುದಾದರೆ ನಾನು ಎಲ್ಲರ ಹೆಸರು ಹೇಳುತ್ತೇನೆ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

  ಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆ

  English summary
  Some young actors of Sandalwood are addicted to drugs. I will tell names if police gave me protection said director Indrajit Lankesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X