For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ವಿರೋಧಿಸಿದ್ದಕ್ಕೆ ನಟ ಜಗ್ಗೇಶ್ ವಿರುದ್ಧ ಟೀಕೆ

  |

  ಕನ್ನಡ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆ ಹಿರಿಯ ನಟ ಜಗ್ಗೇಶ್ ಪ್ರೆಸ್ ಮೀಟ್ ಮಾಡಿದ್ದರು. ಈ ಸುದ್ದಿಗೋಷ್ಠಿಯಲ್ಲಿ ತಮ್ಮ ನಾಲ್ಕು ದಶಕಗಳ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ ಜಗ್ಗೇಶ್ ಹಲವಾರು ವಿಚಾರಗಳನ್ನು ಚರ್ಚಿಸಿದರು.

  ಇವ್ರೆಲ್ಲಾ ದುಡ್ಡು ಬಂದ್ರೆ ತಾಯಿನ ಬೇಕಾದ್ರೂ ಮಾರಿ ಬಿಡ್ತಾರೆ | Jaggesh about Pan india

  ಈ ವೇಳೆ ಕನ್ನಡ ಚಿತ್ರರಂಗವನ್ನು ಹಾಗೂ ಕನ್ನಡತನವನ್ನು ಉಳಿಸೋದು ಮುಖ್ಯ. ಯಾವುದೋ ಅದು ಪ್ಯಾನ್‌ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡೋಲ್ಲಾ. ಪ್ಯಾನ್ ಇಂಡಿಯಾದಿಂದ ನಮ್ಮ‌ ಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ‌ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ‌ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

  ನನ್ನ ಬಳಿ 2 ಕನಸನ್ನ ಹೇಳಿಕೊಂಡಿದ್ದರು, ಅದನ್ನ ನಿಜ ಮಾಡಿದ್ದಾರೆ; ಪತಿಯ ಬಗ್ಗೆ ಪರಿಮಳ ಜಗ್ಗೇಶ್ ಮಾತುನನ್ನ ಬಳಿ 2 ಕನಸನ್ನ ಹೇಳಿಕೊಂಡಿದ್ದರು, ಅದನ್ನ ನಿಜ ಮಾಡಿದ್ದಾರೆ; ಪತಿಯ ಬಗ್ಗೆ ಪರಿಮಳ ಜಗ್ಗೇಶ್ ಮಾತು

  ಜಗ್ಗೇಶ್ ಅವರ ಈ ಹೇಳಿಕೆ ಕೆಲವರಿಗೆ ಬೇಸರ ತರಿಸಿದೆ. ಪ್ಯಾನ್ ಇಂಡಿಯಾ ಚಿತ್ರ ಬಂದ ಬಳಿಕವೇ ಕನ್ನಡ ಚಿತ್ರರಂಗ ಇನ್ನೊಂದು ಹಂತಕ್ಕೆ ಹೋಗುತ್ತಿದೆ, ಅದು ಗೊತ್ತಿಲ್ಲದೇ ಮಾತನಾಡಬೇಡಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಜಗ್ಗೇಶ್ ಅವರ ಹೇಳಿಕೆ ಹಿನ್ನೆಲೆ ಇದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ವಾರ್ ಶುರು ಮಾಡುವ ಸೂಚನೆ ನೀಡಿದೆ. ಜಗ್ಗೇಶ್ ಹೇಳಿಕೆ ಪರ ಕೆಲವು ಸ್ಟಾರ್ ನಟರ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಮತ್ತೊಂದೆಡೆ ಮತ್ತೆ ಕೆಲವು ನಟರ ಅಭಿಮಾನಿಗಳು ಜಗ್ಗೇಶ್ ಹೇಳಿಕೆ ಖಂಡಿಸಿದ್ದಾರೆ.

  'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ': ನಟ ಜಗ್ಗೇಶ್ ಅಸಮಾಧಾನ'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ': ನಟ ಜಗ್ಗೇಶ್ ಅಸಮಾಧಾನ

  ಈ ಬೆಳವಣಿಗೆಯನ್ನು ಗಮನಿಸಿದ ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ''ಕನ್ನಡ ಚಿತ್ರರಂಗ, ಬೆಳೆಯುವ ಯುವನಟ ನಟಿಗಾಗಿ ಆಡಿದ ಮಾತಿಗೆ ಹೀಗಾ? ಪರವಾಗಿಲ್ಲಾ ಮಕ್ಕಳು ಎಷ್ಟೆ ಬೆಳೆದರು ತಂದೆಯ ಮುಂದೆ ಮಕ್ಕಳೆ ವಿನಃ ತಂದೆಯಾಗಲ್ಲಾ. ಶಿವಣ್ಣ, ಪುನೀತ್, ದರ್ಶನ್, ಗಣೇಶ್, ವಿಜಿ ಪ್ಯಾನ್ ಇಂಡಿಯಾ ನಂಬದೆ ಕನ್ನಡ ಕನ್ನಡಿಗರ ಸೀಮೆಯಲ್ಲೆ ಕನ್ನಡದ ಕಲಾವಿದ ತಂತ್ರಜ್ಞರ ಬೆಳಸಿ ತಾವು ಇದ್ದಾರೆ. offcorce ನಾನು ಇರುವೆ. ನಮಗೆ 100% ಕನ್ನಡ ಜನ ಸಾಕು'' ಎಂದು ಹೇಳಿದ್ದಾರೆ.

  Some fans are outraged against actor Jaggesh for opposed Pan India

  ಅಂದ್ಹಾಗೆ, ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದೆ. ಕನ್ನಡದಲ್ಲಿ ತಯಾರಾದರೂ ಅದನ್ನು ತೆಲುಗು, ತಮಿಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಸ್ಟಾರ್ ನಟರ ಚಿತ್ರಗಳು ಮಾತ್ರವಲ್ಲ ಹೊಸ ಸಿನಿಮಾಗಳು ಸಹ ಪ್ಯಾನ್ ಇಂಡಿಯಾ ಎಂದು ಪ್ರಚಾರ ಮಾಡುತ್ತಿರುವ ಉದಾಹರಣೆಯೂ ಇದೆ.

  English summary
  Some fans are outraged against actor Jaggesh for opposed Pan India films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X