Don't Miss!
- News
iNCOVACC vaccine: ಮೂಗಿನ ಮೂಲಕ ನೀಡುವ ಇನ್ಕೊವ್ಯಾಕ್ ಕೊರೊನಾ ಲಸಿಕೆ ಬಿಡುಗಡೆ
- Finance
Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ, ಅರ್ಜಿ ಪ್ರಕ್ರಿಯೆ ಮೊದಲಾದ ಮಾಹಿತಿ
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಡಿಯೋ: ಕಾರು ಹಿಂಬಾಲಿಸಿದ ಅಭಿಮಾನಿಗಳಿಗೆ ಬೈದು ಬುದ್ಧಿ ಹೇಳಿದ ದರ್ಶನ್
ದರ್ಶನ್ ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಗೆ ಹಾಕುವುದು ಸಾಮಾನ್ಯ. ದರ್ಶನ್ ಮನೆಯ ಮುಂದೆ, ಚಿತ್ರೀಕರಣದ ಸೆಟ್‌ನಲ್ಲಿ, ಯಾವುದಾದರೂ ಕಾರ್ಯಕ್ರಮಗಳಿಗೆ ಹೋದಾ ಎಲ್ಲೆಡೆ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ದರ್ಶನ್ ರಸ್ತೆಯಲ್ಲಿ ಓಡಾಡುವಾಗಲೂ ಅಭಿಮಾನಿಗಳು ಬಿಡುವುದಿಲ್ಲ.
Recommended Video
ತಾವು ರಸ್ತೆಯಲ್ಲಿ ಓಡಾಡುವಾಗ ಅಭಿಮಾನಿಗಳು ತಮ್ಮನ್ನು ಫಾಲೋ ಮಾಡಬಾರದು ಎಂದು ಈಗಾಗಲೇ ಹಲವು ಬಾರಿ ದರ್ಶನ್ ಎಚ್ಚರಿಕೆ ನೀಡಿದ್ದಾರೆ. ಆದರೂ ಕೆಲವು ಅಭಿಮಾನಿಗಳು ಈ ಹುಚ್ಚಾಟ ಬಿಟ್ಟಿಲ್ಲ.
ದರ್ಶನ್ ತಮ್ಮ ಕುಟುಂಬದೊಂದಿಗೆ ತಮ್ಮ ಕಾರಿನಲ್ಲಿ ಎಲ್ಲಿಗೋ ತೆರಳುತ್ತಿರಬೇಕಾದರೆ ಕೆಲವು ಅಭಿಮಾನಿಗಳು ಬೈಕ್‌ಗಳಲ್ಲಿ ದರ್ಶನ್ ಅವರನ್ನು ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳಿಗೆ ಬೈದು ಬುದ್ದಿ ಹೇಳಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಜೀಪ್‌ನಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿದ ಯುವಕರು
ದರ್ಶನ್ ತಮ್ಮ ಜೀಪ್‌ನಲ್ಲಿ ಮಗ, ಪತ್ನಿ ವಿಜಯಲಕ್ಷ್ಮಿ ಹಾಗೂ ಸಹಾಯಕನ ಜೊತೆ ಡ್ರೈವಿಂಗ್ ಹೋಗುತ್ತಿರುವಾಗ ಕೆಲವು ಅಭಿಮಾನಿಗಳು ಬೈಕ್‌ನಲ್ಲಿ ಫಾಲೋ ಮಾಡಿದ್ದಾರೆ. ಕಾರು ಹೋಗುತ್ತಿದ್ದ ಸ್ಪೀಡ್‌ನಲ್ಲಿಯೇ ಬೈಕ್‌ನಲ್ಲಿ ಬಂದ ಅಭಿಮಾನಿಗಳು, ಗಾಡಿ ಚಲಾಯಿಸುತ್ತಲೇ ದರ್ಶನ್ ಅವರ ವಿಡಿಯೋ ಮಾಡಲು ಯತ್ನಿಸಿದ್ದಾರೆ. ಒಬ್ಬನಂತೂ ತನ್ನ ಬೈಕ್‌ನಲ್ಲಿ ದರ್ಶನ್‌ರ ಜೀಪ್‌ನ ಮುಂದೆ ಹೋಗಿದ್ದಾನೆ.
ವಿಡಿಯೋ ಮಾಡುತ್ತಿದ್ದವನ ಬೈದ ದರ್ಶನ್
ಜೀಪ್ ಡ್ರೈವಿಂಗ್ ಮಾಡುತ್ತಿದ್ದ ದರ್ಶನ್, ಅಭಿಮಾನಿಗಳ ಹುಚ್ಚಾಟ ಗಮನಿಸಿ ಗಾಡಿಯ ವೇಗ ತಗ್ಗಿಸಿ, ''ಏನೋ ಆಟ ಆಡ್ತಾ ಇದ್ದೀಯೇನೊ? ಮೊಬೈಲ್ ಇಡೊ ಕೆಳಗೆ, ನಿಮಗೆಲ್ಲ ಎಷ್ಟು ಬುದ್ಧಿ ಹೇಳಿದ್ರೂ ಗೊತ್ತಾಗಲ್ವೇನೋ'' ಎಂದು ಬೈದಿದ್ದಾರೆ. ದರ್ಶನ್ ಅವರಿಂದ ಬೈಸಿಕೊಂಡ ಬಳಿಕ ಆ ಅಭಿಮಾನಿ ಹಿಂದೆ ಬಂದಿದ್ದಾನೆ. ಆದರೂ 'ಜೈ ಡೀ ಬಾಸ್' ಎನ್ನುತ್ತಾ ಕಿರುಚಾಡಿದ್ದಾನೆ. ಅಭಿಮಾನಿ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ವಿಡಿಯೋದಲ್ಲಿ ದರ್ಶನ್ ಜೀಪ್ ಚಲಾಯಿಸುತ್ತಿದ್ದರೆ, ಪಕ್ಕದಲ್ಲಿಯೇ ಪತ್ನಿ ವಿಜಯಲಕ್ಷ್ಮಿ ಕುಳಿತಿದ್ದಾರೆ. ಹಿಂಬದಿಯ ಸೀಟ್‌ನಲ್ಲಿ ಮಗ ಕುಳಿತಿದ್ದಾನೆ. ಸಹಾಯಕರೊಬ್ಬರು ಸಹ ಜೊತೆಗೆ ಇದ್ದಾರೆ. ಅವರೂ ಸಹ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಯುವಕರನ್ನು ತಡೆಯಲು ಯತ್ನಿಸಿದ್ದಾರೆ.

ಮನವಿ ಮಾಡಿರುವ ದರ್ಶನ್ ಅಭಿಮಾನಿಗಳು
ವಿಡಿಯೋ ಹಂಚಿಕೊಂಡಿರುವ ದರ್ಶನ್ ಅಭಿಮಾನಿ ಬಳಗದ ಕೆಲವು ಪೇಜ್‌ಗಳು, ''ಎಲ್ಲ ಬಾಸ್ ಅಭಿಮಾನಿಗಳಲ್ಲಿ ಒಂದು ವಿನಂತಿ ಬಾಸ್ ಕಾರಲ್ಲಿ ಹೋಗುವಾಗ ಯಾರು ಕೂಡ ವಿಡಿಯೋ ತೆಗೆಯೋ ಕೋಸ್ಕರ ಅಥವಾ ಫೋಟೋ ತೆಗೆದು ಕೋಸ್ಕರ ಅವರನ್ನು ಹಿಂಬಾಲಿಸಿದಿರಿ ಯಾಕಂದ್ರೆ ಅವರು 150ರ ಸ್ಪೀಡಲ್ಲಿ ಹೋಗ್ತಾ ಇರ್ತಾರೆ , ಅಕಸ್ಮಾತ್ ನೀವು ಬೈಕಲ್ಲಿ ಬರುವಾಗ ಏನಾದರೂ ತೊಂದರೆ ಆದರೆ ನಿಮಗಂಥ ನಿಮ್ಮದೇ ಒಂದು ಫ್ಯಾಮಿಲಿ ಇರುತ್ತೆ ದಯವಿಟ್ಟು ಇತರ ಮಾಡಬೇಡಿ'' ಎಂದು ಮನವಿ ಮಾಡಿವೆ.

ಅಭಿಮಾನಿಗಳ ಅತಿರೇಕದ ಅಭಿಮಾನ
ದರ್ಶನ್ ತಮ್ಮ ಅಭಿಮಾನಿಗಳನ್ನು ಬಹಳ ಪ್ರೀತಿಸುತ್ತಾರೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು' ಎಂದೇ ಕರೆಯುತ್ತಾರೆ. ಆದರೆ ಇದೇ ಅಭಿಮಾನಿಗಳಿಂದ ಹಲವು ಬಾರಿ ಈ ರೀತಿಯ ಇಕ್ಕಟ್ಟಿಗೂ ಸಿಲುಕಿದ್ದಾರೆ ದರ್ಶನ್. ನಟನ ಕಾರು ಹಿಂಬಾಲಿಸುವುದು, ಮನೆಯ ಕಾಂಪೌಂಡ್ ಹಾರಿ ಒಳಗೆ ಹೋಗಲು ಯತ್ನಿಸುವುದು, ಚಿತ್ರೀಕರಣ ಸೆಟ್‌ಗೆ ಹೋಗಿ ವಿಡಿಯೋ ಚಿತ್ರೀಕರಣ ಮಾಡುವುದು. ಇನ್ನೂ ಹಲವು ಇವೆ. ದರ್ಶನ್ ಹೆಸರನ್ನು ಕೈ ಮೇಲೆ ಬರೆದುಕೊಂಡವರು, ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳು ಇದ್ದಾರೆ. ಇಂಥಹಾ ಹುಚ್ಚಾಟಗಳು ಬೇಡವೆಂದು ಹಲವು ಬಾರಿ ದರ್ಶನ್ ಹೇಳಿದ್ದಾರೆ. ಆದರೆ ಕೆಲವು ಅಭಿಮಾನಿಗಳ ಅತಿರೇಕದ ಅಭಿಮಾನ ಇನ್ನೂ ನಿಂತಿಲ್ಲ.