twitter
    For Quick Alerts
    ALLOW NOTIFICATIONS  
    For Daily Alerts

    ಕೋಟಿಗಟ್ಟಲೆ ಯೂಟ್ಯೂಬ್ ವೀವ್ಸ್‌ ಹಿಂದಿನ ಮರ್ಮ ಬಿಚ್ಚಿಟ್ಟ ಜಾಕ್ ಮಂಜು

    |

    ಸಿನಿಮಾ ಬಿಡುಗಡೆಗೆ ಮುನ್ನ ಸಿನಿಮಾದ ಟ್ರೇಲರ್, ಟೀಸರ್, ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುವುದು ರೂಢಿ. ಟೀಸರ್, ಟ್ರೇಲರ್‌ಗಳು ಹಿಟ್ ಆದರೆ ಸಿನಿಮಾ ಅರ್ಧ ಹಿಟ್ ಆದಂತೆ ಎಂಬ ನಂಬಿಕೆ.

    ಸಿನಿಮಾ ಟ್ರೇಲರ್‌ಗಳು ಹಿಟ್ ಆಗಿವೆಯೋ ಇಲ್ಲವೋ ಎಂಬುದನ್ನು ಅವುಗಳು ಯೂಟ್ಯೂಬ್‌ನಲ್ಲಿ ಎಷ್ಟು ವೀವ್ಸ್, ಲೈಕ್ಸ್ ಬಂದಿವೆ ಎಂಬುದರ ಮೇಲೆ ಅಳೆಯಲಾಗುತ್ತದೆ.

    Recommended Video

    ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ಚಿತ್ರಕ್ಕೆ ಹೆಚ್ಚಾಯ್ತು ಬೇಡಿಕೆ !

    ಕನ್ನಡದ್ದೇ ಕೆಲವು ಸಿನಿಮಾಗಳ ಟೀಸರ್, ಟ್ರೈಲರ್‌ಗಳು ದಾಖಲೆಯ ವೀವ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ ಪಡೆದಿವೆ. ತಮ್ಮ ಸಿನಿಮಾದ ಟೀಸರ್, ಟ್ರೇಲರ್ ಅಥವಾ ಹಾಡುಗಳು ಹೆಚ್ಚು ವೀವ್ಸ್‌ ಪಡೆದುದ್ದನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು, ಚಿತ್ರತಂಡದವರು ಹಂಚಿಕೊಂಡು ಹೆಮ್ಮೆ ಪಡುತ್ತಾರೆ. ಅಭಿಮಾನಿಗಳು ಸಹ, ತಮ್ಮ ನಟನ ಟೀಸರ್ ಪ್ರತಿಸ್ಪರ್ಧಿ ನಟನ ಟೀಸರ್‌ಗಿಂತ ಹೆಚ್ಚು ವೀವ್ಸ್ ಪಡೆದಿದೆ, ಹೆಚ್ಚು ಲೈಕ್ಸ್ ಪಡೆದಿದೆ ಎಂದು ಬೀಗುವುದು ಸಾಮಾನ್ಯ. ಆದರೆ ಇದರ ಹಿಂದಿನ ಮರ್ಮವನ್ನು ನಿರ್ಮಾಪಕ ಜಾಕ್ ಮಂಜು ಬಿಚ್ಚಿಟ್ಟಿದ್ದಾರೆ.

    ಹಣ ಕೊಟ್ಟು ಯೂಟ್ಯೂಬ್ ವೀವ್ಸ್ ಪಡೆಯುತ್ತಿದ್ದಾರೆ: ಜಾಕ್ ಮಂಜು

    ಹಣ ಕೊಟ್ಟು ಯೂಟ್ಯೂಬ್ ವೀವ್ಸ್ ಪಡೆಯುತ್ತಿದ್ದಾರೆ: ಜಾಕ್ ಮಂಜು

    ಮಾಧ್ಯಮಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಜಾಕ್ ಮಂಜು, ''ಯೂಟ್ಯೂಬ್ ವೀವ್ಸ್ ಎನ್ನುವುದು ನಿಜವಲ್ಲ, ಹಣ ಕೊಟ್ಟು ಯೂಟ್ಯೂಬ್ ವೀವ್ಸ್ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ರಜನೀಕಾಂತ್ ಅಂಥಹಾ ಸೂಪರ್ ಸ್ಟಾರ್ ಸಿನಿಮಾ 'ಅಣ್ಣಾತೆ'ಯ ಟೀಸರ್ ವೀವ್ಸ್ ಈಗಲೂ 12 ಮಿಲಿಯನ್ ದಾಟಿಲ್ಲ, ಅದೇ ಯಾರಾದರೂ ಹೊಸ ಹುಡುಗನ ಸಿನಿಮಾ ಟೀಸರ್ ನೋಡಿ 15 ಮಿಲಿಯನ್ ದಾಟಿರುತ್ತದೆ'' ಎಂದರು ಜಾಕ್ ಮಂಜು.

    ಒಂದು ಮಿಲಿಯನ್‌ ವೀವ್ಸ್‌ಗೆ ಎಷ್ಟು ಹಣ?

    ಒಂದು ಮಿಲಿಯನ್‌ ವೀವ್ಸ್‌ಗೆ ಎಷ್ಟು ಹಣ?

    ಯೂಟ್ಯೂಬ್‌ನಲ್ಲಿ ಹೇಗೆ ಹಣ ತೆತ್ತು ವೀವ್ಸ್ ಪಡೆಯಲಾಗುತ್ತದೆ ಎಂಬುದನ್ನು ವಿವರಿಸಿದ ಜಾಕ್ ಮಂಜು, ''ಮೊದಲ ದಿನವೇ 5 ಮಿಲಿಯನ್ ವೀವ್ಸ್ ಬೇಕೆಂದರೆ ಒಂದು ಮಿಲಿಯನ್‌ ವೀವ್ಸ್‌ಗೆ 2.20 ಅಥವಾ 2.30 ಲಕ್ಷ ರುಪಾಯಿ ಹಣ ಪಾವತಿ ಮಾಡಬೇಕಾಗುತ್ತದೆ. ಹಣ ಪಾವತಿ ಮಾಡಿದಾಗ ಯೂಟ್ಯೂಬ್ ಸಂಸ್ಥೆಯು ಟೀಸರ್ ಅಥವಾ ಟ್ರೈಲರ್ ಅನ್ನು ಪುಶ್ ಮಾಡುತ್ತಾರೆ ಆವಾಗ ಅದಕ್ಕೆ ಹೆಚ್ಚಿನ ಸಂಖ್ಯೆಯ ವೀವ್ಸ್ ದೊರೆಯುತ್ತದೆ. ಈ ರೀತಿಯ ವೀವ್ಸ್‌ಗಳು ವೀಕ್ಷಕನ ಸ್ವಯಿಚ್ಛೆಯಿಂದ ಬಂದಿರುವಂಥಹವು ಅಲ್ಲ. ಯೂಟ್ಯೂಬ್‌ನವರು ಪುಶ್ ಮಾಡಿದ್ದಕ್ಕಾಗಿ ಹೆಚ್ಚು ವೀವ್ಸ್ ಬಂದಿರುತ್ತದೆ'' ಎಂದಿದ್ದಾರೆ ಜಾಕ್ ಮಂಜು.

    ಅಭಿಮಾನಿಗಳು ಒತ್ತಾಯ ಮಾಡುತ್ತಾರೆ: ಜಾಕ್ ಮಂಜು

    ಅಭಿಮಾನಿಗಳು ಒತ್ತಾಯ ಮಾಡುತ್ತಾರೆ: ಜಾಕ್ ಮಂಜು

    ''ವೀವ್ಸ್ ನೋಡಿ ಮಾರು ಹೋಗುವುದಾಗಲಿ ಅಥವಾ ಹಣ ಕೊಟ್ಟು ವೀವ್ಸ್ ಖರೀದಿಸುವುದಾಗಲಿ ಮೋಸ ಮಾಡಿದಂತೆ. ನಾನು ಸಹ ನಿರ್ಮಾಪಕರಿಗೆ ಹೇಳುತ್ತಿರುತ್ತೇನೆ, ವೀವ್ಸ್ ನೋಡಿ ಸಿನಿಮಾ ಖರೀದಿ ಮಾಡುವುದಿಲ್ಲ ಎಂದು. ಹಣ ಕೊಟ್ಟು ವೀವ್ಸ್ ಖರೀದಿ ಹೆಚ್ಚಾಗುತ್ತಿರುವುದಕ್ಕೆ ಅಭಿಮಾನಿಗಳ ಒತ್ತಾಯವೂ ಕಾರಣ ಎಂದ ಜಾಕ್ ಮಂಜು, ಬೇರೊಬ್ಬ ನಟರ ಟ್ರೇಲರ್ ಅಷ್ಟು ವೀವ್ಸ್ ಪಡೆದಿದೆ, ನಮ್ಮ ನಟನ ಸಿನಿಮಾ ಸಹ ಪಡೆಯಬೇಕು ಎಂದು ಪ್ರೊಡಕ್ಷನ್ ಹೌಸ್‌ಗಳ ಮೇಲೆ ಒತ್ತಡ ಹೇರುತ್ತಾರೆ. ಆವಾಗ ಅವರೂ ಹೀಗೆ ಹಣ ಕೊಟ್ಟು ವೀವ್ಸ್ ಖರೀದಿಸಲು ಹೊರಡುತ್ತಾರೆ'' ಎಂದಿದ್ದಾರೆ ಜಾಕ್ ಮಂಜು.

    'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜು

    'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜು

    ಜಾಕ್ ಮಂಜು, ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಭಾರಿ ಬಜೆಟ್‌ನ ಈ ಸಿನಿಮಾವನ್ನು ಫೆಬ್ರವರಿ 24 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಇದೀಗ ಕೊರೊನಾ ಪರಿಸ್ಥಿತಿಯಿಂದಾಗಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ 50% ಆಕ್ಯುಪೆನ್ಸಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಹಾಗಾಗಿ ಸಿನಿಮಾವನ್ನು ನಿಗದಿ ಪಡಿಸಿದ ದಿನಾಂಕಕ್ಕೆ ಬಿಡುಗಡೆ ಮಾಡಲಾಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ. 'ವಿಕ್ರಾಂತ್ ರೋಣ' ಸಿನಿಮಾಕ್ಕೆ ಬಹಳ ದೊಡ್ಡ ಆಫರ್‌ ಅನ್ನು ಒಟಿಟಿ ನೀಡಿದ್ದರೂ ಸಿನಿಮಾವನ್ನು ಮಾರದೆ ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಲು ಜಾಕ್ ಮಂಜು ಕಾಯುತ್ತಿದ್ದಾರೆ.

    English summary
    Producer Jack Manju said some producers paying YouTube to get views for their movie teasers and trailers.
    Monday, January 17, 2022, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X