Don't Miss!
- Sports
IND vs NZ 3rd ODI: ವಿರಾಟ್ ಕೊಹ್ಲಿಗಾಗಿ ತನ್ನ ವಿಕೆಟ್ ತ್ಯಾಗ ಮಾಡಿದ ಇಶಾನ್ ಕಿಶನ್; ವಿಡಿಯೋ
- Finance
7th Pay Commission:ಡಿಎ ವಿತರಣೆ ಶೀಘ್ರ, ಸರ್ಕಾರ ಫಿಟ್ಮೆಂಟ್ ಅಂಶ ಏರಿಕೆ ಮಾಡುವ ಸಾಧ್ಯತೆ
- News
ಗರ್ಭಕೋಶದ ಕ್ಯಾನ್ಸರ್ಗೆ ಭಾರತದ ಮೊದಲ ಲಸಿಕೆ ಬಿಡುಗಡೆ
- Lifestyle
ಚಾಣಕ್ಯ ಪ್ರಕಾರ ನಿಜವಾದ ಫ್ರೆಂಡ್ ಅಂತ ಗುರುತಿಸುವುದು ಹೇಗೆ ಗೊತ್ತಾ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಂಜಾಬಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಕರಾವಳಿಯ ಬೆಡಗಿ
'ಪಂಚತಂತ್ರ' ಚಿತ್ರದ ಮೂಲಕ ಗುರುತಿಸಿಕೊಂಡ ಕರಾವಳಿಯ ಬೆಡಗಿ ಸೋನಾಲ್ ಮಾಂಟೆರೊ, ಪಂಜಾಬಿ ಭಾಷೆ ಕಲಿಯಲು ಆರಂಭಿಸಿದ್ದಾರೆ. ತುಳು ಮತ್ತು ಕನ್ನಡ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್, ಬಾಲಿವುಡ್‌ನಲ್ಲಿ ಹೆಜ್ಜೆ ಗುರುತು ಮೂಡಿಸುವ ವೇಳೆಯೇ ಪಂಜಾಬಿ ಚಿತ್ರರಂಗವನ್ನೂ ನೋಡಿ ಬರಲು ಹೊರಟಿದ್ದಾರೆ.
ಹೊಸ ಭಾಷೆ ಕಲಿಯಲು ಮತ್ತು ಹೊಸ ಭಾಷೆಯ ಸಿನಿಮಾಗಳಲ್ಲಿ ನಟಿಸಲು ಉತ್ಸುಕರಾಗಿರುವ ಸೋನಾಲ್, ಪಂಜಾಬಿ ಭಾಷೆಯ ಗುಣಗಳನ್ನು ತಿಳಿಯಲು ಪಂಜಾಬಿ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದಾರಂತೆ. ಲಾಕ್ ಡೌನ್ ಅವಧಿಯನ್ನು ಅವರು ಈ ಕೆಲಸಕ್ಕಾಗಿ ಹೆಚ್ಚು ಬಳಸಿಕೊಂಡಿದ್ದಾರೆ.
'ಪಂಚತಂತ್ರ'
ಶೃಂಗಾರದ
ಹಾಡಿನ
ವಿಡಿಯೋ
ನೋಡಿ
ಮಂಗಳೂರಿನಲ್ಲಿ ಲಾಕ್ ಡೌನ್ ಸಮಯ ಕಳೆದಿರುವ ಅವರು ಬೆಂಗಳೂರಿಗೆ ಬಂದ ಬಳಿಕ ಪಂಜಾಬಿ ಚಿತ್ರರಂಗದ ಪಾದಾರ್ಪಣೆಗೆ ಮುನ್ನುಡಿ ಬರೆಯಲಿದ್ದಾರೆ. ಪಂಜಾಬ್‌ನ ಜನಪ್ರಿಯ ನಟರಾದ ಗುರುದಾಸ್ ಮನ್, ರಾಜ್ವೀರ್ ಸಿಂಗ್ ಮತ್ತು ಅವ್ಜಿಂದರ್ ಗ್ರೇವಲ್ ಸೇರಿದಂತೆ ವಿವಿಧ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.
ರಾಬರ್ಟ್ ಚಿತ್ರದಲ್ಲಿ ಆಶಾ ಭಟ್ ಜತೆಗೆ ಇರುವ ನಾಯಕಿಯರಲ್ಲಿ ಒಬ್ಬರಾಗಿರುವ ಸೋನಾಲ್, ವಸಿಷ್ಠ ಸಿಂಹ ನಾಯಕರಾಗಿರುವ 'ತಲ್ವಾರ್ ಪೇಟೆ' ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಹಾಗೆಯೇ ಅವರ ನಟನೆಯ 'ಬನಾರಸ್' ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ.