Don't Miss!
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯುವ ಪೀಳಿಗೆಯ ದಾಂಪತ್ಯ ಸಮಸ್ಯೆಗಳಿಗೆ ವೆಡ್ಡಿಂಗ್ ಗಿಫ್ಟ್‌ನಲ್ಲಿ ಮದ್ದು ಇದೆಯಾ?
ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ಸೋಶಿಯಲ್ ಮೆಸೇಜ್ ಅನ್ನು ಒಳಗೊಂಡ ಸಾಕಷ್ಟು ನಿರೀಕ್ಷೆ ಮೂಡಿಸಿರುವ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಸದ್ಯ ಬಿಡುಗಡೆಗೆ ಸಜ್ಜಾಗಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ನಂತ್ರ ವೈಯಕ್ತಿಕ ಕಾರಣದಿಂದ ಪುಣೆಗೆ ಹೋಗಿದ್ದ ವಿಕ್ರಂ ಪ್ರಭು ಅವರು 'ವೆಡ್ಡಿಂಗ್ ಗಿಫ್ಟ್' ಅನ್ನುವ ಉತ್ತಮ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ನಿಶಾನ್, ಸೋನು ಗೌಡ, ಖ್ಯಾತ ನಟಿ ಪ್ರೇಮ ಲೀಡ್ ರೋಲ್‌ನಲ್ಲಿರುವ ಈ ಸಿನಿಮಾ ತನ್ನದೇ ಆದ ಕೆಲ ವಿಶೇಷತೆಗಳ ಮೂಲಕ ಭರವಸೆ ಮೂಡಿಸಿದೆ.
ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ನವ ಪ್ರೇಮಿಗಳ ಬದುಕಿನಲ್ಲಿ ಹೇಗೆ ಬಿರುಕು ಮೂಡುತ್ತೆ? ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಪತ್ನಿ ಸ್ತ್ರೀ ಪರವಾದ ಕಾನೂನನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ತಾಳೆ? ಮಹಿಳೆಯರಿಂದಲೇ ಇಂತಹ ಕಾನೂನು ದುರ್ಬಳಕೆಯಿಂದಾಗಿ ಸಮಾಜದಲ್ಲಿ ಪುರುಷರು ಹೇಗೆ ನಲುಗುತ್ತಿದ್ದಾರೆ? ಅನ್ನುವ ಸೂಕ್ಷ್ಮ ವಿಚಾರಗಳನ್ನು ತಮ್ಮ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು.
ಸೋಶಿಯಲ್ ಮೆಸೇಜ್ ಜೊತೆಗೆ ಮನೋರಂಜನೆಯ ಅಂಶಗಳನ್ನು ಸೇರಿಸಿ ಪ್ರೇಕ್ಷಕರಿಗೆ ಎಲ್ಲಿಯೂ ಬೇಸರ ಮೂಡದ ಹಾಗೆ ಬಹಳ ಅಚ್ಚುಕಟ್ಟಾಗಿ ಸಿನಿಮಾ ಮಾಡಲಾಗಿದೆ ಅನ್ನೋದು ಚಿತ್ರದ ಟೀಸರ್, ಟ್ರೈಲರ್ ಗಳನ್ನು ನೋಡಿದ್ರೆ ತಿಳಿಯುತ್ತೆ.
ಅಂದಹಾಗೆ ಕನ್ನಡದ ಸ್ಟಾರ್ ನಟಿ ಪ್ರೇಮ ಈ ಸಿನಿಮಾದಲ್ಲಿ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೂ ನಾಯಕನಾಗಿ ನಿಶಾನ್ ಕಾಣಿಸಿಕೊಂಡಿದ್ರೆ, ನಾಯಕಿಯಾಗಿ ಸೋನು ಗೌಡ ಸಹ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಪವಿತ್ರಾ ಲೋಕೇಶ್,ಅಚ್ಯುತ್ ಕುಮಾರ್ ಇನ್ನೂ ಮುಂತಾದ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಬಾಲಚಂದ್ರ ಪ್ರಭು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳೂ ಕೂಡ ಸೊಗಸಾಗಿ ಮೂಡಿ ಬಂದಿವೆ.

ಸಿನಿಮಾ ನಿರ್ದೇಶನದ ಜೊತೆಗೆ ವಿಕ್ರಂ ಪ್ರಭು ಅವರು ತಮ್ಮದೇ ವಿಕ್ರಂ ಪ್ರಭು ಫಿಲ್ಮ್ಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಉದಯ್ ಲೀಲ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಒಟ್ಟಾರೆ ಸಾಕಷ್ಟು ಕುತೂಹಲ ಮೂಡಿಸಿರುವ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಜುಲೈ 8 ರಂದು ಬಿಗ್ ಸ್ಕ್ರೀನ್‌ನಲ್ಲಿ ಅನಾವರಣಗೊಳ್ಳಲಿದೆ.