For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನ ಸುದ್ದಿ ಖಚಿತಪಡಿಸಿದ ರಜನಿ ಪುತ್ರಿ ಸೌಂದರ್ಯ

  By Sony
  |

  ಇತ್ತೀಚೆಗೆ ಎಲ್ಲಾ ಸೆಲೆಬ್ರಿಟಿಗಳ ಸಂಸಾರದಲ್ಲಿ ಬಿರುಕು, 2016 ಸೆಲೆಬ್ರಿಟಿಗಳಿಗೆ ಅತ್ಯಂತ ಕೆಟ್ಟ ವರ್ಷವಾಗಿ ಪರಿಣಮಿಸಿದೆ.

  ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಸಂಸಾರದಲ್ಲಿ ಬಿರುಗಾಳಿ ಎದ್ದು, ಅವರಿಬ್ಬರು ವಿಚ್ಛೇದನ ಹಾದಿ ಹಿಡಿದ ಬೆನ್ನಲ್ಲೆ, ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಮಗಳ ಸಂಸಾರಕ್ಕೂ ಬೆಂಕಿ ಬಿದ್ದಿದೆ.[ರಜನಿ ಎರಡನೇ ಮಗಳು ಸೌಂದರ್ಯಾ ವಿಚ್ಛೇದನದ ಸುದ್ದಿ ನಿಜವಾ?]

  ಗ್ರಾಫಿಕ್ ಡಿಸೈನ್ ಜೊತೆಗೆ ಸಿನಿಮಾ ನಿರ್ಮಾಣ-ನಿರ್ದೇಶನ ಮಾಡುತ್ತಿದ್ದ ಸೌಂದರ್ಯ ರಜನಿಕಾಂತ್ ಅವರು, ತಮ್ಮ ಉದ್ಯಮಿ ಪತಿ ಅಶ್ವಿನ್ ರಾಮ್ ಕುಮಾರ್ ಅವರಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಮುಂದೆ ಓದಿ.....

  ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ

  ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ

  ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಮಗಳು ಸೌಂದರ್ಯ ರಜನಿಕಾಂತ್ ಮತ್ತವರ ಪತಿ ಖ್ಯಾತ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಈಗಾಗಲೇ ಇವರಿಬ್ಬರು ಕೌಟುಂಬಿಕ ನ್ಯಾಯಾಲಕ್ಕೆ ವಿಚ್ಛೇದನ ಅರ್ಜಿ ಕೂಡ ಸಲ್ಲಿಸಿದ್ದಾರೆ.[ಸೌಂದರ್ಯ ರಜನಿಕಾಂತ್ ವೆಡ್ಸ್ ಅಶ್ವಿನಿ ಕುಮಾರ್!]

  ಒಪ್ಪಿಕೊಂಡ ಸೌಂದರ್ಯ ರಜನಿಕಾಂತ್

  ಒಪ್ಪಿಕೊಂಡ ಸೌಂದರ್ಯ ರಜನಿಕಾಂತ್

  ಈ ಮೊದಲು ಇವರಿಬ್ಬರ ಸಂಸಾರದ ಬಗ್ಗೆ ಅಂತೆ-ಕಂತೆ ಸುದ್ದಿಗಳು ಹರಿದಾಡಿದ್ದವು. ಇದೀಗ ಖುದ್ದು ಸೌಂದರ್ಯ ರಜನಿಕಾಂತ್ ಅವರೇ ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ನಿಜಾಯಿತಿ ಒಪ್ಪಿಕೊಂಡಿದ್ದಾರೆ.[ರಜನಿಕಾಂತ್ ಮಗಳು ಸೌಂದರ್ಯ ನಿಶ್ಚಿತಾರ್ಥ]

  ಸೌಂದರ್ಯ ರಜನಿಕಾಂತ್ ಹೇಳಿಕೆ

  ಸೌಂದರ್ಯ ರಜನಿಕಾಂತ್ ಹೇಳಿಕೆ

  "ನನ್ನ ದಾಂಪತ್ಯದ ಬಿರುಕಿನ ಬಗ್ಗೆ ಕೇಳಿ ಬರುತ್ತಿರುವ ಸುದ್ದಿ ನಿಜ. ನಾವಿಬ್ಬರೂ ಬೇರೆಯಾಗುವ ಬಗ್ಗೆ ತುಂಬಾ ಸಮಯಗಳಿಂದ ಚಿಂತಿಸಿದ್ದೇವು. ಇದೀಗ ಅದು ಪರಸ್ಪರ ಡೈವೋರ್ಸ್ ಮೂಲಕ ನೆರವೇರುತ್ತಿದೆ. ನಮ್ಮ ಕೌಟುಂಬಿಕ ಸಮಾಚಾರ ಮತ್ತು ನಮ್ಮ ಖಾಸಗಿ ವಿಚಾರವನ್ನು ನೀವೆಲ್ಲರೂ ಗೌರವಿಸಬೇಕು" ಅಂತ ಸೌಂದರ್ಯ ರಜನಿಕಾಂತ್ ಅವರು ಟ್ವೀಟ್ ಮಾಡಿದ್ದಾರೆ.[ರಜನಿಕಾಂತ್ ಮಗಳಿಗೆ ಕೂಡಿಬಂತು ಕಂಕಣ]

  ಪ್ರೀತಿಸಿ ಮದುವೆಯಾಗಿದ್ದ ಸೌಂದರ್ಯ ರಜನಿಕಾಂತ್

  ಪ್ರೀತಿಸಿ ಮದುವೆಯಾಗಿದ್ದ ಸೌಂದರ್ಯ ರಜನಿಕಾಂತ್

  ಸುಮಾರು 4 ವರ್ಷಗಳ ಕಾಲ ಪ್ರೀತಿಸಿ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸೌಂದರ್ಯ ಮತ್ತು ಅಶ್ವಿನ್ ಅವರು ಮದುವೆಯಾಗಿದ್ದರು. ಈ ದಂಪತಿಗಳಿಗೆ ವೇದ್ ಎನ್ನುವ ಒಂದು ವರ್ಷದ ಮಗನಿದ್ದಾನೆ.[ಸೌಂದರ್ಯಾ ರಜನಿಕಾಂತ್ ಗೆ ಒಂದು ಬಹಿರಂಗ ಪತ್ರ]

  ಇಬ್ಬರಲ್ಲೂ ಭಿನ್ನಾಭಿಪ್ರಾಯ

  ಇಬ್ಬರಲ್ಲೂ ಭಿನ್ನಾಭಿಪ್ರಾಯ

  ಸುಂದರವಾಗಿ ಸಾಗುತ್ತಿದ್ದ ಸೌಂದರ್ಯ ಮತ್ತು ಅಶ್ವಿನ್ ಕುಮಾರ್ ಅವರ ಸಂಸಾರ ಸರಿಗಮಪದಲ್ಲಿ, ಕಳೆದ ಕೆಲವು ಸಮಯಗಳಿಂದ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅದು ಸರಿಹೋಗದ ಪರಿಣಾಮ ಇದೀಗ ವಿಚ್ಛೇದನಕ್ಕೆ ಎಡೆ ಮಾಡಿಕೊಟ್ಟಿದೆ.[ಓಹೋ..! ರಜನಿಕಾಂತ್ ಪುತ್ರಿಯರ ತಲೆಯಲ್ಲಿ ಹೀಗೂ ಉಂಟು.!]

  ಅಪ್ಪ ಮಾತಾಡಿದರೂ ಸರಿ ಹೋಗಲಿಲ್ಲ

  ಅಪ್ಪ ಮಾತಾಡಿದರೂ ಸರಿ ಹೋಗಲಿಲ್ಲ

  ಅಮೆರಿಕದಿಂದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈಗೆ ವಾಪಸಾದ ಬಳಿಕ, ಮಗಳು ಸೌಂದರ್ಯ ಜೊತೆಗೆ ಕೆಲವು ದಿನಗಳ ಕಾಲ ಇದ್ದು, ದಂಪತಿಗಳನ್ನು ಕೂರಿಸಿ ಮಾತಾಡಿ, ರಾಜಿ ಮಾಡಲು ಪ್ರಯತ್ನಪಟ್ಟಿದ್ದರಂತೆ. ಆದರೆ ರಜಿನಿ ಅವರ ಪ್ರಯತ್ನ ಫಲ ಕೊಡಲಿಲ್ಲ.[ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ ಸೂಪರ್ ಸ್ಟಾರ್ ರಜನಿ ಪುತ್ರಿ!?]

  ಸಿನಿಮಾದಲ್ಲಿ ಬಿಜಿಯಾದ ಸೌಂದರ್ಯ

  ಸಿನಿಮಾದಲ್ಲಿ ಬಿಜಿಯಾದ ಸೌಂದರ್ಯ

  ಇತ್ತ ತನ್ನ ಸಂಸಾರದಲ್ಲಿ ಭಾರಿ ಬಿರುಗಾಳಿ ಎದ್ದಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೌಂದರ್ಯ ಅವರು, ತಮ್ಮ ಮುಂದಿನ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ನಿರ್ದೇಶನದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

  English summary
  Kollywood Super star Rajinikanth’s second daughter Soundarya and her industrialist-husband Ashwin Ramkumar have filed a petition for divorce in the family court. Soundarya Rajnikanth confirmed the news later in the day with a tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X