»   » ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ ಸೂಪರ್ ಸ್ಟಾರ್ ರಜನಿ ಪುತ್ರಿ!?

ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ ಸೂಪರ್ ಸ್ಟಾರ್ ರಜನಿ ಪುತ್ರಿ!?

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಅಶ್ವಿನ್ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಹಾಗಂದ ಮಾತ್ರಕ್ಕೆ ಸೌಂದರ್ಯ ಮರಳಿ ತಮ್ಮ ಅಪ್ಪನಿಗಾಗಿ ಚಿತ್ರ ನಿರ್ದೇಶನ ಮಾಡುತ್ತಾರೆ ಅಂತಲ್ಲ.

ನಿಜಹೇಳ್ಬೇಕಂದ್ರೆ, ವಿಶ್ವದಾದ್ಯಂತ ಸದ್ದು-ಸುದ್ದಿ ಮಾಡಿದ್ದ 'ಕೋಚಡಯ್ಯಾನ್' ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿದ್ದ ಮೇಲೆ ಸೌಂದರ್ಯಗೆ ಜ್ಞಾನೋದಯವಾದಂತಿದೆ. ನಿರ್ದೇಶನದ ಸಹವಾಸವೇ ಬೇಡ ಅಂತ ಮರಳಿ ಹಳೇ ಕೆಲಸ, ಅಂದ್ರೆ ಗ್ರಾಫಿಕ್ಸ್ ಡಿಸೈನಿಂಗ್ ನಲ್ಲಿ ಮುಳುಗಿರುವ ಸೌಂದರ್ಯಗೆ ಇದ್ದಿಕ್ಕಿದ್ದಂತೆ ಚಿತ್ರ ನಿರ್ಮಾಣ ಮಾಡುವ ಬಯಕೆಯಾಗಿದೆ.


Soundarya Rajinikanth to produce a Kannada film directed by Santhosh Annandram

ಆದ್ರೆ, ಕಾಲಿವುಡ್ ತಂಟೆಗೆ ಹೋಗಲ್ಲ ಅನ್ನುತ್ತಿರುವ ಸೌಂದರ್ಯಗೆ, ತಮ್ಮ ಅಪ್ಪನ ತವರು ನೆಲ ನೆನಪಾಗಿದೆ. ಕನ್ನಡದಲ್ಲಿ ಒಂದು ಚಿತ್ರ ನಿರ್ಮಾಣ ಮಾಡುವ ಬಗ್ಗೆ ಯೋಚಿಸುತ್ತಿದ್ದಾರಂತೆ ಸೂಪರ್ ಸ್ಟಾರ್ ಪುತ್ರಿ. [ಇದೀಗ ಬಂದ ಸುದ್ದಿ: ರಜನಿಕಾಂತ್ ಅಭಿಮಾನಿಗಳಿಗೆ ಶಾಕ್!]


ಹಾಗೆ, ಸ್ಯಾಂಡಲ್ ವುಡ್ ಬಗ್ಗೆ ಸೌಂದರ್ಯ ತಲೆಕೆಡಿಸಿಕೊಳ್ಳುವುದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ.


ಸಾಗರದಾಚೆಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ತಮಿಳುನಾಡಿನಲ್ಲೂ ಸಂಚಲನ ಉಂಟು ಮಾಡುತ್ತಿದೆ. ರಾಮಾಚಾರಿಯ ಕಲೆಕ್ಷನ್ ರೆಕಾರ್ಡ್ ಕೇಳಿ ಧಂಗಾಗಿರುವ ಸೌಂದರ್ಯ, ಕಡಿಮೆ ಬಜೆಟ್ ನಲ್ಲಿ ಉತ್ತಮ ಕನ್ನಡ ಸಿನಿಮಾಗೆ ಬಂಡವಾಳ ಹಾಕುವುದಕ್ಕೆ ಮುಂದೆ ಬಂದಿದ್ದಾರಂತೆ.


Soundarya Rajinikanth to produce a Kannada film directed by Santhosh Annandram

ಸೌಂದರ್ಯ ಒಡೆತನದ Ocher Picture Productions ಮತ್ತು ಸೌಂದರ್ಯ ನಿರ್ದೇಶಕಿಯಾಗಿರುವ Eros International ಸಂಸ್ಥೆಯ ಮುಖಾಂತರ ಕನ್ನಡ ಚಿತ್ರ ನಿರ್ಮಿಸಲಿದ್ದಾರಂತೆ. ಹಾಗಾದ್ರೆ, ಕನ್ನಡ ಚಿತ್ರಕ್ಕೆ ಸೌಂದರ್ಯ ಗೊತ್ತು ಮಾಡಿರುವ ನಿರ್ದೇಶಕ ಯಾರು ಅನ್ನುವ ಪ್ರಶ್ನೆಗೆ ಉತ್ತರ ಕೇಳಿ ನೀವೇ ಬಾಯಿಯ ಮೇಲೆ ಬೆರಳಿಡುತ್ತೀರಾ!


ಅಂತಹ ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡಿರುವುದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಅನಂದರಾಮ್. ಈಗಾಗಲೇ Eros International ಮತ್ತು Ocher Picture Productions ಸಂಸ್ಥೆ ಕಡೆಯಿಂದ ಸಂತೋಷ್ ಅನಂದರಾಮ್ ಗೆ ಕರೆ ಬಂದಿದೆ. ['ರಾಮಾಚಾರಿ' ನಿರ್ದೇಶಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!]


Soundarya Rajinikanth to produce a Kannada film directed by Santhosh Annandram

''Eros International ಮತ್ತು Ocher Picture Productions ಸಂಸ್ಥೆಯಿಂದ ಆಫರ್ ಬಂದಿರುವುದು ನಿಜ. ನನ್ನ ಸಿನಿಮಾ ನೋಡಿ, ಮೆಚ್ಚಿಕೊಂಡು ಅವಕಾಶ ಕೊಟ್ಟಿದ್ದಾರೆ. ಸದ್ಯಕ್ಕೆ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಇದೆ. ಅದರ ಪ್ರೀ-ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿಯಿದ್ದೀನಿ. ಅದು ಮುಗಿದ ಬಳಿಕ ಈ ಪ್ರಾಜೆಕ್ಟ್'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಸಂತೋಷ್ ಅನಂದರಾಮ್ ಹೇಳಿದ್ದಾರೆ.


ಅಲ್ಲಿಯವರೆಗೂ ಪ್ಲಾನ್ ನಲ್ಲಿ ಯಾವುದೇ ಬದಲಾವಣೆ ಆಗದೆ ಇದ್ದರೆ, ಕನ್ನಡಿಗನ ಪ್ರತಿಭೆ ಗುರುತಿಸಿ ಕನ್ನಡ ನೆಲಕ್ಕೆ ರಜನಿಕಾಂತ್ ಪುತ್ರಿ ಸೌಂದರ್ಯ ಕಾಲಿಡುವುದು ಖಚಿತ.(ಫಿಲ್ಮಿಬೀಟ್ ಕನ್ನಡ)

English summary
Superstar Rajinikanth daughter Soundarya Rajinikanth is keen to produce a Kannada Film Directed by Santhosh Annandram of 'Mr and Mrs Ramachari' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada