»   » ಫಾರ್ಮ್ ಹೌಸಿನಲ್ಲಿ ಅಂಗರಕ್ಷಕರ ಸಹಿತ ನಟಿ ಬಂಧನ

ಫಾರ್ಮ್ ಹೌಸಿನಲ್ಲಿ ಅಂಗರಕ್ಷಕರ ಸಹಿತ ನಟಿ ಬಂಧನ

Posted By:
Subscribe to Filmibeat Kannada

ನವದೆಹಲಿ, ಮೇ 29: ದಕ್ಷಿಣ ಭಾರತದ ಮಾಡೆಲ್ ಕಂ ನಟಿ ಲೀನಾ ಮರಿಯಾ ಪಾಲ್ (25) ಅವರನ್ನು ಆಕೆಯ ನಾಲ್ವರು ಖಾಸಗಿ ಅಂಗರಕ್ಷಕರ ಸಹಿತ ದಕ್ಷಿಣ ದೆಹಲಿಯ ಫಾರ್ಮ್ ಹೌಸಿನಲ್ಲಿ ಮಂಗಳವಾರ ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ. ನಟಿ ಲೀನಾ ಅವರ ಅಪ್ಪ-ಅಮ್ಮ ದುಬೈನಲ್ಲಿ ವಾಸವಾಗಿದ್ದು ಅಪ್ಪ ಇಂಜಿನಿಯರ್ ಆಗಿದ್ದಾರೆ.

ಚೆನ್ನೈನಲ್ಲಿ ಬ್ಯಾಂಕಿಗೆ ವಂಚಿಸಿ, ಐದಾರು ಐಷಾರಾಮಿ ಕಾರುಗಳನ್ನು ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ ಎನ್ನಲಾಗಿದೆ. ಚೆನ್ನೈನ ಕೆನರಾ ಬ್ಯಾಂಕಿನಲ್ಲಿ ಲೀನಾ ಒಟ್ಟು 19 ಕೋಟಿ ರೂ. ವಂಚಿಸಿದ್ದರು ಎನ್ನಲಾಗಿದೆ.

Bank Fraud- South actress Leena Maria Paul held alongwith bodyguards

ಈಕೆಯ ಜತೆಗಿದ್ದ ಬೆಂಗಳೂರಿನ ಬಾಲಾಜಿ ಅಲಿಯಾಸ್ ಚಂದ್ರಶೇಖರ್ ಎಂಬಾತ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದಾನೆ. ವಂಚನೆ ಪ್ರಕರಣದ ಸುಳಿವರಿತಿದ್ದ ಲೀನಾ, ದೆಹಲಿಯಲ್ಲಿ ಬಾಲಾಜಿ ಫಾರ್ಮ್ ಹೌಸಿನಲ್ಲಿ 15 ದಿನಗಳಿಂದ ತಲೆಮರೆಸಿಕೊಂಡಿದ್ದರು.

ಖ್ಯಾತ ನಟ ಮೋಹನ್‌ಲಾಲ್ ಅಭಿನಯದ 'ರೆಡ್ ಚಿಲ್ಲೀಸ್' ಸೇರಿದಂತೆ ಮದ್ರಾಸ್ ಕೆಫೆ, ಹಸ್ಬೆಂಡ್ಸ್ ಇನ್ ಗೋವಾ, ಕೋಬ್ರಾ ಮುಂತಾದ ಚಿತ್ರಗಳಲ್ಲಿ ಲೀನಾ ನಟಿಸಿದ್ದಾರೆ.

ದೆಹಲಿ ಪೊಲೀಸರು ಹಾಗೂ ಚೆನ್ನೈ ಕ್ರೈಂ ಬ್ರಾಂಚ್ ಪೊಲೀಸರು ಫತೇಪುರ್‌ ಬೆರಿ ಪ್ರದೇಶದಲ್ಲಿರುವ ಖಾರಿ ಫಾರ್ಮ್ಸ್ ಬಳಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ( ವಂಚನೆ), ಸೆಕ್ಷನ್ 120 ಬಿ ( ಕ್ರಿಮಿನಲ್ ಸಂಚು) ಹಾಗೂ ಸೆಕ್ಷನ್ 406 (ವಿಶ್ವಾಸದ್ರೋಹ) ಅನ್ವಯ ಲೀನಾ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ದಾಳಿಯ ವೇಳೆ ಆರೋಪಿಗಳ ಬಳಿಯಿದ್ದ ಬಿಎಂಡಬ್ಲ್ಯು, ರೋಲ್ಸ್‌ ರಾಯ್ಸ್, ಲ್ಯಾಂಡ್‌ ಕ್ರೂಸರ್‌, ಲ್ಯಾಂಡ್‌ ರೋವರ್‌ ಐಶಾರಾಮಿ ಕಾರುಗಳು, 81 ದುಬಾರಿ ವಾಚುಗಳು ಮತ್ತು ನಾಲ್ಕು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಕಾರ್ಯಾಚರಣೆಯ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಓದಿ.

English summary
A 25-year-old south Indian actress and her male friend Balaji were rrested from a south Delhi farmhouse where they were hiding in a bid to evade law in a case of cheating registered in Chennai. Leena and Balaji were wanted in a number of cheating cases, including one involving Canara Bank of Rs 19 crore and another of Rs 76 lakh.
Please Wait while comments are loading...