»   » ಅಮ್ಮನಾದ 'ನಿನ್ನೆ ಪ್ರೀತಿಸುವೆ' ಖ್ಯಾತಿಯ ತಾರೆ ರಾಶಿ

ಅಮ್ಮನಾದ 'ನಿನ್ನೆ ಪ್ರೀತಿಸುವೆ' ಖ್ಯಾತಿಯ ತಾರೆ ರಾಶಿ

Posted By:
Subscribe to Filmibeat Kannada

ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲೇ ಜನಪ್ರಿಯ ತಾರೆಯಾಗಿ ಮೆರೆದ ನಟಿ ರಾಶಿ ಮದುವೆಯಾದ ಬಳಿಕ ಬಣ್ಣದ ಜಗತ್ತಿನಿಂದ ದೂರ ಸರಿದಿದ್ದರು. ಇದೀಗ ಅವರು ತಾಯಿಯಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ (ಸೆ.26) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ರಾಸಿ ಅವರ ಕುಟುಂಬ ಮೂಲಗಳು ತಿಳಿಸಿವೆ. ತನಗೆ ಮಗುವಾಗಿರುವ ಬಗ್ಗೆ ರಾಶಿ ಸಂತಸ ವ್ಯಕ್ತಪಡಿಸುತ್ತಾ, ತಮ್ಮ ಮನೆಗೆ ಶುಕ್ರವಾರ ಮಹಾಲಕ್ಷ್ಮಿ ಬಂದಿದ್ದಾರೆ ಎಂದಿದ್ದಾರೆ.

Actress Raasi

ಕನ್ನಡದ ರಾಜ ನರಸಿಂಹ, ನಿನ್ನೇ ಪ್ರೀತಿಸುವೆ, ಜಮೀನ್ದಾರ್ರು, ಸ್ನೇಹ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ರಾಶಿ. ಒಂದು ಕಾಲದಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ಬಿಜಿಯಾಗಿದ್ದ ತಾರೆ. ವೃತ್ತಿ ಬದುಕಿನ ಏರಿಳಿತಗಳನ್ನು ಕಂಡ ರಾಶಿ ಕಡೆಕಡೆಗೆ ಪೋಷಕ ಪಾತ್ರಗಳಲ್ಲಿ, ಪ್ರಾಧಾನ್ಯತೆಯೇ ಇಲ್ಲದ ಪಾತ್ರಗಳಲ್ಲಿ ಕಾಣಿಸಿಕೊಂಡು ತೆರೆಮರೆಗೆ ಸರಿದರು.

ಬಾಲಿವುಡ್ ಚಿತ್ರರಂಗದಿಂದ ವೃತ್ತಿ ಬದುಕು ಆರಂಭಿಸಿದ ರಾಶಿ ದಕ್ಷಿಣದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಖಳನಾಯಕಿಯಾಗಿ, ಐಟಂ ಗರ್ಲ್ ಆಗಿ ಅವರು ಚಿತ್ರಾಸಕ್ತರ ಗಮನಸೆಳೆದಿದ್ದರು. ಮದುವೆಯಾದ ಬಳಿಕ ಸಹಜವಾಗಿ ಅವಕಾಶಗಳು ಕಡಿಮೆಯಾದವು.

ಸ್ವಲ್ಪ ಗ್ಯಾಪ್ ನ ಬಳಿಕ ಮತ್ತೆ ಬಣ್ಣದ ಜಗತ್ತಿಗೆ ಬರುವುದಾಗಿ ರಾಶಿ ಹೇಳಿಕೊಂಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅಮ್ಮನಾದ ರಾಶಿಗೆ ತೆರೆಯ ಮೇಲೂ ಅಂತಹದ್ದೇ ಪಾತ್ರಗಳಲ್ಲಿ ಲೀನವಾಗುವ ಅವಕಾಶ ಸಿಗಬಹುದು. (ಏಜೆನ್ಸೀಸ್)

Read more about: mother, child, ತಾಯಿ, ಮಗು
English summary
South Indian versatile actress Raasi turned into a mother by delivering a baby girl in Chennai. This actress came on to the screens as child artist and later on upgraded herself as a heroine.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada