»   » ಸೌತ್ ನಟಿಯರನ್ನ ಅವಮಾನಿಸಿದ 'ಬಿಗ್ ಬಾಸ್' ಸ್ಪರ್ಧಿ ಮುಖಕ್ಕೆ ಮಂಗಳಾರತಿ.!

ಸೌತ್ ನಟಿಯರನ್ನ ಅವಮಾನಿಸಿದ 'ಬಿಗ್ ಬಾಸ್' ಸ್ಪರ್ಧಿ ಮುಖಕ್ಕೆ ಮಂಗಳಾರತಿ.!

Posted By:
Subscribe to Filmibeat Kannada

ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಿರುತೆರೆ ನಟಿ ಹೀನಾ ಖಾನ್, ದಕ್ಷಿಣ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ಸೌತ್ ನಾಯಕಿಯರ ವೇಷ-ಭೂಷಣ ಹಾಗೂ ಅವರ ಎಕ್ಸ್ ಪೋಸಿಂಗ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.

ಈ ಹೇಳಿಕೆ ಈಗ ದಕ್ಷಿಣ ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದ್ದು, ನಟಿ ಹೀನಾ ಖಾನ್ ಅವರ ಮುಖಕ್ಕೆ ಚೆನ್ನಾಗಿ ಮಂಗಳಾರತಿ ಎತ್ತುತ್ತಿದ್ದಾರೆ. ಹನ್ಸಿಕಾ, ಖುಷ್ಬೂ, ನಿರ್ದೇಶಕ ಪಿ.ಸಿ ಶೇಖರ್ ಸೇರಿದಂತೆ ಹಲವು ಸೌತ್ ಕಲಾವಿದರು ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕಿಡಿಕಾರಿದ್ದಾರೆ. ಯಾವ ನಟಿ ಏನು ಹೇಳಿದ್ರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಬಾಲಿವುಡ್ ಮಂದಿ ಇಲ್ಲಿ ಕೆಲಸ ಮಾಡಿದ್ದಾರೆ ಗೊತ್ತಿರಲಿ.!

''ದಕ್ಷಿಣದ ಚಿತ್ರೋದ್ಯಮವನ್ನು ಹೀನಾ ಖಾನ್ ಅಷ್ಟು ಕೀಳಾಗಿ ಹೇಗೆ ಮಾತನಾಡುತ್ತಾರೆ. ಬಹಳಷ್ಟು ಮಂದಿ ಬಾಲಿವುಡ್ ನಟಿಯರು ಇಲ್ಲಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬ ಸಂಗತಿ ಅವರಿಗೆ ಗೊತ್ತಿಲ್ಲವೆ?'' ಎಂದು ಹನ್ಸಿಕಾ, ಹೀನಾ ಖಾನ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೀನಾ ಮಾತಿಗೆ ಬೆಲೆ ಇಲ್ಲ

''ನಮ್ಮ ಬಗ್ಗೆ ಕೀಳಾಗಿ ಮಾತನಾಡಿರುವ ಹೀನಾ ಖಾನ್‌ ಗೆ ನಾಚಿಕೆಯಾಗಬೇಕು. ಹೀನಾ ಖಾನ್ ಅವರ ಹೇಳಿಕೆ ಕೆಲಸಕ್ಕೆ ಬಾರದ್ದು' ಎಂದು ಹನ್ಸಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೆ ಹೆಮ್ಮೆ ಇದೆ

''ದಕ್ಷಿಣದ ತಾರೆಯಾಗಿ ಈ ಚಿತ್ರೋದ್ಯಮಕ್ಕೆ ಸಂಬಂಧಿಸಿದ ನಟಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಅನ್ನಿಸುತ್ತದೆ'' ಎಂದು ಸೌತ್ ಇಂಡಸ್ಟ್ರಿಗೆ ಬಗ್ಗೆ ಗೌರವ ಹೆಚ್ಚಾಗಿಸಿದ್ದಾರೆ.

ದಕ್ಷಿಣದಿಂದ ಗೌರವ ಕಲಿಯಬೇಕಿದೆ

'ಗೌರವಯುತವಾಗಿ ಹೇಗೆ ಇರುವುದು ಎಂಬ ಪಾಠಗಳನ್ನು ಇವರಿಗೆ ದಕ್ಷಿಣದಿಂದ ಕಲಿಸಬೇಕಾಗಿದೆ... ಅದಕ್ಕೆ ಇವರು ಅಲ್ಲೇ ಇರುವುದು... ನಮ್ಮ ಹುಡುಗಿಯರು ಮುನ್ನುಗ್ಗುತ್ತಿರುವುದು'' ಎಂದು ಬಹುಭಾಷಾ ನಟಿ ಖುಷ್ಬೂ ಹೀನಾ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪಿ.ಸಿ.ಶೇಖರ್ ಆಕ್ರೋಶ

ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಅವರ ನೀಡಿರುವ ಹೇಳಿಕೆಯನ್ನ ಕನ್ನಡದ ನಿರ್ದೇಶಕ ಪಿ.ಸಿ ಶೇಖರ್ ಖಂಡನೆ ವ್ಯಕ್ತಪಡಿಸಿದ್ದಾರೆ. ''ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ನೀನು ಹಾಗೆ ತಿಳಿದುಕೊಂಡಿರುವುದಕ್ಕೆ ನೀನಿನ್ನು ಟಿವಿ ನಟಿಯಾಗಿ ಮಾತ್ರ ಗುರುತಿಸಿಕೊಂಡಿದಿಯಾ?'' ಎಂದು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.

ಹೀನಾ ಖಾನ್ ಹೇಳಿದ್ದೇನು?

''ದಪ್ಪಗಿರುವ ನಾಯಕಿಯರನ್ನ ದಕ್ಷಿಣ ಇಂಡಸ್ಟ್ರಿಯವರು ಹೆಚ್ಚು ಇಷ್ಟಪಡುತ್ತಾರೆ. ಎಕ್ಸ್‌ಪೋಸಿಂಗ್ ಮಾಡಿ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಹೀರೋಯಿನ್ ಸೀರೆ ಧರಿಸಿದಾಗ ಗುಂಡಾಗಿ ಕಾಣಬೇಕೆಂದು ಅಲ್ಲಿನ ನಿರ್ದೇಶಕರು ಹೇಳುತ್ತಾರೆ. ಭಾಷೆ ಗೊತ್ತಿಲ್ಲದ ನಾಯಕಿಯರು ಡೈಲಾಗ್ ಹೇಳುವ ಬದಲು, ನಟಿಸುವಾಗ ಒನ್ ಟು ತ್ರಿ ಫೋರ್ ಎಂದು ಹೇಳುತ್ತಾರೆ'' ಎಂದು ಹೀನಾ ಖಾನ್ ಬಿಗ್ ಬಾಸ್ ಶೋನಲ್ಲಿ ಮಾತನಾಡಿಕೊಂಡಿದ್ದಾರೆ.

ದಕ್ಷಿಣ ನಟಿಯರ ಬಗ್ಗೆ 'ಕೀಳಾಗಿ' ಮಾತನಾಡಿದ 'ಬಿಗ್ ಬಾಸ್' ಸ್ಪರ್ಧಿ.!

English summary
South Indian actresses are outraged against Bigg Boss 11 contestant Hina Khan's statement.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada