For Quick Alerts
  ALLOW NOTIFICATIONS  
  For Daily Alerts

  ಸೌತ್ ಇಂಡಿಯಾ 2022 ಫ್ಯಾಷನ್ ಷೋ: ಮೋಹಕ ನಡಿಗೆ, ಮನಗೆದ್ದ ರೂಪದರ್ಶಿಯರು

  By ಫಿಲ್ಮಿಬೀಟ್ ಡೆಸ್ಕ್
  |

  ಯಶ್ ಇಂಟರ್ನ್ಯಾಷನಲ್ ಆಯೋಜಿಸಿದ್ದ ಸೌತ್ ಇಂಡಿಯಾ 2022 ಫ್ಯಾಷನ್ ಷೋ ನಲ್ಲಿ 80ಕ್ಕೂ ಹೆಚ್ಚು ರೂಪದರ್ಶಿಯರು ರಾಂಪ್ ಮೇಲೆ ಹೆಜ್ಜೆ ಹಾಕಿದರು.

  ಭವಿಶ್, ನಿರೀಕ್ಷಾ, ಸಿರಿ, ಪುಣ್ಯಮೃತಾ, ಸನು, ಅನುಷಾ, ಅಮೃತಾ, ಕೃಷ್ಣ ಈ ಫ್ಯಾಷನ್ ಷೋ ನ ಬೇರೆ ಬೇರೆ ವಿಭಾಗಗಳಲ್ಲಿ ಕ್ರೌನ್ ಗೆದ್ದರು.

  ರಮೀಜ್, ಹೇಮಲತಾ, ಶೈಲಜಾ, ಶ್ರಾವ್ಯ, ನೇತ್ರಾವತಿ ತೀರ್ಪುಗಾರರಾಗಿ ಸ್ಪರ್ಧಿಗಳನ್ನು ಜಡ್ಜ್ ಮಾಡಿದರು. ಯಶ್ ಇಂಟರ್ನ್ಯಾಷನಲ್ ಸಂಸ್ಥಾಪಕ ಸಿಇಒ ಯಶ್, ಸಿಇಒ ರಾಕಿ, ಷೋ ನಿರ್ದೇಶಕಿ ರಶ್ಮಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

  ರೂಪದರ್ಶಿಯರ ರಾಂಪ್ ವಾಕ್

  ರೂಪದರ್ಶಿಯರ ರಾಂಪ್ ವಾಕ್

  3 ಸುತ್ತುಗಳಲ್ಲಿ ರೂಪದರ್ಶಿಗಳು ರಾಂಪ್ ವಾಕ್ ಮಾಡಿದರು. ನ್ಯಾಷನಲ್, ವೆಸ್ಟರ್ನ್, ಬ್ಯುಸಿನೆಸ್ ಸುತ್ತುಗಳು ಇದ್ದವು. ಲಿಟಲ್ ಪ್ರಿನ್ಸ್ ವಿಭಾಗದಲ್ಲಿ ಬೆಂಗಳೂರಿನ ಭವಿಷ್ ಗೆದ್ದರೆ, ಅದೇ ಊರಿನ ಸುಹಾರ್ಥ್ ಸಿಂಹ ರನ್ನರ್ ಅಪ್ ಆದರು. ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಶಿವಮೊಗ್ಗದ ನಿರೀಕ್ಷಾ ಗೆದ್ದರೆ. ಲಕ್ಷಣ ಹಾಗೂ ಜಿ. ಪವನ್ ರನ್ನರ್ ಅಪ್ ಆದರು.

  ಚಿಕ್ಕಬಳ್ಳಾಪುರದ ಸಿರಿ ಗೆದ್ದರು

  ಚಿಕ್ಕಬಳ್ಳಾಪುರದ ಸಿರಿ ಗೆದ್ದರು

  ಇದೇ ವಿಭಾಗದ ಇನ್ನೊಂದು ಸ್ಪರ್ದೆಯಲ್ಲಿ ಚಿಕ್ಕಬಳ್ಳಾಪುರದ ಸಿರಿ ಗೆದ್ದರು. ಮಿಸ್ ಟೀನ್ ವಿಭಾಗದಲ್ಲಿ ಮೈಸೂರಿನ ಪುಣ್ಯಾಮೃತ ಕ್ರೌನ್ ಗೆದ್ದರೆ ಖುಷಿ, ಅದ್ಯಶಾ ರನ್ನರ್ ಅಪ್ ಆದರು. ಮಿಸ್ಟರ್ ಸೌತ್ ಇಂಡಿಯಾ ವಿಭಾಗದ ಕಿರೀಟ ಸಾನು ಅವರ ಪಾಲಾದರೆ, ರೋಷನ್, ಸೈಯದ್ ನೂಮಾನ್ ರನ್ನರ್ ಅಪ್ ಆದರು. ಮಿಸ್ ಸೌತ್ ಇಂಡಿಯಾವನ್ನು ಅನುಷಾ ಗೆದ್ದರು. ನಂದಿನಿ, ಜಾಸ್ಮೆ, ರನ್ನರ್ ಅಪ್ ಆದರು.

  ಭಾರತದ ಸಂಸ್ಕೃತಿಯನ್ನು ಹೇಳುವ ವೇಷಭೂಷಣ

  ಭಾರತದ ಸಂಸ್ಕೃತಿಯನ್ನು ಹೇಳುವ ವೇಷಭೂಷಣ

  ಮೈಸೂರಿನ ಅಮೃತಾ ಮಿಸೆಸ್ ಸೌತ್ ಇಂಡಿಯಾ ವಿಭಾಗದ ಪ್ರಶಸ್ತಿ ಗೆದ್ದರು. ಕುಸುಮಾ, ಮಾಧುರಿ ರನ್ನರ್ ಅಪ್ ಆದರು. ಮಿಸ್ಟರ್ ಇಂಡಿಯಾ ಐಕಾನ್ ಪ್ರಶಸ್ತಿ ಕೃಷ್ಣ ಅವರಿಗೆ ಸಿಕ್ಕಿತು. ರಾಷ್ಟ್ರೀಯ ಸುತ್ತಿನಲ್ಲಿ ಭಾರತದ ಸಂಸ್ಕೃತಿಯನ್ನು ಹೇಳುವ ವೇಷಭೂಷಣ ಇತ್ತು.

  ಪ್ರಶ್ನೋತ್ತರ ಸುತ್ತಿನಲ್ಲಿ ರೂಪದರ್ಶಿಯರು

  ಪ್ರಶ್ನೋತ್ತರ ಸುತ್ತಿನಲ್ಲಿ ರೂಪದರ್ಶಿಯರು

  ದೇವರು, ನವಿಲು, ಕಮಲದ ಹೂವು ಸೇರಿ ಬೇರೆ ಬೇರೆ ಉಡುಗೆ ತೋಡುಗೆಯನ್ನು ಪ್ರತಿಬಿಂಬಿಸುವ ಕೆಲಸ ಆಯಿತು. ವೆಸ್ಟರ್ನ್ ಸುತ್ತಿನಲ್ಲಿ ಕಪ್ಪು ಬಣ್ಣದ ಬಟ್ಟೆ ತೊಟ್ಟು ವಿಭಿನ್ನವಾದ ನಡಿಗೆ ಗಮನ ಸೆಳೆಯಿತು. ಪ್ರಶ್ನೋತ್ತರ ಸುತ್ತಿನಲ್ಲೂ ರೂಪದರ್ಶಿಯರು ಭಾಗವಹಿಸಿದರು.

  English summary
  South Indian 2022 Fashion Show: More than 80 models walked on the ramp. Here is the winners list.
  Friday, December 23, 2022, 7:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X