For Quick Alerts
  ALLOW NOTIFICATIONS  
  For Daily Alerts

  ಫ್ಯಾಟ್‌ ಸರ್ಜರಿಯ ಅಡ್ಡ ಪರಿಣಾಮ: ನಟ ನಟಿಯರ ಗೋಳೇನು

  |

  ಬಣ್ಣದ ಲೋಕದಲ್ಲಿರುವವರು ಹೆಚ್ಚಾಗಿ ತಮ್ಮ ದೇಹ ಸೌಂದರ್ಯದ ಮೇಲೆ ಕಾಳಿಜಿ ವಹಿಸುತ್ತಾರೆ. ಅಲ್ಲದೆ ಅವರಿಗೆ ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಸಿಗಬೇಕು ಎಂಬ ಕಾರಣಕ್ಕೆ ಹಲವು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಾರೆ. ಇದು ಚಿತ್ರರಂಗದಲ್ಲಿ ಇರುವವರಿಗೆ ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಹೆಚ್ಚಾಗಿ ನಟಿಯರು ದೇಹದ ತೂಕ ಇಳಿಸಿಕೊಳ್ಳುವ ಸರ್ಜರಿ ಒಳಗಾಗುವುದೇ ಹೆಚ್ಚು. ಇದರಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗಿದ್ದು, ಕೆಲವರು ಜೀವವನ್ನು ಕೂಡ ಕಳೆದುಕೊಂಡಿದ್ದಾರೆ.

  ಸಿನಿಮಾ ತಾರೆಯರಿಗೆ ಅವರ ಸೌಂದರ್ಯವೇ ಅಸ್ತ್ರವಾಗಿರುತ್ತದೆ. ಹೀಗಾಗಿ ಮಾಡೆಲ್‌ಗಳು, ಸಿನಿಮಾ ತಾರೆಯರು ಆಕರ್ಷಕವಾಗಿ ಕಾಣಲು ನಾನಾ ಬಗೆಯ ಸರ್ಜರಿಗೆ ಒಳಗಾಗುತ್ತಾರೆ. ಇದರಿಂದ ಹಲವರಿಗೆ ಅಡ್ಡ ಪರಿಣಾಮಗಳು ಉಂಟಾಗಿದೆ. ಅವಕಾಶಕ್ಕಾಗಿ ಇರುವ ಸೌಂದರ್ಯವನ್ನು ಸರ್ಜರಿ ಮಾಡಿಸಿಕೊಂಡು ಮತ್ತಷ್ಟು ವಿಕಾರ ಮಾಡಿಕೊಳ್ಳುವುದಲ್ಲದೆ ಭವಿಷ್ಯದಲ್ಲಿ ನಾನಾ ಬಗೆಯ ರೋಗಗಳಿಗೆ ತುತ್ತಾದವರೂ ಇದ್ದಾರೆ.

  ಫ್ಯಾಟ್ ಸರ್ಜರಿ ವೇಳೆ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನ!ಫ್ಯಾಟ್ ಸರ್ಜರಿ ವೇಳೆ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನ!

  ಸೌಂದರ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ಸರ್ಜರಿ ಮಾಡಿಸಿಕೊಂಡು ಕೆಲ ನಟಿಯರು ಸಾವನ್ನು ಕೂಡ ಅಪ್ಪಿದ್ದಾರೆ. ಇನ್ನು ಕೆಲವರು ಮುಖವನ್ನು ವಿಕಾರಗೊಳಿಸಿಕೊಂಡು ಟ್ರೋಲ್‌ಗೆ ಒಳಗಾಗಿದ್ದಾರೆ. ಹೆಚ್ಚಾಗಿ ಬಾಲಿವುಡ್, ಟಾಲಿವುಡ್ ನಟಿಯರು ಪ್ಲಾಸ್ಟಿಕ್ ಸರ್ಜರಿಗೆ ಮಾಡಿಸಿಕೊಂಡಿದ್ದಾರೆ. ಈ ರೀತಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅನಾಹುತ ಮಾಡಿಕೊಂಡ ನಟ ನಟಿಯರ ಪಟ್ಟಿ ಇಲ್ಲಿದೆ ಓದಿ

   ಟಾಲಿವುಡ್ ನಟಿ ಆರತಿ ಅಗರ್ವಾಲ್ ನಿಧನ

  ಟಾಲಿವುಡ್ ನಟಿ ಆರತಿ ಅಗರ್ವಾಲ್ ನಿಧನ

  ಟಾಲಿವುಡ್‌ನ ಮೋಸ್ಟ್‌ ಬ್ಯೂಟಿಫುಲ್ ನಟಿಯಾಗಿದ್ದ ಆರತಿ ಅಗರ್‌ವಾಲ್‌ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಲಿಪೋಸೆಕ್ಷನ್ ಸರ್ಜರಿಗೆ ಒಳಗಾಗಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಪರಿಣಾಮದಿಂದಲೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂಬ ವದಂತಿಗಳು ಹರಿದಾಡಿದ್ದವು. ಇಂದಿಗೂ ನಟಿಯ ಸಾವಿಗೆ ಸರ್ಜರಿಯೇ ಕಾರಣ ಎನ್ನಲಾಗಿದೆ. ಆದರೆ ಕೆಲ ವರದಿಗಳ ಪ್ರಕಾರ ತೂಕ ಇಳಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಆರೋಗ್ಯದಲ್ಲಿ ಅಡ್ಡ ಪರಿಣಾಮ ಉಂಟಾಗಿ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ.

  ಸೊಂಟ ದಪ್ಪಾ ಆಗಿದೆ ಎಂದು ಫ್ಯಾಟ್ ಸರ್ಜರಿಗೆ ಮುಂದಾಗಿದ್ದ ಚೇತನಾ!ಸೊಂಟ ದಪ್ಪಾ ಆಗಿದೆ ಎಂದು ಫ್ಯಾಟ್ ಸರ್ಜರಿಗೆ ಮುಂದಾಗಿದ್ದ ಚೇತನಾ!

   ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಬುಲೆಟ್ ಪ್ರಕಾಶ್

  ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಬುಲೆಟ್ ಪ್ರಕಾಶ್

  ಸ್ಯಾಂಡಲ್‌ವುಡ್‌ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಕೂಡ ಅತಿಯಾದ ತೂಕ ಇಳಿಸಿಕೊಳ್ಳಲು 2018 ರಲ್ಲಿ ಫ್ಯಾಟ್‌ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಬಳಿಕ ಹಲವು ಅನಾರೋಗ್ಯ ಸಮಸ್ಯೆಗೆ ಒಳಗಾದರು. ಈ ವೇಳೆ ಬರೋಬ್ಬರಿ 35 ಕೆಜಿ ತೂಕ ಕಳೆದುಕೊಂಡಿದ್ದರು. ಇದರಿಂದ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತಾ ಬಂತು. ಇದರ ಜೊತೆಗೆ ಕಿಡ್ನಿ, ಲಿವರ್ ವೈಫಲ್ಯ ಸಮಸ್ಯೆಯ ಜೊತೆಯಾಗಿ ಬುಲೆಟ್‍ ಪ್ರಕಾಶ್‌ರನ್ನು ಇನ್ನಷ್ಟು ಹೈರಾಣಾಗಿಸಿತ್ತು. ಕೊನೆಗೆ 2020 ರಲ್ಲಿ ಬುಲೆಟ್‌ ಪ್ರಕಾಶ್ ಸಾವನ್ನಪ್ಪಿದ್ದರು.

   ಗೀತಾ, ದೊರೆಸಾನಿ ಧಾರವಾಹಿ ನಟಿ ಚೇತನಾ ರಾಜ್ ಸಾವು

  ಗೀತಾ, ದೊರೆಸಾನಿ ಧಾರವಾಹಿ ನಟಿ ಚೇತನಾ ರಾಜ್ ಸಾವು

  ಕನ್ನಡದ ಕಿರುತೆರೆ ನಟಿ ಚೇತನಾ ಕೂಡ ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ವೇಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಸೊಂಟದ ಬೊಜ್ಜನ್ನು ಕರಗಿಸಲು ನಟಿ ಚೇತನಾ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಆದರೆ, ಸರ್ಜರಿ ವೇಳೆಯೇ ನಟಿ ಸಾವನ್ನಪ್ಪಿದ್ದಾರೆ. ಕೇವಲ ದೇಹ ಸೌಂದರ್ಯಕ್ಕಾಗಿ ಈ ರೀತಿ ಮಾರಾಣಾಂತಿಕ ಸರ್ಜರಿ ಮಾಡಿಸಿಕೊಂಡು ನಟಿಯರು ತಮ್ಮ ಸೌಂದರ್ಯವನ್ನು ವಿಕಾರ ಮಾಡಿಕೊಳ್ಳುವುದಲ್ಲದೆ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ.

   ಫ್ಯಾಟ್‌ ಸರ್ಜರಿಯಿಂದ ಅಡ್ಡ ಪರಿಣಾಮ ಎದುರಿಸಿದ ಸ್ವೀಟಿ

  ಫ್ಯಾಟ್‌ ಸರ್ಜರಿಯಿಂದ ಅಡ್ಡ ಪರಿಣಾಮ ಎದುರಿಸಿದ ಸ್ವೀಟಿ

  ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿರುವ ಅನುಷ್ಕಾ ಶೆಟ್ಟಿ ಕೂಡ ತೂಕ ಇಳಿಕೆ ಮಾಡಿಕೊಳ್ಳುವ ಲಿಪೋಸೆಕ್ಷನ್ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗಿದೆ. ಸರ್ಜರಿ ಬಳಿಕ ಅವರ ದೇಹದಲ್ಲಿ ಅಡ್ಡ ಪರಿಣಾಮಗಳು ಉಂಟಾಗಿದ್ದವು. ಇದರಿಂದಾಗಿ ಮತ್ತೆ ಅವರ ದೇಹದಲ್ಲಿ ಫ್ಯಾಟ್‌ ಹೆಚ್ಚಾಯಿತು ಇದರಿಂದಾಗಿ ಅವರಿಗೆ ಸಿನಿಮಾ ಆಫರ್‌ಗಳು ಕೂಡ ಕಡಿಮೆಯಾದವು. ಇನ್ನು ಟಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ತೂಕವನ್ನು ಇಳಿಸಿಕೊಂಡು ಅಂದವನ್ನು ಹೆಚ್ಚಿಸಿಕೊಳ್ಳಲು ಲಿಪೋಸಕ್ಷನ್ ಸರ್ಜರಿ ಮಾಡಿಸಿಕೊಂಡರು ಎನ್ನುತ್ತಿದೆ ಕಾಲಿವುಡ್.

  English summary
  South Indian actresses who underwent Fat surgery; Here is the list of actress who underwent fat surgery. Take a look.
  Tuesday, May 17, 2022, 13:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X