Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವಾರ ಬಿಡುಗಡೆಯಾದ ಎಲ್ಲ ಚಿತ್ರಗಳಿಗೂ ಸಂಕಷ್ಟ!
ಕೊರೊನಾದಿಂದ ಸಿನಿಮಾ ಇಂಡಸ್ಟ್ರಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಒಂದೊಂದೆ ಸಿನಿಮಾಗಳು ಥಿಯೇಟರ್‌ಗೆ ಬರ್ತಿದೆ. ಈ ವಾರ ದಕ್ಷಿಣದಲ್ಲಿ ಮೂರು ಪ್ರಮುಖ ಚಿತ್ರಗಳು ಬಿಡುಗಡೆಯಾದವು. ಮೂರು ಸಿನಿಮಾಗಳಿಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದುರಾದೃಷ್ಟವಶಾತ್ ಎಲ್ಲ ಚಿತ್ರಗಳು ಪೈರಸಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಟಾರ್ಸ್ ಚಿತ್ರಗಳಿಗೆ ಪೈರಸಿ ಎನ್ನುವುದು ಬಹಳ ದೊಡ್ಡ ಸವಾಲಾಗಿ ಕಾಡ್ತಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೈರಸಿ ಲಿಂಕ್‌ಗಳು ಸಾಮಾಜಿಕ ಜಾಲತಾಣದಲ್ಲಿ, ಮೊಬೈಲ್‌ಗಳಲ್ಲಿ ಹರಿದಾಡುತ್ತಿವೆ. ಈ ಸಂಕಷ್ಟ ಈ ವಾರದ ರಿಲೀಸ್ ಆದ ಎಲ್ಲಾ ಚಿತ್ರಗಳಿಗೆ ಎದುರಾಗಿದೆ. ಮುಂದೆ ಓದಿ...
ಆ
ಅನಿಷ್ಟ
ಈಗ
ನಮ್ಮ
ಬುಡಕ್ಕೆ
ಬಂದಿದೆ:
ರಿಷಬ್
ಶೆಟ್ಟಿ
ಆಕ್ರೋಶ

ಪೈರಸಿ ವಿರುದ್ಧ ಯುವರತ್ನ ಹೋರಾಟ
ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರವೂ ಪೈರಸಿ ಆಗಿದೆ. ಪೈರಸಿ ಆಗಿರುವ ಲಿಂಕ್‌ಗಳನ್ನು ಶೇರ್ ಮಾಡಲಾಗಿದೆ. ಈ ಕುರಿತು ಚಿತ್ರತಂಡ ಕ್ರಮ ತೆಗೆದುಕೊಂಡಿದೆ. ಪೈರಸಿ ಲಿಂಕ್‌ಗಳ ಬಗ್ಗೆ ಪೈರಸಿ ನಿಗ್ರಹ ತಂಡಕ್ಕೆ ಮಾಹಿತಿ ನೀಡಲಾಗಿದೆ. ಎಲ್ಲ ಪೈರಸಿ ಲಿಂಕ್‌ಗಳನ್ನು ತೆಗೆಯಲಾಗುತ್ತಿದೆ ಎಂದು ನಿರ್ಮಾಪಕ ಕಾರ್ತಿಕ್ ಗೌಡ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸುಲ್ತಾನನಿಗೂ ಪೈರಸಿ ಕಾಟ
ತಮಿಳು ನಟ ಕಾರ್ತಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದಲ್ಲಿ ಮೂಡಿ ಬಂದಿರುವ ಸುಲ್ತಾನ ಸಿನಿಮಾ ಏಪ್ರಿಲ್ 2 ರಂದು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆಗಿ ಮೊದಲ ಶೋ ಮುಗಿಯುತ್ತಿದ್ದಂತೆ ಸುಲ್ತಾನ ಚಿತ್ರವೂ ಲೀಕ್ ಆಗಿದೆ.
ರಾಬರ್ಟ್
ಪೈರಸಿ:
'ಬಿಗ್
ಬ್ರದರ್ಸ್'
ವಿರುದ್ಧ
ಉಮಾಪತಿ
ಶ್ರೀನಿವಾಸ್
ಗುಡುಗು

ನಾಗಾರ್ಜುನ ವೈಲ್ಡ್ ಡಾಗ್
ತೆಲುಗು ನಟ ನಾಗಾರ್ಜುನ ನಟಿಸಿರುವ ವೈಲ್ಡ್ ಡಾಗ್ ಸಿನಿಮಾವೂ ಈ ವಾರವೇ ತೆರೆಕಂಡಿದೆ. ದುರಾದೃಷ್ಟವಶಾತ್ ಈ ಚಿತ್ರವೂ ಮೊದಲ ದಿನವೇ ಲೀಕ್ ಆಗಿದೆ. ಪೈರಸಿ ಲಿಂಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Recommended Video

ಪ್ರತಿ ಸಿನಿಮಾನೂ ಲೀಕ್!
ಈ ಹಿಂದೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡಿದ್ದ ಪೊಗರು ಹಾಗೂ ರಾಬರ್ಟ್ ಚಿತ್ರಗಳು ಪೈರಸಿಯಾಗಿದ್ದವು. ಥಿಯೇಟರ್ ಕಾಪಿ ಲೀಕ್ ಆಗಿದ್ದರೂ ಚಿತ್ರಮಂದಿರದಲ್ಲಿ ಜನ ಸಿನಿಮಾ ನೋಡಿದರು. ಸಿನಿಮಾ ಚೆನ್ನಾಗಿದ್ದರೆ ಪೈರಸಿ ಕಾಪಿ ಯಾರೂ ನೋಡಲ್ಲ ಎಂಬ ನಂಬಿಕೆಯಲ್ಲಿ ಚಿತ್ರತಂಡ ಮುಂದೆ ಸಾಗುತ್ತಿದೆ. ಪೈರಸಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆಗೂ ಪೈರಸಿಯಾಗಿದೆ. ಮುಂಬರುವ ಚಿತ್ರಗಳಿಗೂ ಈ ಆತಂಕ ಕಾಡುತ್ತಿದೆ.