»   » 80'ರ ದಶಕದ ನಟ-ನಟಿಯರ 8ನೇ 'ಗೆಟ್ ಟು ಗೆದರ್' ಪಾರ್ಟಿ

80'ರ ದಶಕದ ನಟ-ನಟಿಯರ 8ನೇ 'ಗೆಟ್ ಟು ಗೆದರ್' ಪಾರ್ಟಿ

Posted By:
Subscribe to Filmibeat Kannada

80'ರ ದಶಕದ ಸ್ಟಾರ್‌ ನಟ-ನಟಿಯರು ಪ್ರತಿ ವರ್ಷ ಒಂದು ಕಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಂಪ್ರದಾಯ ಕಳೆದ 8 ವರ್ಷಗಳಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಡೆಯುತ್ತಾ ಬಂದಿದೆ.

ಪ್ರತಿ ವರ್ಷವೂ ಎರಡು ಅಥವಾ ಮೂರು ದಿನ ಎಲ್ಲರೂ ಒಂದೆಡೆ ಸೇರಿ ಹಾಡಿ, ಕುಣಿದು ಎಂಜಾಯ್ ಮಾಡ್ತಾರೆ. ಈ ದಿನಕ್ಕಾಗಿ ವರ್ಷವೀಡಿ ಕಾಯುವ ತಾರೆಯರು ಈ ದಿನ ಯಾರು ಮಿಸ್ ಮಾಡಿಕೊಳ್ಳುವುದಿಲ್ಲ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯ ನಟ-ನಟಿಯರು ಕೂಡ ಈ ಪಾರ್ಟಿಯಲ್ಲಿ ಭಾಗವಹಿಸುತ್ತಾರೆ. ಹಾಗಿದ್ರೆ, ಈ ವರ್ಷದ ಪಾರ್ಟಿಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು? ಏನೆಲ್ಲಾ ವಿಶೇಷತೆಗಳಿಂದ ಕೂಡಿದ್ದವು ಎಂದು ತಿಳಿಯಲು ಮುಂದೆ ಓದಿ....

ಯಾರೆಲ್ಲಾ ಭಾಗವಹಿಸಿದ್ದರು

2009 ರಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು, 8ನೇ ಪಾರ್ಟಿ ಇದಾಗಿದೆ. ಈ ಸಲ ಪಾರ್ಟಿಗೆ ನಟ ಚಿರಂಜೀವಿ, ವೆಂಕಟೇಶ್, ಜಾಕಿ ಶ್ರಾಫ್, ಶರತ್ ಕುಮಾರ್, ರೆಹಮಾನ್, ಭಾಗ್ಯರಾಜ್, ನಟಿಯರಾದ ಸುಮಲತಾ, ರಾಧಿಕಾ, ಸುಹಾಸಿನಿ, ಖುಷ್ಬೂ, ರಮ್ಯಾಕೃಷ್ಣನ್, ಜಯಸುಧ, ರೇವತಿ, ಸೇರಿದಂತೆ 25 ಜನ ತಾರೆಯರು ಭಾಗಿಯಾಗಿದ್ದರು.

ನೀಲಿ ಬಣ್ಣದಲ್ಲಿ ಮಿಂಚಿದ ತಾರೆಯರು

ಪ್ರತಿವರ್ಷವೂ ಒಂದೊಂದು ಬಣ್ಣದ ಬಟ್ಟೆಗಳಲ್ಲಿ ಮಿಂಚುವ ತಾರೆಯರು ಈ ಬಾರಿ ನೀಲಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದರು. ಖಾಸಗಿ ರೆಸಾರ್ಟ್ ನಲ್ಲಿ ಪಾರ್ಟಿ ಮಾಡುವ ಈ ತಾರೆಯರು ಈ ಎರಡು ದಿನ ಎಲ್ಲವನ್ನ ಮರೆತು ಚಿತ್ರರಂಗ ಒಂದು ಕುಟುಂಬವಿದ್ದಂತೆ ಎಂದು ಖುಷಿ ಪಡುತ್ತಾರೆ.

ಫ್ಯಾಶನ್ ಶೋ ಗೆದ್ದ ಚಿರಂಜೀವಿ

ಈ ಬಾರಿ ಪುರಷರು ಫ್ಯಾಶನ್ ಶೋ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ವಿನ್ ಆಗಿದ್ದಾರೆ. ಅದನ್ನ ಹೊರತು ಪಡಿಸಿ, ಡ್ಯಾನ್ಸ್, ಹಾಡು ಸೇರಿದಂತೆ ಹಲವು ರೀತಿಯ ಎಂಜಾಯ್ ಮಾಡುತ್ತಾರೆ.

ಈ ಬಾರಿ ಮಿಸ್ ಆದವರು

ಅಂಬರೀಷ್, ರಜನಿಕಾಂತ್, ರಮೇಶ್‌ ಅರವಿಂದ್‌, ಪ್ರಭು ಮತ್ತು ಮೋಹನ್‌ ಲಾಲ್‌ ಈ ಬಾರಿ ಭಾಗವಹಿಸಲಿಲ್ಲ. ಅಂದ್ಹಾಗೆ, ಈ ಪಾರ್ಟಿ ನವೆಂಬರ್ 17 ರಂದು ಮಹಬಲಿಪುರಂ ನಲ್ಲಿರುವ ರೆಸಾರ್ಟ್ ವೊಂದರಲ್ಲಿ ನೆರೆವೇರಿದೆ.

English summary
Chiranjeevi, Jackie Shroff, Ramya Krishnan, Venkatesh, suhasini, sumalatha and others attend Class of 80s reunion. ಚಿರಂಜೀವಿ, ರಮ್ಯ ಕೃಷ್ಣನ್, ವೆಂಕಟೇಶ್, ಸುಮಲತಾ, ಜಾಕಿ ಶ್ರಾಫ್ ಸೇರಿದಂತೆ 80ರ ದಶಕದ ಹಲವು ನಟ-ನಟಿಯರು ಪಾರ್ಟಿ ಮಾಡಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada