For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ವರದಿ ನೆಗೆಟಿವ್?

  |

  ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಲೆಜೆಂಡರಿ ಗಾಯಕ ಕೊರೊನಾ ವರದಿ ಕೇಳಿ, ಅವರ ಆಪ್ತರಲ್ಲಿ ಹಾಗೂ ಕುಟುಂಬದವರಿಗೆ ಹೊಸ ಚೈತನ್ಯ ಮೂಡಿಸಿದೆ.

  ಎಸ್ ಪಿ ಬಿ ಕೊರೊನಾ ವರದಿ ಅಥವಾ ಆರೋಗ್ಯದ ಬಗ್ಗೆ ವೈದ್ಯರಾಗಲಿ ಅಥವಾ ಅವರ ಪುತ್ರ ಚರಣ್ ಯಾವುದೇ ಅಪ್ ಡೇಟ್ ನೀಡಿಲ್ಲ. ಆದರೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ಗೆದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ನನ್ನ ಮುಂದಿನ ಸಿನಿಮಾಗೆ ನೀವು ಹಾಡಲು ಕಾಯುತ್ತಿದೀನಿ: ಎಸ್ ಪಿ ಬಿ ಕುರಿತು ಶಿವಣ್ಣ ಭಾವುಕ ಮಾತುನನ್ನ ಮುಂದಿನ ಸಿನಿಮಾಗೆ ನೀವು ಹಾಡಲು ಕಾಯುತ್ತಿದೀನಿ: ಎಸ್ ಪಿ ಬಿ ಕುರಿತು ಶಿವಣ್ಣ ಭಾವುಕ ಮಾತು

  ಎಸ್ ಪಿ ಬಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಪರಿಣಾಮ ಅವರನ್ನು ತೀವ್ರ ನಿಗಾಘಟಕಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದರು. ಕಳೆದ 10 ದಿಂಗಳಿಂದ ಎಸ್ ಪಿ ಬಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ, ಆಪ್ತರಿಗೆ ತೀರಾ ಆತಂಕವುಂಟು ಮಾಡಿತ್ತು.

  ಎಸ್ ಪಿ ಬಿ ವೆಂಟಿಲೇಟರ್ ಮೂಲಕವೇ ಉಸಿರಾಡುತ್ತಿದ್ದಾರೆ. ಎಂಜಿಎಂ ಆಸ್ಪತ್ರೆಯ ವೈದ್ಯರತಂಡ ಅಂತರಾಷ್ಟ್ರೀಯ ವೈದ್ಯಕೀಯ ತಜ್ಞರ ಸಲಹೆ ಪಡೆದುಕೊಂಡು ಸ್ವರ ಸಾಮ್ರಾಟನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಲೆಜೆಂಡರಿ ಗಾಯಕ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಇಡೀ ದೇಶವೆ ಪ್ರಾರ್ಥನೆ ಮಾಡುತ್ತಿದೆ.

  English summary
  Legendary singer SP Balasubrahmanyam Tested Negative For Covid -19. Confirmed his son SPB Charan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X