»   » ಫಕೀರಪ್ಪ ವರವಿ, ಶಾಂತಮ್ಮಗೆ ವರದರಾಜು ಪ್ರಶಸ್ತಿ

ಫಕೀರಪ್ಪ ವರವಿ, ಶಾಂತಮ್ಮಗೆ ವರದರಾಜು ಪ್ರಶಸ್ತಿ

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ಸೋದರ ಎಸ್.ಪಿ.ವರದರಾಜು ಅವರ ಹೆಸರಿನಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ತಲಾ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಾಲಿನ ಪ್ರಶಸ್ತಿ ಪ್ರಕಟವಾಗಿದೆ.

ರಂಗಭೂಮಿ ಕಲಾವಿದ, ಹಾಸ್ಯ ಚಕ್ರವರ್ತಿ, ಪ್ರಖ್ಯಾತ ನಾಟಕಾರ ಫಕೀರಪ್ಪ ವರವಿ ಹಾಗೂ ಚಲನಚಿತ್ರ ಕಲಾವಿದೆ ಶಾಂತಮ್ಮ ಅವರನ್ನು ಈ ಬಾರಿಯ ಪ್ರಶಸ್ತಿ ವರಿಸಿದೆ. ಪ್ರಶಸ್ತಿಯನ್ನು ಇದೇ ಫೆಬ್ರವರಿ 8ರಂದು ಪ್ರದಾನ ಮಾಡಲಾಗುತ್ತದೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. [ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ-2012]

Late SP Varadaraju

ಈ ಕಾರ್ಯಕ್ರಮದಕ್ಕೆ ಮುಖ್ಯ ಅತಿಥಿಯಾಗಿ ವಾರ್ತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನಿರಂಜನ್ ಹಾಗೂ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವಹಿಸಲಿದ್ದಾರೆ.

ಫೆಬ್ರವರಿ 8ರಂದು ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಹಿಂದೆ ವರದರಾಜು ಪ್ರಶಸ್ತಿಯು ಶನಿಮಹದೇವಪ್ಪ, ಸರೋಜಮ್ಮ ಅವರಂತಹ ಕಲಾವಿದರಿಗೆ ನೀಡಿ ಗೌರವಿಸಲಾಗಿದೆ.

ಎಸ್.ಪಿ.ವರದರಾಜು ಅವರ ಆತ್ಮೀಯ ಬಳಗದ ಡಾ.ಬರಗೂರು ರಾಮಚಂದ್ರಪ್ಪ, ಬಿ.ಎನ್.ಸುಬ್ರಹ್ಮಣ್ಯ, ಡಾ.ವೇಮಗಲ್ ನಾರಾಯಣಸ್ವಾಮಿ, ಗ್ರೀನ್ ಹೌಸ್ ವಾಸು, ಡಾ.ಜಯಮಾಲಾ, ದೊಡ್ಡಹುಲ್ಲೂರು ರುಕ್ಕೋಜಿ, ರೇವಣ್ಣ (ಭಾಗವತರು), ಮುರಳೀಧರ ಹಾಲಪ್ಪ, ಡಿ.ಸಿ.ನಾಗೇಶ್, ಡಾ.ಲಕ್ಷ್ಮಿನಾರಾಯಣ, ಎಚ್.ಕೆ.ಗೋವಿಂದಪ್ಪ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ. (ಒನ್ಇಂಡಿಯಾ ಕನ್ನಡ)

English summary
The annual SP Varadaraju awards for 2014 were announced for artiste Fakirappa Varavi of theatre and Shanthamma of cinema. It carries cash award of Rs.10000, memento, shawl and garland. The awards presentation evening on 8th of February, 2014 at Nayana Auditorium at 5.30 pm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada