»   » ಚಿತ್ರ ನಿರ್ಮಾಪಕಿ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ 'ಸ್ಪರ್ಶ' ರೇಖಾ

ಚಿತ್ರ ನಿರ್ಮಾಪಕಿ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ 'ಸ್ಪರ್ಶ' ರೇಖಾ

Posted By:
Subscribe to Filmibeat Kannada
ಚಿತ್ರ ನಿರ್ಮಾಪಕಿ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ 'ಸ್ಪರ್ಶ' ರೇಖಾ | Filmibeat Kannada

'ಸ್ಪರ್ಶ' ಹಾಗೂ 'ಮೆಜೆಸ್ಟಿಕ್'... ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ತೆರೆ ಹಂಚಿಕೊಂಡ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರೇಖಾ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು.

ಸಾಫ್ಟ್ ವೇರ್ ಎಂಜಿನಿಯರ್ ಸಂದೇಶ್ ಎಂಬುವರನ್ನ ಮದುವೆ ಆದ್ಮೇಲೆ ಅಮೇರಿಕಾದಲ್ಲಿ ನೆಲೆಸಿದ ರೇಖಾ ಮರಳಿ ಸದ್ದು ಮಾಡ ತೊಡಗಿದ್ದು 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ. 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಲ್ಲಿ ನಟಿ ರೇಖಾ ಸ್ಪರ್ಧಿಯಾಗಿ ಭಾಗವಹಿಸಿದರು.

'ಬಿಗ್ ಬಾಸ್'ನಲ್ಲಿ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ರೇಖಾ, 'ಶ್ರೀಕಂಠ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಕ್ರಿಯರಾಗಿರುವ ನಟಿ ರೇಖಾ, ಇದೀಗ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮುಂದೆ ಓದಿರಿ...

'ಡೆಮೋ ಪೀಸ್' ನಿರ್ಮಾಪಕಿ ರೇಖಾ

ನಟಿ ರೇಖಾ ನಿರ್ಮಾಣ ಮಾಡುತ್ತಿರುವ ಚಿತ್ರದ ಹೆಸರು 'ಡೆಮೋ ಪೀಸ್'. ಇದೊಂದು ಕಾಮಿಡಿ ಹಾಗೂ ಯುವ ಪೀಳಿಗೆಯ ಸಿನಿಮಾ ಆಗಿದ್ದು, ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತು.

ಮತ್ತೆ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಕೊಟ್ಟ ನಟಿ 'ಸ್ಪರ್ಶ' ರೇಖಾ!

ಕ್ಲಾಪ್ ಮಾಡಿದ ರಾಕಿಂಗ್ ಸ್ಟಾರ್

'ಡೆಮೋ ಪೀಸ್' ಚಿತ್ರದ ಮುಹೂರ್ತದ ಶಾಟ್ ಗೆ ಕ್ಲಾಪ್ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್. ರೇಖಾ ನಿರ್ಮಾಣದ ಚಿತ್ರ ಯಶಸ್ವಿ ಆಗಲಿ ಎಂದು ನಟ ಯಶ್ ಶುಭ ಹಾರೈಸಿದ್ದಾರೆ.

'ಸ್ಪರ್ಶ' ರೇಖಾ ಜೊತೆ ಗಾಯಕ ರಾಜೇಶ್ ಕೃಷ್ಣನ್ ಮದುವೆ.? ರೇಖಾ ಕೊಟ್ಟ ಸ್ಪಷ್ಟನೆ.!

'ಬ್ರಹ್ಮಗಂಟು' ಭರತ್ ಹೀರೋ

'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಭರತ್, 'ಡೆಮೋ ಪೀಸ್' ಚಿತ್ರದಲ್ಲಿ ನಾಯಕನಾಗಿದ್ದು, ಸೋನಲ್ ಮೋಂಟೆರಿಯೋ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇನ್ನೂ ಇದೇ ಚಿತ್ರದಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.

ನಿರ್ದೇಶಕ ಯಾರು.?

'ಒಳ್ಳೆ ಹುಡುಗ' ಪ್ರಥಮ್ ಜೊತೆಗೆ ಗುರುತಿಸಿಕೊಂಡಿದ್ದ ವಿವೇಕ್ ಎನ್ನುವವರು 'ಡೆಮೋ ಪೀಸ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿವೇಕ್ ಅವರ ಕಥೆ ರೇಖಾಗೆ ಇಷ್ಟ ಆದ ಕಾರಣ, ಬಂಡವಾಳ ಹಾಕಲು ಮುಂದಾಗಿದ್ದಾರೆ. ಸದ್ಯಕ್ಕೆ ಚಿತ್ರದ ಮುಹೂರ್ತ ಮುಗಿದಿದ್ದು, ಏಪ್ರಿಲ್ ನಲ್ಲಿ ಶೂಟಿಂಗ್ ಶುರು ಆಗಲಿದೆ.

English summary
Kannada Actress Sparsha Rekha turns Producer for Kannada Film 'Demo Piece' directed by Vivek.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X