ಡಿ-ಬಾಸ್ ಅಭಿಮಾನಿಗಳೇ ಅಲರ್ಟ್: ಫೇಸ್‌ಬುಕ್‌ ಲೈವ್ ಬರಲಿದ್ದಾರೆ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಬಹುದು ಎಂದು ಹೇಳಲಾಗುತ್ತಿದೆ. ರಾಬರ್ಟ್ ರಿಲೀಸ್ ಬಗ್ಗೆ ಯಾವಾಗ ಅಪ್‌ಡೇಟ್ ಸಿಗುತ್ತೆ ಎಂದು ಡಿ-ಭಕ್ತರು ಎದುರು ನೋಡುತ್ತಿದ್ದಾರೆ.

ಇದೀಗ, ನಟ ದರ್ಶನ್ ಅವರು ಸರ್ಪ್ರೈಸ್ ಸುದ್ದಿಯೊಂದು ನೀಡಿದ್ದಾರೆ. ಜನವರಿ 10 ರಂದು ಡಿ ಬಾಸ್ ಫೇಸ್‌ಬುಕ್ ಲೈವ್ ಬರಲಿದ್ದಾರೆ. ವಿಶೇಷತೆ ಏನು ಎಂಬುದು ಸದ್ಯಕ್ಕೆ ತಿಳಿದಿಲ್ಲ. ಆದರೆ, ದರ್ಶನ್ ಅವರ ಫೇಸ್‌ಬುಕ್‌ ಲೈವ್‌ಗಾಗಿ ಅಭಿಮಾನಿಗಳು ಕಾಯುವಂತಾಗಿದೆ.

ಈ ಕುರಿತು ದರ್ಶನ್ ಅವರ ಅಭಿಮಾನಿ ಸಂಘದ ಫೇಸ್‌ಬುಕ್ ಖಾತೆ ಡಿ ಕಂಪನಿ ಮಾಹಿತಿ ನೀಡಿದ್ದು, ''ಎಲ್ಲಾ ಕನ್ನಡಾಭಿಮಾನಿಗಳಿಗೆ ಒಂದು ವಿಶೇಷ ಪ್ರಕಟಣೆ: ನಮ್ಮೆಲರ ನಲ್ಮೆಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಇದೇ ಜನವರಿ 10 ಬೆಳಗ್ಗೆ 11 ಗಂಟೆಗೆ ತಮ್ಮ FaceBook Page ಅಲ್ಲಿ ನಿಮ್ಮ ಮುಂದೆ ಲೈವ್ ಬರಲಿದ್ದಾರೆ'' ಎಂದು ತಿಳಿಸಿದ್ದಾರೆ.

 Special Announcement by Darshan on Jan 10 at 11am on Facebook Live

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ. ದರ್ಶನ್ ಜೊತೆಯಲ್ಲಿ ವಿನೋದ್ ಪ್ರಭಾಕರ್, ಜಗಪತಿಬಾಬು, ಆಶಾಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Recommended Video

ಕಿಚ್ಚನ ಕೆಲಸಕ್ಕೆ ಭೇಶ್ ಎಂದ ಅಭಿಮಾನಿಗಳು | Kiccha Sudeep In Pandavapura | Filmibeat Kannada

'ರಾಬರ್ಟ್' ಚಿತ್ರದ ಮುಗಿಸಿರುವ ದರ್ಶನ್ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಆರಂಭಿಸಿದ್ದಾರೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ.

More from Filmibeat

English summary
Special Announcement by Darshan: D Boss will be coming live On Jan 10th at 11am in Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X