twitter
    For Quick Alerts
    ALLOW NOTIFICATIONS  
    For Daily Alerts

    ದಸರಾದಲ್ಲೂ ಪುನೀತ್ ರಾಜ್‌ಕುಮಾರ್ ಆಕರ್ಷಣೆ: ಪ್ರಾಪ್ತಿಯಾಗಲಿದೆ ವಿಶೇಷ ಗೌರವ

    By ಮೈಸೂರು ಪ್ರತಿನಿಧಿ
    |

    ಪುನೀತ್ ರಾಜ್‌ಕುಮಾರ್ ಕಾಲವಾಗಿ ವರ್ಷವಾಗುತ್ತಾ ಬಂದಿದೆ. ಆದರೆ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಅಪ್ಪು ನೆನಪು. ಈಗಲೂ ರಾಜ್ಯದೆಲ್ಲೆಡೆ ಅಪ್ಪು ಹೆಸರಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ.

    ಕೆಲವು ದಿನಗಳ ಹಿಂದಷ್ಟೆ ಮುಗಿದ ಸ್ವಾತಂತ್ರೋತ್ಸವ ವಿಶೇಷ ಲಾಲ್‌ಬಾಗ್ ಪುಷ್ಪೋತ್ಸವವನ್ನು ಈ ವರ್ಷ ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ವಿಶೇಷವಾಗಿ ಆಯೋಜಿಸಲಾಗಿತ್ತು. ಸಾವಿರಾರು ಜನ ಲಾಲ್‌ಬಾಗ್‌ಗೆ ಆಗಮಿಸಿ ಹೂವುಗಳಲ್ಲಿ ಅರಳಿದ ಪುನೀತ್ ರಾಜ್‌ಕುಮಾರ್, ಡಾ ರಾಜ್‌ಕುಮಾರ್ ಅವರನ್ನು ಕಣ್ತುಂಬಿಕೊಂಡರು.

    'ಕ್ರಾಂತಿ'ಗೆ ಬೆಂಬಲ ನೀಡಲ್ಲ: ದರ್ಶನ್ ಕ್ಷಮೆ ಕೇಳಲೇಬೇಕು ಪುನೀತ್ ಫ್ಯಾನ್ಸ್ ಆಕ್ರೋಶ! 'ಕ್ರಾಂತಿ'ಗೆ ಬೆಂಬಲ ನೀಡಲ್ಲ: ದರ್ಶನ್ ಕ್ಷಮೆ ಕೇಳಲೇಬೇಕು ಪುನೀತ್ ಫ್ಯಾನ್ಸ್ ಆಕ್ರೋಶ!

    ಸ್ವಾತಂತ್ರ್ಯೋತ್ಸವದ ಬಳಿಕ ಇದೀಗ ದಸರಾದಲ್ಲಿಯೂ ಪುನೀತ್ ರಾಜ್‌ಕುಮಾರ್ ಮಿಂಚಲಿದ್ದಾರೆ. ಪುನೀತ್ ಅವರ ಸ್ಮರಣಾರ್ಥ ದಸರಾದಲ್ಲಿ ವಿಶೇಷ ದೀಪಾಲಂಕಾರವನ್ನು ಆಯೋಜಿಸಲಾಗಿದೆ.

    ನಟ ಪುನೀತ್ ರಾಜ್‌ಕುಮಾರ್ ಅವರ ಅಮಿನೇಷನ್ ಮತ್ತು ಕಟೌಟ್, ಆಕ್ಷನ್ ಭಂಗಿಗಳು ದೀಪಾಲಂಕಾರದ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ. ಕೊಲ್ಕೊತ್ತಾದ ದುರ್ಗಾಪೂಜೆ ಸಂದರ್ಭದಲ್ಲಿ ಆಯೋಜಿಸುವ ಮಾದರಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಪುನೀತ್ ರಾಜ್‌ಕುಮಾರ್ ಅವರ ವಿವಿಧ ಭಂಗಿಯ ದೀಪಾಲಂಕಾರಗಳನ್ನು ನಿರ್ಮಿಸಲಾಗುತ್ತದೆ. ಮಾತ್ರವಲ್ಲದೇ ಮಹಾರಾಜರ ಕಾಲದ ಆಚರಣೆಗಳ ಮಾದರಿ ದೀಪಾಲಂಕಾರದಲ್ಲಿ ಮೂಡಿಬರಲಿದೆ. ಇದಕ್ಕಾಗಿ ನಿತ್ಯವೂ ದೀಪಾಲಂಕಾರಕ್ಕೆ ಕನಿಷ್ಠ 10,000 ದಿಂದ 12,000 ಯೂನಿಟ್ ವಿದ್ಯುತ್ ಖರ್ಚಾಗಲಿದೆ.

    110 ಕಿ.ಮೀ ದೀಪಾಲಂಕಾರ

    110 ಕಿ.ಮೀ ದೀಪಾಲಂಕಾರ

    ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೈಸೂರು ನಗರದ ಪ್ರಮುಖ ವೃತ್ತಘಿ, ರಸ್ತೆ ಸೇರಿದಂಥೆ ಒಟ್ಟು 110 ಕಿ.ಮೀ. ದೀಪಾಲಂಕಾರಕ್ಕೆ ಸೆಸ್ಕ್ ಸಿದ್ಧತೆ ಆರಂಭಿಸಿದೆ. ಪ್ರತಿವರ್ಷ ದಸರೆಯಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅದು ದೀಪಾಲಂಕಾರ. ಸಾವಿರಾರು ಪ್ರವಾಸಿರು, ಸ್ಥಳೀಯರು ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಮೈಸೂರಿನ ಹೃದಯ ಭಾಗದ ಪಾರಂಪರಿಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ವೃತ್ತಗಳು, ಮುಖ್ಯ ಜಂಕ್ಷನ್‌ಗಳನ್ನು ಒಳಗೊಂಡಂತೆ ವಿವಿಧೆಡೆ ದೀಪಾಲಂಕಾರ ಮಾಡಲಾಗುತ್ತದೆ.

    ವಿಶೇಷ ಕಲ್ಪನೆಯೊಂದಿಗೆ ದೀಪಾಲಂಕಾರ

    ವಿಶೇಷ ಕಲ್ಪನೆಯೊಂದಿಗೆ ದೀಪಾಲಂಕಾರ

    ಸಂಜೆ 7 ಗಂಟೆಯಾಗುತ್ತಿದ್ದಂತೆ ಮೈಸೂರು ನಗರದತ್ತ ವಾಹನಗಳಲ್ಲಿ ಆಗಮಿಸುವ ಜನರು, ನಗರ ಪ್ರದಕ್ಷಿಣೆ ಮೂಲಕ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ನಗರದ ಜಯಚಾಮರಾಜ ಒಡೆರ್ಯ ವೃತ್ತ, ಚಾಮರಾಜ ಒಡೆರ್ಯ ವೃತ್ತ, ಕೆ.ರ್ಆ.ವೃತ್ತ, ಆಯುರ್ವೇದಿಕ್ ವೃತ್ತ, ರೈಲ್ವೆ ನಿಲ್ದಾಣ, ಮಿಲೇನಿಯಂ ವೃತ್ತ, ಹೈವೇ ವೃತ್ತ, ಗನ್ ಹೌಸ್ ಸರ್ಕಲ್, ಏಕಲವ್ಯ ವೃತ್ತ, ಕುರುಬಾರಹಳ್ಳಿ ವೃತ್ತ ಸೇರಿದಂತೆ 20ಕ್ಕೂ ಹೆಚ್ಚು ವೃತ್ತಗಳನ್ನು ಅಲಂಕೃತಗೊಳಿಸಲಾಗುತ್ತದೆ. ''ದಸರಾ ದೀಪಾಲಂಕಾರ ಕಳೆದ ಐದು ವರ್ಷಗಳಿಂದ ಸಾರ್ವಜನಿಕರು, ಹೋಟೆಲ್ ಉದ್ಯಮಿಗಳು, ಪ್ರವಾಸೋದ್ಯಮ ಅವಲಂಬಿಸಿರುವವರು, ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಬಾರಿಯೂ ವಿಶೇಷ ಕಲ್ಪನೆಯೊಂದಿಗೆ ದೀಪಾಲಂಕಾರ ಆಯೋಜಿಸಲಾಗುತ್ತಿದೆ,'' ಎಂದು ಸೆಸ್ಕ್‌ನ ಜನರಲ್ ಮ್ಯಾನೇಜರ್ ಕೆ.ಎಂ.ಮುನಿಗೋಪಾಲರಾಜು ತಿಳಿಸಿದ್ದಾರೆ.

    ಐದು ಕೋಟಿ ವೆಚ್ಚ

    ಐದು ಕೋಟಿ ವೆಚ್ಚ

    ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ 2020ರಲ್ಲಿ ಕೇವಲ 50 ಕಿ.ಮೀ. ಇದ್ದ ದೀಪಾಲಂಕಾರವನ್ನು ಕಳೆದ ದಸರಾ ಮಹೋತ್ಸವದಲ್ಲಿ 100 ಕಿ.ಮೀ.ಗೆ ವಿಸ್ತರಿಸಲಾಯಿತು. ಇದೀಗ ದಸರಾ ಉನ್ನತ ಸಮಿತಿ ಸಭೆಯಲ್ಲಿ ಅದ್ಧೂರಿ ದಸರಾ ಆಯೋಜಿಸುವುದಾಗಿ ಘೋಷಣೆ ಮಾಡಿರುವುದರಿಂದ ಈ ಬಾರಿ 10 ಕಿ.ಮೀ. ಹೆಚ್ಚುವರಿಯಾಗಿ ದೀಪಾಲಂಕಾರ ಮಾಡಲು ಸೆಸ್ಕ್ ನಿರ್ಧರಿಸಿದೆ. ಇದಕ್ಕಾಗಿ 5 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಯೋಜನೆ ಸಿದ್ಧಪಡಿಸಿದೆ.

    ನಗರಕ್ಕೆ ಬರಲಿದೆ ಮೆರುಗು

    ನಗರಕ್ಕೆ ಬರಲಿದೆ ಮೆರುಗು

    ಕಳೆದ ಬಾರಿ ನಗರದ ಬೀದಿಗಳು ಪ್ರಮುಖ ವಾಣಿಜ್ಯಘಿ, ಪಾರಂಪರಿಕ ಕಟ್ಟಡಗಳನ್ನು ವಿಶೇಷವಾಗಿ ಕಂಗೊಳಿಸುವಂತೆ ಮಾಡಿದ ದೀಪಾಲಂಕಾರಕ್ಕೆ ಮೈಸೂರಿಗರು ಮಾರು ಹೋದರು. ಸಂಜೆಯಾಯಿತೆಂದರೆ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತುಘಿ. ಅದಕ್ಕಾಗಿ ಅರಮನೆ ಸುತ್ತಲ ರಸ್ತೆಯಲ್ಲಿ ಏಕ ಮುಖ ಸಂಚಾರ ರಸ್ತೆಗಳಾಗಿ ಪರಿವರ್ತಿಸಲಾಯಿತು. ಆದರೂ ಈ ರಸ್ತೆಗಳಲ್ಲಿ ರಾತ್ರಿ 11 ರವರೆಗೆ ಸೃಷ್ಟಿಯಾಗುತ್ತಿದ್ದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು. ಈ ಬಾರಿ ದೀಪಾಲಂಕಾರಕ್ಕೆ ಮತ್ತಷ್ಟು ಮೆರುಗು ಬರಲಿದೆ ಎಂದು ಸೆಸ್ಕ್‌ನ ಜನರಲ್ ಮ್ಯಾನೇಜರ್ ಕೆ.ಎಂ. ಮುನಿಗೋಪಾಲರಾಜು ತಿಳಿಸಿದರು.

    English summary
    Special lighting of Puneeth Rajkumar will be arranged in Mysore Dasara this time in memory of Puneeth Rajkumar.
    Wednesday, August 24, 2022, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X