»   » ನಿರುಪ್ ಹುಟ್ಟುಹಬ್ಬಕ್ಕೆ ಅನುಪ್ ನಿಮಗೆ ಉಡುಗೊರೆ ಕೊಡ್ತಾರಂತೆ.!

ನಿರುಪ್ ಹುಟ್ಟುಹಬ್ಬಕ್ಕೆ ಅನುಪ್ ನಿಮಗೆ ಉಡುಗೊರೆ ಕೊಡ್ತಾರಂತೆ.!

Posted By:
Subscribe to Filmibeat Kannada

ಇಡೀ ಕನ್ನಡ ಚಿತ್ರರಂಗವೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ ನಿರ್ದೇಶಕ ಅನುಪ್ 'ಭಂಡಾರಿ' ಅವರು, ತಮ್ಮ ಚೊಚ್ಚಲ ಕಾಣಿಕೆ 'ರಂಗಿತರಂಗ' ಚಿತ್ರದ ನಂತರ 'ರಾಜರಥ' ಎಂಬ ಹೊಸ ಸಿನಿಮಾ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಇತ್ತೀಚೆಗಷ್ಟೇ 'ರಾಜರಥ' ಸೆಟ್ಟೇರಿದ್ದು, ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಸದ್ಯಕ್ಕೆ ಮೊದಲ ಹಂತದ ಶೂಟಿಂಗ್ ಮುಗಿಸುವ ತವಕದಲ್ಲಿರುವ ಅನುಪ್ ಭಂಡಾರಿ ಅವರು, ಚಿತ್ರದ ವಿಶೇಷ ಟೀಸರ'ನ್ನು, ವಿಶೇಷ ದಿನದಂದು ರಿಲೀಸ್ ಮಾಡಲು ಸಜ್ಜಾಗಿದ್ದಾರೆ.[ಅನುಪ್ ಭಂಡಾರಿ 'ರಾಜರಥ' ಏರಿದ ರಾಣಿ ಅವಂತಿಕಾ ಶೆಟ್ಟಿ]


Special 'Rajaratha' teaser for Actor Nirup's Birthday on August 13th

ಅಂದಹಾಗೆ ಈ ವಿಶೇಷ ದಿನ ಯಾವುದಪ್ಪಾ ಅಂದ್ರೆ, ಅನುಪ್ ಭಂಡಾರಿ ಅವರ ಸಹೋದರ ನಿರುಪ್ ಭಂಡಾರಿ ಅವರ ಹುಟ್ಟುಹಬ್ಬ. ಅದೇ ದಿನದಂದು 'ರಾಜರಥ' ಚಿತ್ರದ ಫಸ್ಟ್ ಲುಕ್ ಪ್ರೋಮೋ ಟೀಸರ್ ಅನ್ನು ಬಿಡುಗಡೆ ಮಾಡಲು ಅನುಪ್ ಪ್ಲ್ಯಾನ್ ಮಾಡುತ್ತಿದ್ದಾರೆ.[ಹೊಸ ಆವೃತ್ತಿಯೊಂದಿಗೆ ಕಲರ್ ಫುಲ್ 'ರಂಗಿತರಂಗ' ರೀ ರಿಲೀಸ್]


Special 'Rajaratha' teaser for Actor Nirup's Birthday on August 13th

ಆಗಸ್ಟ್ 13 ರಂದು ನಟ ನಿರುಪ್ ಭಂಡಾರಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಆ ಸಂಭ್ರಮದ ದಿನದಂದು ಅಭಿಮಾನಿಗಳಿಗೆ ಗಿಫ್ಟ್ ಆಗಿ 'ರಾಜರಥ' ಚಿತ್ರದ ಒಂದು ಸಣ್ಣ ತುಣುಕನ್ನು ಬಿಡುಗಡೆ ಮಾಡಲಿದ್ದಾರೆ.ಎರಡನೇ ಪ್ರಾಜೆಕ್ಟ್ 'ರಾಜರಥ'ದಲ್ಲಿ ಕೂಡ ಭಂಡಾರಿ ಸಹೋದರರು ಕೈ ಜೋಡಿಸಿದ್ದು, ನಟ ನಿರುಪ್ ಭಂಡಾರಿ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ 'ರಂಗಿತರಂಗ' ಬೆಡಗಿ ಅವಂತಿಕಾ ಶೆಟ್ಟಿ ಅವರು ಎರಡನೇ ಬಾರಿ ಡ್ಯುಯೆಟ್ ಹಾಡುತ್ತಿದ್ದಾರೆ. ವಿಶೇಷವಾಗಿ ಈ ಬಾರಿ ಸಾಯಿ ಕುಮಾರ್ ಬದಲು ರವಿಶಂಕರ್ ಅವರು ಖಳನಟನಾಗಿ ಖದರ್ ತೋರಲಿದ್ದಾರೆ.[ಭಂಡಾರಿ ಸಹೋದರರ ಹೊಸ ಚಿತ್ರಕ್ಕೆ ಒಳ್ಳೆ ಲೊಕೇಶನ್ ಇದ್ರೆ ಹೇಳಿ]


Special 'Rajaratha' teaser for Actor Nirup's Birthday on August 13th

ಜಾಲಿ ಹಿಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಅಜಯ್ ರೆಡ್ಡಿ, ಅಂಜು ವಲ್ಲಭ್, ವಿಶು ಡಾಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ಬಂಡವಾಳ ಹೂಡಿರುವ 'ರಾಜರಥ'ದ ವಿಶೇಷ ತುಣುಕು ಬಿಡುಗಡೆ ಆಗಲು ಕ್ಷಣಗಣನೆ ಶುರುವಾಗಿದೆ. ಮುಂದಿನ ವಾರ ಇದೇ ಹೊತ್ತಿಗೆ ನಿಮ್ಮೆಲ್ಲರ ಮುಂದೆ ಭಂಡಾರಿ ಸಹೋದರರ ಎರಡನೇ ಪ್ರಯೋಗ ಕಾಣ ಸಿಗಲಿದೆ.


English summary
Kannada Movie 'Rajaratha' special teaser for Kannada Actor Nirup Bhandari's Birthday on August 13th. Kannada Actress Avanthika Shetty and Kannada Actor Nirup Bhandari in the lead role. The movie is directed by Anup Bhandari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada