For Quick Alerts
  ALLOW NOTIFICATIONS  
  For Daily Alerts

  'ಲಿಂಗಾ' ಚಿತ್ರದ ಕೆಲ ಕಣ್ಣರಳಿಸುವ ಸಂಗತಿಗಳು

  By Harshitha
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಿವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಲಿಂಗಾ' ತೆರೆಮೇಲೆ ಬರುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ. ಪರದೆ ಮೇಲೆ 'ಲಿಂಗಾ' ದರ್ಶನ ಮಾಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

  ರಜನಿಕಾಂತ್ ಹುಟ್ಟುಹಬ್ಬದಂದೇ ತೆರೆಗೆ ಬರುತ್ತಿರುವ 'ಲಿಂಗಾ' ಹಲವು ಕಾರಣಗಳಿಗೆ ಸುದ್ದಿಯಾಗುತ್ತಲೇ ಬಂದಿದೆ. ರಜನಿ ಕಟ್ಟಾ ಭಕ್ತರಂತೂ 'ಲಿಂಗಾ' ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುವುದು ಗ್ಯಾರಂಟಿ. ಆದರೆ ಸಾಮಾನ್ಯ ಜನರು 'ಲಿಂಗಾ' ಚಿತ್ರವನ್ನು ಯಾಕೆ ನೋಡಬೇಕು? 'ಲಿಂಗಾ' ಚಿತ್ರದಲ್ಲಿರುವ ಸ್ಪೆಷಾಲಿಟಿಗಳಾದ್ರೂ ಏನು? [ರಜನಿಕಾಂತ್ 'ಲಿಂಗಾ' ಟ್ರೇಲರ್ ನಲ್ಲಿ ಏನುಂಟು, ಏನಿಲ್ಲ.?]

  ಇಡೀ ಕಾಲಿವುಡ್ ಮತ್ತು ಟಾಲಿವುಡ್ ಮಂದಿ ಕಣ್ಣರಳಿಸುವ ಹಾಗೆ ಮಾಡಿರುವ 'ಲಿಂಗಾ' ಚಿತ್ರದಲ್ಲಿ ಅಂಥದ್ದೇನಿದೆ. ಅದನ್ನ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ ನೋಡಿ.

  'ಲಿಂಗಾ' ಟೈಟಲ್ ಹಿಂದಿನ ರಹಸ್ಯ

  'ಲಿಂಗಾ' ಟೈಟಲ್ ಹಿಂದಿನ ರಹಸ್ಯ

  ಸ್ಟೈಲ್ ಕಿಂಗ್ ರಜನಿಗೆ ತುಂಬಾ ಇಷ್ಟವಾದ ದೇವರೆಂದರೆ ಅದು 'ಶಿವ'. ನೀವು ಗಮನಿಸಿದ್ದರೆ, ಬಹುತೇಕ ಸಿನಿಮಾಗಳಲ್ಲಿ ಶಿವನಿಗೆ ನಮಸ್ಕಾರ ಮಾಡುವ ಮೂಲಕವೇ ರಜನಿ ಚಿತ್ರದಲ್ಲಿ ಎಂಟ್ರಿಕೊಡುತ್ತಾರೆ. ಶಿವನ ಆಶೀರ್ವಾದವನ್ನು ಪಡೆದು ಪ್ರತಿ ಸಿನಿಮಾವನ್ನು ಆರಂಭಿಸುವ ರಜನಿ, ವಿಶೇಷವಾಗಿ ಈ ಚಿತ್ರಕ್ಕೆ 'ಲಿಂಗಾ' ಹೆಸರು ಸೂಕ್ತ ಅಂತ ಕೆ.ಎಸ್.ರವಿಕುಮಾರ್ ಗೆ ಸೂಚಿಸಿದ್ದರಂತೆ. ಅದಾಗಲೇ, ನಿರ್ದೇಶಕ ಆಮೀರ್ 'ಲಿಂಗಾ' ಅನ್ನುವ ಟೈಟಲ್ ರಿಜಿಸ್ಟರ್ ಮಾಡಿಸಿದ್ದರೂ ರಜನಿಗಾಗಿ ಬಿಟ್ಟುಕೊಟ್ಟರಂತೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ ರಜನಿಕಾಂತ್ ಮೊಮ್ಮಗನ ಹೆಸರೂ 'ಲಿಂಗಾ'.

  ಸೂಪರ್ ಸ್ಟಾರ್ ಡಬಲ್ ಧಮಾಕಾ

  ಸೂಪರ್ ಸ್ಟಾರ್ ಡಬಲ್ ಧಮಾಕಾ

  ರಜನಿ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿರುವುದೇ ಈ ಕಾರಣಕ್ಕೆ. ವರ್ಷಗಳ ನಂತ್ರ 'ಲಿಂಗಾ' ಚಿತ್ರದ ಮೂಲಕ ಡಬಲ್ ರೋಲ್ ನಲ್ಲಿ ರಜನಿಕಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸ್ಟೈಲಿಶ್ ಲುಕ್ ನಲ್ಲಿ ರಜನಿಯ ದರ್ಶನ ಸಿನಿಪ್ರಿಯರಿಗಾಗಿದೆ. ಆದ್ರೆ ಮತ್ತೊಂದು ಪಾತ್ರದಲ್ಲಿ ರಜನಿ ಹೇಗೆ ಕಾಣಬಹುದು ಅನ್ನುವುದನ್ನು ಕಾಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ಕಾಯ್ತಿದ್ದಾರೆ. ಹಾಗ್ನೋಡಿದರೆ, ರಜನಿ ಅಭಿನಯದ ಬಹುತೇಕ ಡಬಲ್ ರೋಲ್ ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್ ಆಗಿದೆ. ಆ ಲಿಸ್ಟ್ ಗೆ 'ಲಿಂಗಾ' ಸೇರ್ಪಡೆಯಾಗುತ್ತಾ ಅನ್ನುವುದು ನಾಳೆ ( ಡಿಸೆಂಬರ್ 12 ) ಗೊತ್ತಾಗಲಿದೆ. [ಸೂಪರ್ ಸ್ಟಾರ್ ರಜನಿ 'ಲಿಂಗಾ' ಸ್ಟೋರಿಲೈನ್ ಲೀಕ್ ]

  4 ವರ್ಷಗಳ ನಂತ್ರ ತೆರೆಮೇಲೆ ಸೂಪರ್ ಸ್ಟಾರ್

  4 ವರ್ಷಗಳ ನಂತ್ರ ತೆರೆಮೇಲೆ ಸೂಪರ್ ಸ್ಟಾರ್

  2010 ರಲ್ಲಿ ತೆರೆಕಂಡ 'ಎಂದಿರನ್' ಸಿನಿಮಾ ಬಿಟ್ಟರೆ, ಇಲ್ಲಿವರೆಗೂ ರಜನಿ ತೆರೆಮೇಲೆ ಕಾಣಿಸಿಕೊಂಡಿಲ್ಲ. 'ರಾ.ಒನ್' ಮತ್ತು 'ಕೊಚ್ಚಡಿಯನ್' ಚಿತ್ರದಲ್ಲಿ 3ಡಿ ಎಫೆಕ್ಟ್ ಇದ್ದಿದ್ದರಿಂದ ರಜನಿಯ ನಿಜ ಸ್ವರೂಪವನ್ನು ಕಣ್ಣಾರೆ ಕಾಣುವ ಭಾಗ್ಯ ಪ್ರೇಕ್ಷಕರಿಗೆ ಸಿಕ್ಕಿರಲಿಲ್ಲ.

  24 ಗಂಟೆಗಳಲ್ಲಿ ಡಬ್ಬಿಂಗ್ ಮುಗಿಸಿದ ರಜನಿ!

  24 ಗಂಟೆಗಳಲ್ಲಿ ಡಬ್ಬಿಂಗ್ ಮುಗಿಸಿದ ರಜನಿ!

  ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದು ರಜನಿಕಾಂತ್ ಮಾತ್ರ. ಅದಕ್ಕೆ ಉದಾಹರಣೆ, 'ಲಿಂಗಾ' ಚಿತ್ರದ ಡಬ್ಬಿಂಗ್ ಕೆಲಸವನ್ನು ಕೇವಲ 24 ಗಂಟೆಗಳಲ್ಲಿ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ ದಕ್ಷಿಣ ಭಾರತದ ಸ್ಟಂಟ್ ಗಾಡ್. [ಯೂಟ್ಯೂಬ್ ನಲ್ಲಿ ರಜನಿ 'ಲಿಂಗಾ' ಲಕಲಕ ಡಾನ್ಸ್]

  ಹುಟ್ಟುಹಬ್ಬಕ್ಕೆ ಮೊಟ್ಟಮೊದಲ ಸಿನಿಮಾ ಗಿಫ್ಟ್!

  ಹುಟ್ಟುಹಬ್ಬಕ್ಕೆ ಮೊಟ್ಟಮೊದಲ ಸಿನಿಮಾ ಗಿಫ್ಟ್!

  ಬಣ್ಣದ ಬದುಕಿಗೆ ಕಾಲಿಟ್ಟು ನಾಲ್ಕು ದಶಕಗಳಾದರೂ ಇಲ್ಲಿವರೆಗೂ ರಜನಿಕಾಂತ್ ಹುಟ್ಟುಹಬ್ಬದ ದಿನ ಒಂದು ಚಿತ್ರವೂ ರಿಲೀಸ್ ಆಗಿರ್ಲಿಲ್ಲ. ಆ ಮೂಲಕ ರಜನಿ ಅಭಿನಯದ 'ಲಿಂಗಾ' ಅಭಿಮಾನಿಗಳಿಗೆ ತುಂಬಾ ಸ್ಪೆಷಲ್! ['ಲಿಂಗಾ' ಚಿತ್ರಕ್ಕೆ ರಜನಿಕಾಂತ್ ಸಂಭಾವನೆ ಅಷ್ಟೊಂದಾ!]

  ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಕೈಚಳಕ

  ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಕೈಚಳಕ

  'ಲಿಂಗಾ' ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ರಜನಿಗೆ ಇಲ್ಲಿ ಸಾಹಸವನ್ನು ಸಂಯೋಜಿಸಿರುವುದು ಹಾಲಿವುಡ್ ನ ಪ್ರಖ್ಯಾತ ಸ್ಟಂಟ್ ಡೈರೆಕ್ಟರ್ ಲೀ ವಿಟ್ಟಾಕರ್ ( Lee Whittaker ). 'ಪರ್ಲ್ ಹಾರ್ಬರ್' ಅಂತಹ ಹಾಲಿವುಡ್ ಚಿತ್ರಗಳಿಗೆ ಮೈನವಿರೇಳಿಸುವ ಸಾಹಸವನ್ನು ಸಂಯೋಜಿಸಿದ್ದ ಲೀ, ಲಿಂಗಾ ಚಿತ್ರದಲ್ಲೂ ಪ್ರೇಕ್ಷಕರನ್ನ ಉಗುರು ಕಡಿಯುವಂತೆ ಮಾಡುತ್ತಾರಂತೆ.

  ಹ್ಯಾಟ್ರಿಕ್ ಕಾಂಬಿನೇಷನ್

  ಹ್ಯಾಟ್ರಿಕ್ ಕಾಂಬಿನೇಷನ್

  ರಜನಿಕಾಂತ್ ಗಾಗಿ 'ಪಡೆಯಪ್ಪ' ಮತ್ತು 'ಮುತ್ತು' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಕೆ.ಎಸ್.ರವಿಕುಮಾರ್ 'ಲಿಂಗಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಜನಿಕಾಂತ್ ಗೆ ಈ ಹಿಂದೆ ಹೊಸ ಇಮೇಜ್ ನೀಡಿದ್ದ ಕೆ.ಎಸ್.ರವಿಕುಮಾರ್, 'ಲಿಂಗಾ' ಚಿತ್ರದ ಮೂಲಕ ಮತ್ತೊಂದು ಪ್ರಯೋಗ ಮಾಡಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸಲ್ಲಿದ್ದಾರೆ.

  ಅನುಶ್ಕಾ-ಸೋನಾಕ್ಷಿ ಗ್ಲಾಮರ್ ರಂಗು

  ಅನುಶ್ಕಾ-ಸೋನಾಕ್ಷಿ ಗ್ಲಾಮರ್ ರಂಗು

  ರಜನಿ ಸ್ಟೈಲ್ ಜೊತೆಗೆ ಪ್ರೇಕ್ಷಕರ ಕಣ್ಣು ತಂಪು ಮಾಡುವುದಕ್ಕೆ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮತ್ತು ಅನುಶ್ಕಾ ಶೆಟ್ಟಿ ಇದ್ದಾರೆ. ಮೊದಲ ಬಾರಿಗೆ ಕಾಲಿವುಡ್ ಗೆ ಕಾಲಿಟ್ಟಿರುವ ಸೋನಾಕ್ಷಿ, ಕಂಪ್ಲೀಟ್ ಡೀಗ್ಲಾಮರಸ್ ಲುಕ್ ನಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೂ, ಹಾಡುಗಳಲ್ಲಿ ಸೋನಾಕ್ಷಿಯ ಚಮ್ಮಕ್ಕು, ರಜನಿ ಜೊತೆ ರೋಮ್ಯಾನ್ಸು ಜೋರಾಗಿದೆ.

  ಭಾಷೆ ಕಲಿಯದ ಸೋನಾಕ್ಷಿ

  ಭಾಷೆ ಕಲಿಯದ ಸೋನಾಕ್ಷಿ

  ತಮಿಳು ಡೈಲಾಗ್ಸ್ ಹೇಳುವಷ್ಟರಲ್ಲಿ ಸೋನಾಕ್ಷಿಗೆ ಸಾಕುಸಾಕ್ಹಾಗಿ ಹೋಗಿತ್ತಂತೆ. ತಮಿಳು ಭಾಷೆಯ ಬಗ್ಗೆ ಹಿಂದುಮುಂದು ಗೊತ್ತಿಲ್ಲದ ಸೋನಾಕ್ಷಿಗೆ ಮಾತುಗಳು ಅರ್ಥವಾಗದೆ ಹೆಣಗಾಡಿ ಬಿಟ್ಟರಂತೆ. ಹಾಗೂ ಹೀಗೂ ಶೂಟಿಂಗ್ ಮುಗಿಸಿದ ಸೋನಾಕ್ಷಿಗೆ ಗಾಯಕಿ ಚಿನ್ಮಯಿ ಕಂಠದಾನ ಮಾಡಿದ್ದಾರೆ. [ಸೂಪರ್ ಸ್ಟಾರ್ ರಜನಿಗೆ ದೇವರು ಕೊಟ್ಟ ದೊಡ್ಡ ಶಾಪ!]

  ಅದ್ದೂರಿ ಸೆಟ್ ಗಳು

  ಅದ್ದೂರಿ ಸೆಟ್ ಗಳು

  'ಲಿಂಗಾ' ಚಿತ್ರ, ಒಂದು ಡ್ಯಾಮ್ ನ ಸುತ್ತ ನಡೆಯುವ ಕಥೆಯಾಗಿರುವುದರಿಂದ ಕೆಲಭಾಗಗಳು, 'ಲಿಂಗನಮಕ್ಕಿ' ಡ್ಯಾಮ್ ನಲ್ಲಿ ಚಿತ್ರೀಕರಣವಾಗಿದ್ರೆ, ಇನ್ನೂ ಕೆಲಭಾಗಗಳನ್ನು ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ನಿಜ ಹೇಳ್ಬೇಕೆಂದರೆ, 'ಲಿಂಗನಮಕ್ಕಿ' ಡ್ಯಾಮ್ ಗೆ ತಲೆಮೇಲೆ ಹೊಡೆದ ಹಾಗೆ ಚಿತ್ರದಲ್ಲಿ ಸೆಟ್ ನಿರ್ಮಿಸಲಾಗಿದೆ. 'ಲಿಂಗಾ' ಸಿನಿಮಾ ನೋಡುವವರಿಗೆ ಸೆಟ್ ಹಾಕಿರುವ ಡ್ಯಾಮ್ ಗೂ ನಿಜವಾದ ಲಿಂಗನಮಕ್ಕಿ ಡ್ಯಾಮ್ ಗೂ ವ್ಯತ್ಯಾಸವೇ ಗೊತ್ತಾಗಲ್ಲವಂತೆ. [ರಜನಿ 'ಲಿಂಗಾ' ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ]

  ಮನಮೋಹಕವಾಗಿ ಕಾಣಲಿದೆ 'ಕರ್ನಾಟಕ'

  ಮನಮೋಹಕವಾಗಿ ಕಾಣಲಿದೆ 'ಕರ್ನಾಟಕ'

  'ಲಿಂಗಾ' ಚಿತ್ರ ಕನ್ನಡಿಗರಿಗೆ ಹೆಚ್ಚು ಹತ್ತಿರವಾಗುವುದಕ್ಕೆ ಇದು ಮುಖ್ಯ ಕಾರಣ. ವಿಶ್ವ ವಿಖ್ಯಾತ ಮೈಸೂರು ಅರಮನೆ, ಮೇಲುಕೋಟೆ, ಮನುವನ, ಪಾಂಡವಪುರ, ಚಾಮುಂಡಿ ಬೆಟ್ಟ, ಜೋಗ ಜಲಪಾತ, ಲಿಂಗನಮಕ್ಕಿ ಡ್ಯಾಮ್ ನಲ್ಲಿ 'ಲಿಂಗಾ' ಚಿತ್ರದ ಚಿತ್ರೀಕರಣ ನಡೆದಿದೆ. Red Dragon 6k ಕ್ಯಾಮರಾ ಮತ್ತು Phantom Flex 4k ಕ್ಯಾಮರಾ ಬಳಸಿ, ಈ ಎಲ್ಲಾ ಲೋಕೇಷನ್ಸ್ ಗಳನ್ನ ಮನಮೋಹಕವಾಗಿ ಸೆರೆಹಿಡಿದಿದ್ದಾರೆ ರತ್ನವೇಲು. [ಮಂಡ್ಯ ಸುತ್ತಮುತ್ತ ರಜನಿಕಾಂತ್ 'ಲಿಂಗ' ಶೂಟಿಂಗ್]

  ಹಾಲಿವುಡ್ ನಟರನ್ನೇ ಮೀರಿಸಿದ ರಜನಿ

  ಹಾಲಿವುಡ್ ನಟರನ್ನೇ ಮೀರಿಸಿದ ರಜನಿ

  'ಲಿಂಗಾ' ಚಿತ್ರದಲ್ಲಿ ಹಿಂದೆಂದಿಗಿಂತಲೂ ಸ್ಟೈಲಿಶ್ ಆಗಿ ಕಾಣುವ ರಜನಿ, ಮೊನಾ-ಗಾಸೋಲೀನಾ ಹಾಡಲ್ಲಿ ಹಾಲಿವುಡ್ ನ ಪ್ರಖ್ಯಾತ ಜ್ಯಾಕ್ ಸ್ಪಾರೋ, ರಾಬಿನ್ ಹುಡ್, ಟಾಮ್ ಕ್ರೂಸ್ ಕ್ಯಾರೆಕ್ಟರ್ ಲುಕ್ ನಲ್ಲಿ ಮಿಂಚಿದ್ದಾರೆ. ಆ ಮೂಲಕ ಹಾಲಿವುಡ್ ಹೀರೋಗಳಿಗೆ ಸೆಡ್ಡು ಹೊಡೆದಿದ್ದಾರೆ ರಜನಿಕಾಂತ್.

  5000 ಸ್ಕ್ರೀನ್ ಗಳಲ್ಲಿ 'ಲಿಂಗಾ' ದರ್ಶನ

  5000 ಸ್ಕ್ರೀನ್ ಗಳಲ್ಲಿ 'ಲಿಂಗಾ' ದರ್ಶನ

  ಇಡೀ ಭಾರತ 'ಲಿಂಗಾ' ಚಿತ್ರದ ಬಗ್ಗೆ ಕಣ್ಣರಳಿಸಿರುವುದಕ್ಕೆ ಕಾರಣ ಇದೇ! ವಿಶ್ವದಾದ್ಯಂತ ಒಟ್ಟು 5000 ಸ್ಕ್ರೀನ್ ಗಳಲ್ಲಿ 'ಲಿಂಗಾ' ತೆರೆಕಾಣುತ್ತಿದೆ. ಇದು ದಕ್ಷಿಣ ಭಾರತ ಮಾತ್ರವಲ್ಲ. ಭಾರತದ ಮಟ್ಟಿಗೆ ದಾಖಲೆ. [ರಜನಿಕಾಂತ್ 'ಲಿಂಗಾ' ಚಿತ್ರದ ರಿಲೀಸ್ ಗೆ ಕಂಟಕ]

  ದಾಖಲೆ ಬೆಲೆಗೆ 'ಲಿಂಗಾ' ಮಾರಾಟ

  ದಾಖಲೆ ಬೆಲೆಗೆ 'ಲಿಂಗಾ' ಮಾರಾಟ

  ರಿಲೀಸ್ ಗೂ ಮುನ್ನವೇ ದಾಖಲೆ ಬರೆದಿರುವ 'ಲಿಂಗಾ' ಚಿತ್ರ 200 ಕೋಟಿ ರೂಪಾಯಿಗೆ ವಿತರಣಾ ಹಕ್ಕುಗಳು ಮಾರಾಟವಾಗಿದೆ. ಇನ್ನೂ ಚಿತ್ರದ ಸ್ಯಾಟೆಲೈಟ್ ಹಕ್ಕು ಕೂಡ ಬರೋಬ್ಬರಿ 320 ಮಿಲಿಯನ್ ಗೆ ಮಾರಾಟವಾಗಿ ಇತಿಹಾಸ ನಿರ್ಮಿಸಿದೆ.

  ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಾಣ

  ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಾಣ

  'ಲಿಂಗಾ' ಚಿತ್ರಕ್ಕೆ ಕೋಟಿ ಕೋಟಿ ಸುರಿದಿರುವ ನಿರ್ಮಾಪಕ, ಕನ್ನಡಿಗ ರಾಕ್ ಲೈನ್ ವೆಂಕಟೇಶ್. ಮೊದಲ ಬಾರಿಗೆ ರಜನಿಕಾಂತ್ ಕಾಲ್ ಶೀಟ್ ಹಿಡಿದಿರುವ ರಾಕ್ ಲೈನ್, ಕೇವಲ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣಕ್ಕಾಗಿ 10 ಮಿಲಿಯನ್ ಖರ್ಚು ಮಾಡಿದ್ದಾರೆ. ಜೋಗ ಜಲಪಾತದ ಪಕ್ಕದಲ್ಲೇ 'ಶಿವ ಲಿಂಗ' ಮೂರ್ತಿ ಮತ್ತು ಜಲಾಶಯದ ಸೆಟ್ ನಿರ್ಮಸುವುದಕ್ಕೆ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದಾರೆ ರಾಕ್ ಲೈನ್.

  English summary
  Super Star Rajinikanth starrer Lingaa movie is in talk of the town for various reasons. Prior to the release of the movie, Lingaa has created a many records. Here is the detailed list of Specialities of Lingaa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X