Just In
Don't Miss!
- Lifestyle
ಬುಧವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಬಿ ಪುತ್ರನ ಚಿತ್ರಕ್ಕಾಗಿ ಬರ್ತಾರೆ ಭಾರತದ ಸೂಪರ್ ಸ್ಟಾರ್ಸ್.!
ರೆಬಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯಿಸಲಿರುವ ಚೊಚ್ಚಲ ಸಿನಿಮಾ 'ಅಮರ್' ಇಂದು ಅದ್ಧೂರಿಯಾಗಿ ಸೆಟ್ಟೇರಿದೆ. ಟೈಟಲ್ ಇಂದ ಹಿಡಿದು ಪ್ರತಿಯೊಂದು ವಿಷ್ಯದಲ್ಲೂ ಸಿನಿಮಾ ಡಿಫ್ರೆಂಟ್ ಮತ್ತು ಅದ್ಧೂರಿಯಾಗಿರಬೇಕು ಎನ್ನುವುದು ಚಿತ್ರತಂಡದ ಉದ್ದೇಶ.
ಹೀಗಾಗಿ, ಅಂಬಿ ಪುತ್ರನ ಚೊಚ್ಚಲ ಸಿನಿಮಾಗೆ ಬಹುಭಾಷೆಯ ತಾರೆಗಳನ್ನ ಕರೆತರಲಿದ್ದಾರೆ. ಅಷ್ಟೇ ಅಲ್ಲದೇ ಕೊರಿಯೋಗ್ರಫರ್ ವಿಚಾರದಲ್ಲೂ 'ಅಮರ್' ತಂಡ ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ಸಂದರ್ಶನ : ಜನರ ನಿರೀಕ್ಷೆ ಈಡೇರಿಸಲಿಲ್ಲ ಅಂದ್ರೆ ನಾವು ಮಾಡೋದೆ ವೇಸ್ಟ್
ನಾಗಶೇಖರ್ ನಿರ್ದೇಶನ ಮಾಡುತ್ತಿದ್ದು, ಸಂದೇಶ ನಾಗರಾಜ್ ನಿರ್ಮಾಣ ಮಾಡ್ತಿದ್ದಾರೆ. ಈ ಇಬ್ಬರು ಸೇರಿ ಯಂಗ್ ರೆಬಲ್ ಸ್ಟಾರ್ ಚಿತ್ರವನ್ನ ಮೈಲಿಗಲ್ಲು ಮಾಡಲು ಹೊರಟಿದ್ದಾರೆ. ಅಷ್ಟಕ್ಕೂ, ಅಮರ್ ಚಿತ್ರದ ವಿಶೇಷತೆಗಳೇನು.? ಮುಂದೆ ಓದಿ....

'ಅಮರ್' ಚಿತ್ರದಲ್ಲಿ ಸೂಪರ್ ಸ್ಟಾರ್ ಗಳು
ಅಂಬರೀಶ್ ಮಗನ ಚೊಚ್ಚಲ ಸಿನಿಮಾ ಅಮರ್ ಗೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳು ಸಾಥ್ ನೀಡಲಿದ್ದಾರೆ. ಹೀಗಂತ ಸ್ವತಃ ನಿರ್ದೇಶಕ ನಾಗಶೇಖರ್ ಹೇಳಿಕೊಂಡಿದ್ದಾರೆ. ಚಿತ್ರದ ಒಂದು ಹಾಡಿನಲ್ಲಿ ಅಂಬರೀಶ್ ಅವರ ಸಮಕಾಲಿನ ತಾರೆಯರನ್ನ ಕುಣಿಸುವ ಯೋಜನೆ ಹಾಕಿಕೊಂಡಿದ್ದಾರೆ.
in pics: ಅಂಬರೀಶ್ ಮಗನ ಚಿತ್ರದ ಮುಹೂರ್ತ ಕಾರ್ಯಕ್ರಮ

ಯಾವೆಲ್ಲ ದಿಗ್ಗಜರು ಬರಬಹುದು.?
ಇನ್ನು ಅಂಬರೀಶ್ ಅವರ ಸಮಕಾಲಿನ ಸೂಪರ್ ಸ್ಟಾರ್ ಗಳು ಅಂದ್ರೆ, ಫಟ್ ಅಂತ ನೆನಪಾಗುವುದೇ. ಮೆಗಾಸ್ಟಾರ್ ಚಿರಂಜೀವಿ, ತೆಲುಗು ನಟ ಮೋಹನ್ ಬಾಬು, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಬಾಲಿವುಡ್ ನಟ ಶತ್ರುಘ್ನ ಸಿನ್ಹ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಅಂಬಿಗೆ ತುಂಬ ಆತ್ಮೀಯರು. ಇವರನ್ನ ಬಿಟ್ಟರೇ, ಸ್ಯಾಂಡಲ್ ವುಡ್ ನಲ್ಲಿ ಹಲವು ನಟ-ನಟಿಯರು ಅಂಬಿ ಮಾತಿಗೆ ಇಲ್ಲ ಎನ್ನಲ್ಲ. ಆದ್ರೆ, ಯಾರ್ಯಾರು ಎಂಬುದರ ಬಗ್ಗೆ ಯಾವುದೇ ಸುಳಿವು ಕೂಡ ನಾಗಶೇಖರ್ ಬಿಟ್ಟುಕೊಟ್ಟಿಲ್ಲ.
'ಅಮರ್' ಶೀರ್ಷಿಕೆ ಹಿಂದಿದೆ ಸೂಪರ್ ಸೀಕ್ರೆಟ್

ಈ ಹಾಡಿಗೆ ಕೊರಿಯೋಗ್ರಫರ್ ಯಾರು ಗೊತ್ತಾ.?
ಅಂದ್ಹಾಗೆ, 'ಅಮರ್' ಚಿತ್ರದ ಎಲ್ಲ ಹಾಡುಗಳಿಗೂ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಆದ್ರೆ, ಈ ಮೇಲೆ ಹೇಳಿದ ವಿಶೇಷ ಹಾಡಿಗೆ ಬಹುಭಾಷಾ ನೃತ್ಯ ಸಂಯೋಜಕರಾದ ಪ್ರಭುದೇವ ಅಥವಾ ಲಾರೆನ್ಸ್ ಅವರಿಂದ ಮಾಡಿಸುವ ಉದ್ದೇಶವಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ತಾನ್ಯ ಹೋಪ್ ಹೀರೋಯಿನ್
ಇನ್ನುಳಿದಂತೆ ನಟಿ ತಾನ್ಯ ಹೋಪ್ ಅಮರ್ ಚಿತ್ರದ ನಾಯಕಿಯಾಗಿದ್ದಾರೆ. ಸದ್ಯ, ತಾನ್ಯ, ದರ್ಶನ್ ಅಭಿನಯಿಸುತ್ತಿರುವ 'ಯಜಮಾನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನು ನಿರ್ದೇಶಕರ ಜೊತೆ ಕವಿರಾಜ್ ಸಾಹಿತ್ಯ ರಚನೆಗೆ ಕೈಜೋಡಿಸಲಿದ್ದಾರೆ.