»   » ಕನ್ನಡದಲ್ಲಿ ಡಬ್ ಆಗುತ್ತಿದೆ ಹಾಲಿವುಡ್ 'ಸ್ಪೈಡರ್ ಮ್ಯಾನ್'!

ಕನ್ನಡದಲ್ಲಿ ಡಬ್ ಆಗುತ್ತಿದೆ ಹಾಲಿವುಡ್ 'ಸ್ಪೈಡರ್ ಮ್ಯಾನ್'!

Posted By:
Subscribe to Filmibeat Kannada

ಕನ್ನಡದಲ್ಲಿ ಡಬ್ಬಿಂಗ್ ವಿರೋಧದ ನಡುವೆಯೂ 'ಸತ್ಯದೇವ್ ಐಪಿಎಸ್' ಚಿತ್ರವೂ ರಾಜ್ಯದ ಹಲವು ಕಡೆ ಬಿಡುಗಡೆಯಾಗಿತ್ತು. 'ಬಾಹುಬಲಿ-2' ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಬೇಕು ಎಂಬ ಅಭಿಯಾನ ಬೇರೆ ನಡೆಯುತ್ತಿದೆ.[ಡಬ್ಬಿಂಗ್; 'ಸತ್ಯದೇವ್ ಐಪಿಎಸ್' ಮೊದಲ ದಿನವೇ ಠುಸ್]

ಹೀಗಿರುವಾಗ, ಡಬ್ಬಿಂಗ್ ಬೇಡವೇ ಬೇಡ ಎಂದು ಕನ್ನಡ ಪರ ಹೋರಾಟಗಾರರು ಮತ್ತು ಚಿತ್ರರಂಗದವರು ಬೀದಿಗಳಿದು ಪ್ರತಿಭಟನೆ ಮಾಡಿದ್ರು. ಇಂತಹ ಸಂಧರ್ಭದಲ್ಲಿ ಈಗ ಹಾಲಿವುಡ್ ಚಿತ್ರವೊಂದು ಕನ್ನಡದಲ್ಲಿ ಡಬ್ ಆಗಲು ಸಿದ್ದವಾಗಿದೆ. ಮುಂದೆ ಓದಿ....

ಕನ್ನಡದಲ್ಲಿ ಬರುತ್ತಂತೆ 'ಸ್ಪೈಡರ್ ಮ್ಯಾನ್'!

ಹಾಲಿವುಡ್ ಸೂಪರ್ ಹೀರೋ ಸೀರಿಸ್ ನ 'ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್' ಚಿತ್ರ ಕನ್ನಡದಲ್ಲಿ ಡಬ್ ಆಗಲಿದೆಯಂತೆ. ಇಂಗ್ಲೀಷ್ ನಲ್ಲಿ ತಯಾರಾಗುತ್ತಿರುವ ಚಿತ್ರ ಕನ್ನಡದಲ್ಲೂ ಡಬ್ ಮಾಡಿ, ಬಿಡುಗಡೆ ಮಾಡಲಿದ್ದಾರಂತೆ.['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

ಭಾರತೀಯ 10 ಭಾಷೆಗಳಲ್ಲಿ ಬಿಡುಗಡೆ!

ಕೇವಲ ಕನ್ನಡದಲ್ಲಿ ಮಾತ್ರವಲ್ಲ ಭಾರತೀಯ 10 ಭಾಷೆಗಳಲ್ಲಿ 'ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್' ಸಿನಿಮಾ ತೆರೆಕಾಣಲಿದೆಯಂತೆ. ಹಿಂದಿ, ತಮಿಳು, ತೆಲುಗು, ಗುಜರಾತಿ, ಮರಾಠಿ, ಭೋಜ ಪುರಿ, ಬೆಂಗಾಳಿ, ಪಂಜಾಬಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಆಗುತ್ತಿದೆಯಂತೆ.[ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಡಿಚ್ಚಿ ಕೊಟ್ಟ 'ದಾಸ' ದರ್ಶನ್.!]

ಪತ್ರಕರ್ತ ತರಣ್ ಆದರ್ಶ ಟ್ವೀಟ್!

ಭಾರತೀಯ ಚಲನಚಿತ್ರ ನಿರ್ಮಾಪಕ ಹಾಗೂ ವೃತ್ತಿಯಲ್ಲಿ ಪತ್ರಕರ್ತ ಆಗಿರುವ ತರಣ್ ಆದರ್ಶ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.[ಶ್ರೀಲಂಕಾ, ಮಲೇಶಿಯಾದಿಂದ ಜಗ್ಗೇಶ್ ಗೆ ಬಂದಿದೆ ಬೆದರಿಕೆ ಕರೆ.! ಯಾಕೆ.?]

ಅಭಿಮಾನಿಗಳಿಂದ ಸ್ವಾಗತ!

'ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್' ಚಿತ್ರ ಕನ್ನಡಕ್ಕೆ ಡಬ್ ಆಘುತ್ತಿರುವುದಕ್ಕೆ ಕನ್ನಡ ಸಿನಿ ಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಬೇರೆ ಚಿತ್ರಗಳು ಡಬ್ ಆಗಲಿ ಎಂದು ಅಭಿಯಾನ ಮಾಡುತ್ತಿದ್ದಾರೆ.[ಡಬ್ಬಿಂಗ್ ಮಾಡೋರಿಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಂಕರ್!]

ಬಿಡುಗಡೆ ಯಾವಾಗ?

ಅಂದ್ಹಾಗೆ, 'ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್' ಜುಲೈ 7 ರಂದು ಬಿಡುಗಡೆಯಾಗುತ್ತಿದೆ. ನಾಳೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆಯಂತೆ.

English summary
Hollywood Upcoming Movie 'SpidermanHomecoming' trailer Releasing in Hindi, Tamil, Telugu, Gujarati, Marathi, Punjabi, Malayalam, Bengali, Bhojpuri including Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada