»   » ಹೊಸ ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!

ಹೊಸ ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಟಿ ರಮ್ಯಾ ನನ್ನ ಪತ್ನಿ ಎಂದು ಹೇಳಿ ಪೊಲೀಸರ ಅತಿಥಿಯಾಗಿದ್ದ ಗ್ರೇಟ್ ಡೈರೆಕ್ಟರ್ ಕಮ್ ಟ್ರ್ಯಾಜಿಡಿ ನಟ ಹುಚ್ಚ ವೆಂಕಟ್ ಎಲ್ಲರಿಗೂ ಚಿರಪರಿಚಿತ.

ಸ್ವತಂತ್ರಪಾಳ್ಯ ಎಂಬ ಚಿತ್ರ ನಿರ್ದೇಶಿಸಿ ಗಾಂಧಿನಗರದಲ್ಲಿ ಓಡಾಡಿಕೊಂಡಿದ್ದ ವೆಂಕಟೇಶ್ ತನ್ನ ಹುಚ್ಚಾಟಗಳಿಂದ ಹುಚ್ಚ ವೆಂಕಟ್ ಆಗಿಬಿಟ್ಟ. 2010ರಲ್ಲಿ ನಟಿಯೊಬ್ಬರೊಂದಿಗೆ ನಿಶ್ಚಿತಾರ್ಥ ಆಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಂತರ ಅಪ್ಪನ ದುಡ್ಡು ಹಾಕಿ 'ಹುಚ್ಚ ವೆಂಕಟ್' ಎಂಬ ಚಿತ್ರ ನಿರ್ಮಿಸಿ ನಿರ್ದೇಶಿಸಿ ನಟನೆ ಮಾಡಿದ್ದಲ್ಲದೆ ಧೈರ್ಯ ಮಾಡಿ ಬಿಡುಗಡೆಯೂ ಮಾಡಿಬಿಟ್ಟ.

Kannada filmmaker Huchcha Venkat video spoof non stop comedy

'ನನ್ನ ಚಿತ್ರದ ನಾಯಕಿ ಹೆಸರು ಕೂಡಾ ರಮ್ಯಾ. ಇದು ನನ್ನ ಜೀವನದ ಕಥೆ ಎಂದು ಹೇಳಲಾರೆ. ಎಲ್ಲವನ್ನು ಹೇಳಿಬಿಟ್ಟರೆ ಸಿನಿಮಾ ಯಾರು ನೋಡುತ್ತಾರೆ. ರಮ್ಯಾ ಅವರು ಬಂದು ನಾನು ಅವರ ಪತಿ ಅಲ್ಲ ಎಂದು ಹೇಳಲಿ ಅಲ್ಲಿ ತನಕ ನಾನು ಹೀಗೆ ಹೇಳುತ್ತೇನೆ. ಯಾರದು ರಫೇಲ್, ರಮ್ಯಾ ಅವರಿಗೆ ಯಾರೂ ಆ ಹೆಸರಿನ ಬಾಯ್ ಫ್ರೆಂಡ್ ಇರಲಿಲ್ಲ' ಎಂದು ವೆಂಕಟ್ ಟಿವಿ ಸ್ಟುಡಿಯೋದಲ್ಲಿ ಕುಳಿತು ಹೇಳಿಕೊಂಡಿದ್ದ ನಂತರ ಪೊಲೀಸರ ಅತಿಥಿಯಾಗಿ ಹೊರ ಬಂದ.[ವೆಂಕಟೇಶ್ ಗೆ ಗಿಮಿಕ್ ಹೊಸದಲ್ಲ]

ಇಷ್ಟೆಲ್ಲ ಬಿಲ್ಡಪ್ ಗಿಮಿಕ್ ಮಾಡಿದರೂ ನನ್ನ ಚಿತ್ರ ನೋಡೋಕೆ ಜನ ಬರುತ್ತಿಲ್ಲ ಎಂದು ಗೊಳೋ ಎಂದು ವೆಂಕಟ್ ಗೋಳಾಡಿದ್ದನು ಸಮಯ ಸುದ್ದಿ ವಾಹಿನಿ ಸೆರೆ ಹಿಡಿದು ನ.28ರಂದು ಯೂಟ್ಯೂಬಿಗೆ ಬಿಟ್ಟಿತ್ತು. ಈಗ ಅದಕ್ಕೆ ಸುಮಾರು 62,777 ಹಿಟ್ಸ್ ಸಿಕ್ಕಿದೆ. ಈ ವಿಡಿಯೋ ಜೊತೆಗೆ ಕೀರ್ತಿ ಶಂಕರಘಟ್ಟ ಮಾಡಿದ ಸಂದರ್ಶನದ ವಿಡಿಯೋ ಕೂಡಾ ಫೇಸ್ ಬುಕ್, ವ್ಯಾಟ್ಸಪ್ ನಲ್ಲಿ ಸುತ್ತಾಡ ತೊಡಗಿತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹುಟ್ಟಿದ್ದಾನೆ ಮರಿ ವೆಂಕಟ: ಈಗ ಈ ವಿಡಿಯೋಗೆ spoof ಆಗಿ jumpcuts ತಂಡದವರು ಒಂದು ವಿಡಿಯೋ ಹೊರ ಬಿಟ್ಟಿದ್ದಾರೆ. ಹುಚ್ಚ ವೆಂಕಟ್ ನ ಇಸ್ಟೈಲಿನಲ್ಲಿ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಅಣಕು ಮಾಡಿರುವ ಈ ವಿಡಿಯೋ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಇದೇ ಮಾದರಿ ವಿಡಿಯೋಗಳನ್ನು ಇನ್ನಷ್ಟು ಹೊರತರುತ್ತೇವೆ ಎಂದು ತಂಡ ಹೇಳಿಕೊಂಡಿದೆ. ಈ ವಿಡಿಯೋ ಸದ್ಯಕ್ಕೆ ಈ ದಿನದ ಈ ಕ್ಷಣದ ಟಾಪ್ ವಿಡಿಯೋ ಎರಡು ವಿಡಿಯೋ ನೋಡಿ ಆನಂದಿಸಿ.


ಫೇಸ್ ಬುಕ್ ನಲ್ಲಿ ಫೊಟೋ ಅಪಲೋಡ್ ಮಾಡಿದ್ದೇನೆ. ಬೆಳಿಗ್ಗೆಯಿಂದ ಮೂರೇ ಲೈಕು. ಕಲೆನಾ ತುಳೀತಾ ಇದ್ದೀರಾ.. ಯಾಕ್ ಲೈಕ್ ಮಾಡ್ತಾ ಇಲ್ಲ, ಲೈಕ್ ಮಾಡ್ಬೇಕ್, ಅರ್ಥ ಆಯ್ತಾ... ಫೋಟೋ ಚೆನ್ನಾಗಿಲ್ಲ ಅಂದ್ರೆ ಕಾಮೆಂಟ್ ಹಾಕಿ ಆದರೆ, ಬಂದು ನೋಡಿ ಎಂದು ಥೇಟ್ ಅಸಲಿ ಹುಚ್ಚನ ಮಾದರಿಯಲ್ಲೇ ಹೊಸ ವಿಡಿಯೋ ಡೈಲಾಗ್ಸ್ ಇದೆ.
English summary
Kannada filmmaker Huchcha Venkat alias Venkatesh who created chaos by announcing that film star Ramya alias Divya Spandana is his wife. He made a movie Huchcha Venkat which was a utter flop. Later He shouted on public in pain a video carried by local media is now into spoof comedy by jumpcuts 'venkat in sankat'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada