»   » ಶ್ರೀಮುರಳಿ, ಧ್ರುವ ಸರ್ಜಾ 'ಅಯ್ಯೋ ರಾಮ' ಅಂತಿರೋದು ಯಾಕೆ.?

ಶ್ರೀಮುರಳಿ, ಧ್ರುವ ಸರ್ಜಾ 'ಅಯ್ಯೋ ರಾಮ' ಅಂತಿರೋದು ಯಾಕೆ.?

Posted By:
Subscribe to Filmibeat Kannada
ಶ್ರೀಮುರಳಿ, ಧ್ರುವ ಸರ್ಜಾ 'ಅಯ್ಯೋ ರಾಮ' ಅಂತಿರೋದು ಯಾಕೆ.? | Filmibeat Kannada

ನಟ 'ಶ್ರೀ ಮುರಳಿ' ಸದ್ಯ 'ಮಫ್ತಿ' ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅದ್ಯಾಕೋ 'ಅಯ್ಯೋ ರಾಮ' ಅಂತಿದ್ದಾರಂತೆ. ಅರೇ.. ಇವ್ರಿಗೇನಾಯ್ತು ಅಂತ ಯೋಚನೆ ಮಾಡೋ ಅಷ್ಟರಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ 'ಅಯ್ಯೋ ರಾಮ' ಅಂತಿದ್ದಾರೆ.

ಈ ಇಬ್ಬರು ನಟರು 'ಅಯ್ಯೋ ರಾಮ' ಅಂತಿರೋದು ಯಾಕಪ್ಪಾ ಅಂದ್ರೆ ತನ್ನ ಜೊತೆ ಅಭಿನಯಿಸಿರುವ ಸಹ ನಟನ ಸಿನಿಮಾವನ್ನ ಪ್ರಮೋಷನ್ ಮಾಡೋದಕ್ಕೆ. 'ಶ್ರೀಮುರಳಿ' ಜೊತೆ 'ಉಗ್ರಂ' ಚಿತ್ರದಲ್ಲಿ ಅಭಿನಯಿಸಿದ್ದ ನಟ ಪ್ರದೀಪ್ ಅಭಿನಯದ 'ಅಯ್ಯೋ ರಾಮ' ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ 'ಶ್ರೀ ಮುರಳಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

sri murali- dhruva supports 'Ayyo Rama' Movie

'ಅಯ್ಯೋರಾಮ'... ನಟ ಪ್ರದೀಪ್ ಅಭಿನಯದ ಸಿನಿಮಾ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭ ಮಾಡಿರುವ ಚಿತ್ರತಂಡ ಇತ್ತೀಚೆಗಷ್ಟೇ ನಟ ಶ್ರೀಮುರಳಿ ರವರಿಂದ ಸಿನಿಮಾದ ಪೋಸ್ಟರ್ ಅನ್ನ ರಿಲೀಸ್ ಮಾಡಿಸಿದ್ದಾರೆ. ಆರ್.ವಿನೋದ್ ಕುಮಾರ್ ಚಿತ್ರವನ್ನ ನಿರ್ದೇಶನ ಮಾಡಿದ್ದು ತ್ರಿವಿಕ್ರಮ ರಘು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪ್ರದೀಪ್ ಜೊತೆಯಲ್ಲಿ ಸೂರ್ಯ, ಕರಿಸುಬ್ಬು, ಸುಧಾಕರ್ ಕಾಣಿಸಿಕೊಂಡಿದ್ದಾರೆ.

sri murali- dhruva supports 'Ayyo Rama' Movie

'ಅಯ್ಯೋ ರಾಮ' ಸಿನಿಮಾದ ಮೂಲಕ ದುಡ್ಡಿನ ಮಹತ್ವ ಹಾಗೂ ದುಡ್ಡಿನ ದುರಾಸೆಯಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ಕಾಮಿಡಿಯಾಗಿ ಪ್ರೇಕ್ಷಕರ ಮುಂದೆ ಪ್ರಸೆಂಟ್ ಮಾಡಲಿದ್ದಾರೆ ನಿರ್ದೇಶಕರು. ಸೆನ್ಸಾರ್ ಬಾಗಿಲಲ್ಲಿ ಇರೋ 'ಅಯ್ಯೋ ರಾಮ' ಸಿನಿಮಾ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಮುಂದೆ ಬರಲಿದೆ.

English summary
Kannada Actor Srimurali and Dhruva Sarja supports 'Ayyo Rama' Movie. ನಟ ಪ್ರದೀಪ್ ಅಭಿನಯದ ಅಯ್ಯೋ ರಾಮ ಸಿನಿಮಾದ ಪೋಸ್ಟರ್ ಅನ್ನ ರೋರಿಂಗ್ ಸ್ಟಾರ್ ಶ್ರೀ ಮುರಳಿ ಬಿಡುಗಡೆ ಮಾಡಿದ್ದಾರೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada