»   » 'ಉಗ್ರಂ' ಬಳಿಕ ಸದ್ದಿಲ್ಲದೆ ತೆರೆಗೆ ಬರುತ್ತಿದೆ ಶ್ರೀಮುರಳಿ ಚಿತ್ರ

'ಉಗ್ರಂ' ಬಳಿಕ ಸದ್ದಿಲ್ಲದೆ ತೆರೆಗೆ ಬರುತ್ತಿದೆ ಶ್ರೀಮುರಳಿ ಚಿತ್ರ

By: ಉದಯರವಿ
Subscribe to Filmibeat Kannada

'ಉಗ್ರಂ' ಚಿತ್ರದ ಬಳಿಕ ಆಕ್ಷನ್ ಸ್ಟಾರ್ ಶ್ರೀಮುರಳಿ ಅವರು ಯಾವ ಚಿತ್ರ ಮಾಡುತ್ತಾರೆ, ಉಗ್ರಂ ಚಿತ್ರದ ಮುಂದುವರಿದ ಭಾಗ ಕೈಗೆತ್ತಿಕೊಳ್ಳುತ್ತಾರಾ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಂತೆ 'ಮುರಾರಿ' ಚಿತ್ರ ಬಿಡುಗಡೆಯಾಗುತ್ತಿದೆ.

ಈ ಚಿತ್ರ ಸೆಟ್ಟೇರಿ ವರ್ಷಗಳೇ ಉರುಳಿ ಹೋಗಿವೆ. ಎಚ್ ವಾಸು ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಇದೇ ಜುಲೈ 25ಕ್ಕೆ ಬಿಡುಗಡೆಯಾಗುತ್ತಿದೆ. ಲಕ್ಷ್ಮಿಕಾಂತ್ ಮೂವೀಸ್ ಲಾಂಛನದಲ್ಲಿ ಆರ್ ಎಸ್ ಗೌಡ ಅರ್ಪಿಸುತ್ತಿರುವ ಚಿತ್ರ ಇದು. ಈ ಚಿತ್ರವನ್ನು ಹೆಚ್ ಕುಮಾರ್ ಗೌಡ, ಹೆಚ್ ವಾಸು ಹಾಗೂ ಆರ್ ಎಸ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ['ಉಗ್ರಂ ವೀರಂ'ಗೆ ಶ್ರೀಕಾರ ಹಾಕಿದ ಶ್ರೀಮುರಳಿ]

Sri Murali

ವಿ ಮನೋಹರ್ ಅವರ ಸಂಗೀತ, ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಆಸಿಡ್ ದಾಳಿ ಕುರಿತ ಕಥೆ ಇದಾಗಿದ್ದು, ಭೂಗತ ಜಗತ್ತಿನ ನೆರಳೂ ಚಿತ್ರದಲ್ಲಿರುತ್ತದೆ ಎನ್ನುತ್ತವೆ ಮೂಲಗಳು.

ಐದು ಫೈಟು, ಆರು ಹಾಡು, ಇಬ್ಬರು ನಾಯಕಿಯರು- ರಶ್ಮಿ, ಮಾಧುರಿ. ಮೊದಲರ್ಧಕ್ಕೂ ಎರಡನೇ ಅರ್ಧಕ್ಕೂ ಚೇಂಜ್ ಓವರ್ ಇರುತ್ತದಂತೆ. ಮೊದಲರ್ಧ ನಾಡು, ಎರಡನೇ ಅರ್ಧ ಕಾಡು. ಅಲ್ಲೊಂದು ಗ್ರಾಫಿಕ್ ಹೆಬ್ಬಾವು. ಅದರ ಜೊತೆ ರಶ್ಮಿ ಕಾದಾಟ ಇತ್ಯಾದಿ. ಪ್ರೀತಿಯನ್ನು ಪ್ರೀತಿಯಿಂದ ಗೆಲ್ಲಬೇಕು ಎಂಬುದು ಚಿತ್ರದ ಸಂದೇಶ.

'ಉಗ್ರಂ'ಗೂ ಮೊದಲೇ ಒಪ್ಪಿಕೊಂಡಿದ್ದ ಚಿತ್ರ ಇದಾಗಿದ್ದು ಇದೀಗ 'ಉಗ್ರಂ' ಅಲೆಯಲ್ಲಿ ಇದನ್ನೂ ತೇಲಿ ಬಿಡಲಾಗುತ್ತಿದೆ. ಆ ಅಲೆಯಲ್ಲಿ 'ಮುರಾರಿ' ಏನಾಗುತ್ತದೋ ಎಂಬ ಕುತೂಹಲ ಇದ್ದೇ ಇದೆ.

English summary
After 'Ugramm' grand success Action Star Sri Murali's one more action movie 'Murari' ready for release on 25th July, 2014. The essence of the film is 'Preethiyannu Preethiyinda Gellabeku'.
Please Wait while comments are loading...