»   » 'ಪರಮಾತ್ಮ' ಆಯ್ತು ಈಗ 'ಪರಬ್ರಹ್ಮ' ಚಿತ್ರದ ಜಪ

'ಪರಮಾತ್ಮ' ಆಯ್ತು ಈಗ 'ಪರಬ್ರಹ್ಮ' ಚಿತ್ರದ ಜಪ

Posted By:
Subscribe to Filmibeat Kannada
ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದ 'ಪರಮಾತ್ಮ' ಚಿತ್ರ ನೆನಪಿಸುವಂತಹ ಮತ್ತೊಂದು ಚಿತ್ರ ಸೆಟ್ಟೇರಿದೆ. ಆದರೆ ಈ ಚಿತ್ರಕ್ಕೆ ಭಟ್ಟರು ಆಕ್ಷನ್ ಕಟ್ ಹೇಳುತ್ತಿಲ್ಲ. ಓಂ ಮಹೇಶ್ವರ್ ಎಂಬುವವರು ನಿರ್ದೇಶಿಸುತ್ತಿರುವ ಚಿತ್ರ. ಆದರೆ ಚಿತ್ರದ ಹೆಸರು 'ಪರಬ್ರಹ್ಮ'.

ಚಿತ್ರದ ನಾಯಕ 'ಚಂದ್ರ ಚಕೋರಿ' ಚಿತ್ರದಿಂದ ಮನೆಮಾತಾದ ನಟ ಶ್ರೀಮುರಳಿ. ಸತತ ಸೋಲುಗಳಿಂದ ಕಂಗೆಟ್ಟಿರುವ ಅವರು ಇತ್ತೀಚೆಗೆ ಅವರು ಹಲವಾರು ವಿಭಿನ್ನ ಚಿತ್ರಗಳನ್ನು ಒಪ್ಪಿಕೊಂಡಿರುವುದು ಗೊತ್ತೇ ಇದೆ. ಅವುಗಳಲ್ಲಿ 'ಲೂಸುಗಳು' ಚಿತ್ರವೂ ಒಂದು.

ಶಂಭು, ಗೋಪಿ, ಮಿಂಚಿನ ಓಟ, ಶಿವಮಣಿ, ಯಜ್ಞ, ಶ್ರೀಹರಿಕಥೆ ಚಿತ್ರಗಳು ಬಾಕ್ಸಾಫೀಸಲ್ಲಿ ನಿರಾಸೆ ಮೂಡಿಸಿದ್ದವು. ಈಗವರು 'ಪರಬ್ರಹ್ಮ' ಚಿತ್ರಕ್ಕೆ ಹಲವು ರೀತಿಯಲ್ಲಿ ತಯಾರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಈ ಚಿತ್ರ ಮತ್ತೊಂದು ತಿರುವು ನೀಡಲಿದೆ ಎಂಬ ನಿರೀಕ್ಷೆ ಅವರದು.

ಏನಿದು 'ಪರಬ್ರಹ್ಮ' ಎಂಬ ಬಗ್ಗೆ ಕುತೂಹಲ ಸಹಜ. ಇದೊಂದು ಸಾಹಸ ಹಾಗೂ ಸೆಂಟಿಮೆಂಟ್ ಪ್ರಧಾನ ಚಿತ್ರವಂತೆ. ಫ್ರೆಂಡ್ಸ್ ಸಿನಿ ಕ್ರಿಯೇಷನ್ಸ್ ಲಾಂಛನದ ಚಿತ್ರಕ್ಕೆ ಸುಂದರ್ ಪಾಟೀಲ್ ಹಾಗೂ ಉದಯ ಚಂದ್ರ ನಿರ್ಮಾಪಕರು.

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ, ಕೃಷ್ಣ ಸಾರಥಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು ಹಾಗೂ ರವಿವರ್ಮ ಅವರ ಮೈನವಿರೇಳಿಸುವ ಸಾಹಸಗಳು ಚಿತ್ರದಲ್ಲಿರುತ್ತವೆ.

ಶ್ರೀಮುರಳಿ ಅವರಿಗೆ ನಾಯಕಿಯಾಗಿ ಆಕಾಂಕ್ಷಾ ಅವರು ಆಯ್ಕೆಯಾಗಿದ್ದಾರೆ. ಪಾರ್ವತಿ ನಾಯರ್, ಗುರುರಾಜ್ ಹೊಸಕೋಟೆ, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ, ಕಿಲ್ಲರ್ ವೆಂಕಟೇಶ್, ಶೀಲ ಪ್ರಸಾದ್ ಮುಂತಾದವರ ತಾರಾಗಣ ಚಿತ್ರಕ್ಕಿದೆ. (ಏಜೆನ್ಸೀಸ್)

English summary
Chandra Chakori fame Kannada actor new film titled as Parabrahma by new director Om Maheshwar. Akanksha Poojari hails from Mumbai and native of Mangalore is heroine of the film. Raaga Brahma Hamsalekha scores the music.
Please Wait while comments are loading...