»   » ಭರ್ಜರಿಯಾಗಿ ತೆರೆಗೆ ಬರಲಿದೆ ಶ್ರೀಮುರಳಿ 'ಮಫ್ತಿ' ಸಿನಿಮಾ

ಭರ್ಜರಿಯಾಗಿ ತೆರೆಗೆ ಬರಲಿದೆ ಶ್ರೀಮುರಳಿ 'ಮಫ್ತಿ' ಸಿನಿಮಾ

Posted By:
Subscribe to Filmibeat Kannada

ವರ್ಷದ ಬಹುನಿರೀಕ್ಷೆಯ ಸಿನಿಮಾ 'ಮಫ್ತಿ' ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿರುವ ಚಿತ್ರತಂಡ 'ಮಫ್ತಿ' ಸಿನಿಮಾವನ್ನ ಅದ್ಧೂರಿಯಾಗಿ ರಿಲೀಸ್ ಮಾಡೋದಕ್ಕೆ ನಿರ್ಮಾಪಕ 'ಜಯಣ್ಣ ಮತ್ತು ಭೋಗೇಂದ್ರ' ತಯಾರಿ ಮಾಡಿಕೊಂಡಿದ್ದಾರೆ.

'ಶಿವರಾಜ್ ಕುಮಾರ್' ಮತ್ತು 'ಶ್ರೀ ಮುರಳಿ' ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರುವ 'ಮಫ್ತಿ' ಸಿನಿಮಾವನ್ನ ಬರೋಬ್ಬರಿ 400 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ಎರಡು ವಾರಗಳಿಂದ ದೊಡ್ಡ ಸ್ಟಾರ್ ಗಳ ಸಿನಿಮಾ ಯಾವುದು ರಿಲೀಸ್ ಆಗದೇ ಇರೋದು 'ಮಫ್ತಿ' ಸಿನಿಮಾ ಟೀಂ ಗೆ ಭರ್ಜರಿ ಆಫರ್ ಸಿಕ್ಕಿದಂತೆ ಆಗಿದೆ.

 sri Murali's Mafthi movie to release in 400 theaters

ರಾಜ್ಯದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಮಫ್ತಿ' ತೆರೆ ಕಾಣಲಿದ್ದು ಅಕ್ಕ-ಪಕ್ಕದ ರಾಜ್ಯದ ಕೆಲ ಥಿಯೇಟರ್ ನಲ್ಲಿ 'ಮಫ್ತಿ' ಸಿನಿಮಾ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಪರಭಾಷಾ ಸಿನಿಮಾಗಳ ಸೆಂಟರ್ ನಲ್ಲಿ 'ಮಫ್ತಿ' ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಜೊತೆಯಾಗಿ ಸ್ಕ್ರೀನ್ ಶೇರ್ ಮಾಡಿದ್ದು, 'ಶಾನ್ವಿ' ಸಿನಿಮಾಗೆ ನಾಯಕಿ. ಪ್ರಮುಖ ಪಾತ್ರದಲ್ಲಿ 'ವಶಿಷ್ಠ ಎನ್ ಸಿಂಹ' ಹಾಗೂ 'ಛಾಯಾಸಿಂಗ್' ಕಾಣಿಸಿಕೊಂಡಿರೋದು ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದೆ.

English summary
Srimurali starrer 'Mufti' to release in 400 theaters. ನಾಲ್ಕು ನೂರು ಚಿತ್ರಮಂದಿರಗಳಲ್ಲಿ ತೆರೆಗೆ ಬರೋದಕ್ಕೆ ಸಿದ್ದವಾಗಿದೆ ಶ್ರೀ ಮುರಳಿ ಅಭಿನಯದ ಮಫ್ತಿ ಸಿನಿಮಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada