Don't Miss!
- News
ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿಎಸ್ ಯಡಿಯೂರಪ್ಪ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್‌ನಲ್ಲಿ ಬಿಡುಗಡೆ ಸಿದ್ಧವಾದ ಶ್ರೀಮುರಳಿ 'ಮದಗಜ'
ರೋರಿಂಗ್ ಸ್ಟಾರ್ ಶ್ರೀಮರಳಿ ನಟನೆಯ ಬಹುನಿರೀಕ್ಷೆಯ ಮದಗಜ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಮದಗಜ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಮದಗಜ ತಂಡ ನಿರತವಾಗಿದೆ.
ಆಯೋಗ್ಯ ಖ್ಯಾತಿಯ ಮಹೇಶ್ ಸಾರಥ್ಯದಲ್ಲಿ ಮದಗಜ ಸಿನಿಮಾ ಮೂಡಿಬರುತ್ತಿದೆ. ಮೊದಲ ಸಿನಿಮಾದ ಸಕ್ಸಸ್‌ನ ಖುಷಿಯಲ್ಲಿರುವ ಮಹೇಶ್ ಮದಗಜ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಥ್ರಿಲಿಂಗ್ ಮಾಹಿತಿ ಎಂದರೆ ಮದಗಜ ಸಿನಿಮಾವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೆ ಮಾಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಚಿತ್ರತಂಡ ಈ ಬಗ್ಗೆ ಮಾತುಕತೆ ನಡೆಸಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆ ಟಾರ್ಗೆಟ್ ಇಟ್ಟಿದ್ದಾರೆ ಎನ್ನಲಾಗಿದೆ. ಟಾರ್ಗೆಟ್ ಪ್ರಕಾರ ಕೆಲಸ ಸಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಮೊದಲು ಮದಗಜ ಚಿತ್ರತಂಡ ಆಗಸ್ಟ್ ನಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾದ ಚಿತ್ರೀಕರಣ ತಡವಾಗಿ ಮುಕ್ತಾಯವಾಗಿದೆ. ಹಾಗಾಗಿ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ ಸಿನಿಮಾತಂಡ.
ಅಂದಹಾಗೆ ಚಿತ್ರದಿಂದ ಪೋಸ್ಟರ್ ಮತ್ತು ಪುಟ್ಟ ಟೀಸರ್ ಬಿಟ್ಟರೆ ಸಿನಿಮಾದಿಂದ ಇನ್ನೇನು ಬಿಡುಗಡೆಯಾಗಿಲ್ಲ. ಹಾಗಾಗಿ ಚಿತ್ರದಿಂದ ಟ್ರೈಲರ್ ಅಥವಾ ಹಾಡಿನ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಅಭಿಮಾನಿಗಳ ನಿರೀಕ್ಷೆಯಂತೆ ಸಿನಿಮಾತಂಡ ಸದ್ಯದಲ್ಲೇ ಮೊದಲ ಹಾಡನ್ನು ಬಿಡುಗಡೆ ಮಾಡುವ ತಯಾರಿ ನಡೆಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸದ್ಯದಲ್ಲೇ ಮೊದಲ ಹಾಡಿನ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ನೀಡುವ ಪ್ಲಾನ್ ಮಾಡಿದೆ ಮದಗಜ ತಂಡ. ಅಂದಹಾಗೆ ಮದಗಜ ಸಿನಿಮಾ ಉಮಾಪತಿ ಫಿಲಂಸ್ ನಲ್ಲಿ ಮೂಡಿಬಂದಿದೆ. ರಾಬರ್ಟ್ ಬಿಡುಗಡೆ ಬಳಿಕ ಉಮಾಪತಿ ಮತ್ತೊಂದು ದೊಡ್ಡ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ.
ಮದಗಜ ಚಿತ್ರದಲ್ಲಿ ನಟ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಶಿಕಾ ಶ್ರೀಮುರಳಿ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಆಶಿಕಾ ಅವರ ಎರಡು ಲುಕ್ ಬಿಡುಗಡೆಯಾಗಿದೆ. ಆಶಿಕಾ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲು ಬಿಡುಗಡೆಯಾಗಿದ್ದ ಪೋಸ್ಟರ್ ನಲ್ಲಿ ಆಶಿಕಾ ಪಕ್ಕ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಸಿಗರೇಟು ಸೇಯುತ್ತಾ ಖದರ್ ಲುಕ್ ನಲ್ಲಿ ಆಶಿಕಾ ಅಭಿಮಾನಿಗಳ ಮುಂದೆ ಬಂದಿದ್ದರು.
ಇನ್ನು ಮದಗಜ ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ದಕ್ಷಿಣ ಭಾರತದ ಖ್ಯಾತ ವಿಲನ್ ಎನಿಸಿಕೊಂಡಿರುವ ಜಗಪತಿ ಬಾಬು ಎಂಟ್ರಿ ಈ ಚಿತ್ರಕ್ಕೆ ಮತ್ತಷ್ಟು ಧಮ್ ಹೆಚ್ಚಿಸಿದೆ. ಈಗಾಗಲೇ ಜಗಪತಿ ಬಾಬು ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಟೀಸರ್ ಸಹ ರಿಲೀಸ್ ಆಗಿದ್ದು, ಥ್ರಿಲ್ ಹೆಚ್ಚಿಸಿದೆ.
ವಿಶೇಷ ಅಂದ್ರೆ ಸುಮಾರು 20 ವರ್ಷದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ 'ಮದಗಜ' ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ದೇವಯಾನಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. 1999ರಲ್ಲಿ ಡಾ ವಿಷ್ಣುವರ್ಧನ್ ಅಭಿಯಿಸಿದ್ದ 'ಪ್ರೇಮೋತ್ಸವ' ಚಿತ್ರದಲ್ಲಿ ದೇವಯಾನಿ ಅಭಿನಯಿಸಿದ್ದರು. ಅದಾದ ಮೇಲೆ ಮದಗಜ ಚಿತ್ರಕ್ಕೆ ಎಂಟ್ರಿಯಾಗಿದ್ದಾರೆ.
ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ. ಅದಾಗಲೇ ಮೂರು ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು, ಸೌತ್ ಇಂಡಿಯಾದಲ್ಲಿ ಸದ್ದು ಮಾಡ್ತಿದೆ.