For Quick Alerts
  ALLOW NOTIFICATIONS  
  For Daily Alerts

  ತಮಿಳು 'ಸ್ಟಾರ್' ನಟನ ಮೇಲೆ ಶ್ರೀರೆಡ್ಡಿ ಎನ್ ಕೌಂಟರ್.!

  By Bharath Kumar
  |

  ತಮಿಳಿನ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಅವರ ವಿರುದ್ಧ ಗಂಭೀರ ಆರೋಪ ಮಾಡಿ ಸುದ್ದಿಯಾಗಿದ್ದ ಶ್ರೀರೆಡ್ಡಿ ಈಗ ಮತ್ತೊಬ್ಬ ತಮಿಳು ನಟನ ಮೇಲೆ ಬಾಂಬ್ ಸಿಡಿಸಿದ್ದಾರೆ.

  ತಮಿಳು ನಟ ಶ್ರೀಕಾಂತ್ ಅವರು ನನಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ನನಗೆ ವಂಚಿಸಿದ್ದಾರೆ ಎಂದು ನಟಿ ಶ್ರೀರೆಡ್ಡಿ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

  ನಟ ಶ್ರೀಕಾಂತ್ ಅವರ ಫೋಟೋ ಅಪ್ ಲೌಡ್ ಮಾಡಿರುವ ನಟಿ ''ಬಹುಶಃ ಐದು ವರ್ಷಗಳ ಹಿಂದೆ, ಹೈದ್ರಾಬಾದ್ ನ ಪಾರ್ಕ್ ಹೋಟೆಲ್ ನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಾರ್ಟಿ ನಿಮಗೆ ನೆನಪಿರಬಹುದು. ನಾನು ನೀವು ಒಟ್ಟಿಗೆ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡುವಾಗ ನೀನು ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ನಿಮಗೆ ನೆನಪಿರಬಹುದು.?'' ಎಂದು ಬರೆದುಕೊಂಡಿದ್ದಾರೆ.

  ಎ.ಆರ್ ಮುರುಗದಾಸ್ ವಿರುದ್ಧ ಬಾಂಬ್ ಸಿಡಿಸಿದ ಶ್ರೀರೆಡ್ಡಿಎ.ಆರ್ ಮುರುಗದಾಸ್ ವಿರುದ್ಧ ಬಾಂಬ್ ಸಿಡಿಸಿದ ಶ್ರೀರೆಡ್ಡಿ

  ಇದಕ್ಕೂ ಮುಂಚೆ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಬಗ್ಗೆ ಕಾಮೆಂಟ್ ಮಾಡಿದ್ದ ಶ್ರೀರೆಡ್ಡಿ''ಹಾಯ್ ತಮಿಳು ಡೈರೆಕ್ಟರ್ ಮುರುಗದಾಸ್ ಜೀ....ಹೇಗಿದ್ದೀರಾ.? ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ.? ವೇಲಗೊಂಡ ಶ್ರೀನಿವಾಸ್ ಅವರ ಮುಖಾಂತರ ನಾವು ಭೇಟಿ ಮಾಡಿದ್ದೇವು. ನೀವು ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ಆದ್ರೆ, ನಮ್ಮಿಬ್ಬರ ಮಧ್ಯೆ ಜಾಸ್ತಿ.........ಇದುವರೆಗೂ ನೀವು ನನಗೆ ಯಾವುದೇ ಆಫರ್ ಮಾಡಲಿಲ್ಲ.'' ಎಂದು ಸ್ಟೇಟಸ್ ಹಾಕಿಕೊಂಡಿದ್ದರು.

  ಇನ್ನು ನಟ ಶ್ರೀಕಾಂತ್ ಅವರ ಬಗ್ಗೆ ಹೇಳುವುದಾದರೇ 2002 ರಲ್ಲಿ 'ರೋಜಾ ಕೂಟಂ' ಚಿತ್ರದ ಮೂಲಕ ಪ್ರವೇಶ ಮಾಡಿದ ಶ್ರೀಕಾಂತ್ 'ಏಪ್ರಿಲ್ ಮಾದತಲ್', ಭೋಸ್, ತೆಲುಗಿನ 'ಒಕರಿಕಿ ಒಕ್ಕರು', 'ಓಂ ಶಾಂತಿ ಓಂ' ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Actress Sri Reddy, who created a storm in the Telugu film industry by speaking up against casting couch and pointing at some big names, has now named director AR Murugadoss and Tamil actor Srikanth from the Tamil film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X