For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿ

  By Bharath Kumar
  |

  'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಸಂಚಲನ ಸೃಷ್ಟಿಸಿರುವ ಶ್ರೀರೆಡ್ಡಿಯ ಹೈಡ್ರಾಮಾಗೆ ಈಗ ದೊಡ್ಡ ತಿರುವು ಸಿಕ್ಕಿದೆ. ಪವನ್ ಕಲ್ಯಾಣ್ ವಿರುದ್ಧ ಕಿಡಿಕಾರುತ್ತಿದ್ದ ಶ್ರೀರೆಡ್ಡಿ ಕೊನೆಗೆ ಉಲ್ಟಾ ಹೊಡೆದಿದ್ದಾರೆ.

  ತೆಲುಗು ಇಂಡಸ್ಟ್ರಿಯಲ್ಲಿ ಯುವತಿಯರಿಗೆ ಮೋಸ ಆಗುತ್ತಿದೆ. ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ ಎಂದು ನಟಿ ಶ್ರೀರೆಡ್ಡಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪವನ್ ಕಲ್ಯಾಣ್ ನಟಿಯರಿಗೆ ಅನ್ಯಾಯವಾಗುತ್ತಿದೆ ಅಂದ್ರೆ, ಪ್ರತಿಭಟನೆ ಮಾಡುವ ಬದಲು ಪೊಲೀಸರಿಗೆ ದೂರು ನೀಡಿ ಎಂದಿದ್ದರು.

  ಈ ಹೇಳಿಕೆ ನೀಡುತ್ತಿದ್ದಂತೆ ಪ್ರತಿಭಟನೆ ಮಾಡುತ್ತಿದ್ದ ಕೆಲವು ನಟಿಯರು ಪವನ್ ಕಲ್ಯಾಣ್ ಕೂಡ ಕೆಟ್ಟವರೇ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನ ನೀಡಿ ಅಚ್ಚರಿ ಉಂಟು ಮಾಡಿದ್ದರು. ಅಷ್ಟೇ ಅಲ್ಲದೇ, ಪವನ್ ಕಲ್ಯಾಣ್ ವೈಯಕ್ತಿಕ ವಿಚಾರಗಳ ಬಗ್ಗೆ ಕಾಮೆಂಟ್ ಮೆಗಾಫ್ಯಾಮಿಲಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಆದ್ರೀಗ, ದಿಢೀರ್ ಅಂತ ಶ್ರೀರೆಡ್ಡಿ ಉಲ್ಟಾ ಹೊಡೆದಿದ್ದಾರೆ. ಮುಂದೆ ಓದಿ....

  ನಿಮ್ಮ ಶತ್ರುಗಳು ಹೀಗೆ ಮಾಡಿಸಿದ್ರು.

  ನಿಮ್ಮ ಶತ್ರುಗಳು ಹೀಗೆ ಮಾಡಿಸಿದ್ರು.

  ''ಪವನ್ ಕಲ್ಯಾಣ್ ಹಾಗೂ ಅವರ ತಾಯಿಯ ಬಗ್ಗೆ ನಾನು ನೀಡಿದ್ದ ಹೇಳಿಕೆಗಳಿಗೆ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ. ಅನಾವಶ್ಯಕವಾಗಿ ಅನೇಕರಿಂದ ನಾನು ನಿಂದನೆಗೆ ಒಳಗಾಗಿದ್ದೇನೆ. ನಾನು ಹೀಗೆ ಮಾಡಲು ನಿಮ್ಮ ಶತ್ರುಗಳು ನನಗೆ ಪ್ರಚೋದನೆ ನೀಡಿದರು. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವಳಲ್ಲ. ನೀವು ಮತ್ತು ನಿಮ್ಮ ಅಭಿಮಾನಿಗಳು ಈ ಬಗ್ಗೆ ಗಮನಿಸಬೇಕು. ಟ್ರೋಲ್ ಮಾಡುತ್ತಿರುವುದನ್ನ ನಾನು ಎದುರಿಸುತ್ತೇನೆ. ಯಾಕಂದ್ರೆ, ಅದು ನಾನು ಮಾಡಿದ ತಪ್ಪು'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಕಾನೂನಾತ್ಮಕವಾಗಿಯೇ ಹೋರಾಡುತ್ತೇನೆ

  ಕಾನೂನಾತ್ಮಕವಾಗಿಯೇ ಹೋರಾಡುತ್ತೇನೆ

  ಪವನ್ ಕಲ್ಯಾಣ್ ಅವರು ಹೇಳಿದಂತೆ ನಾನು ಇನ್ಮುಂದೆ ಕಾನೂನಾತ್ಮಕವಾಗಿ ಹೋರಾಡುತ್ತೇನೆ. ಪವನ್ ಅವರ ಮಾತಿಗೆ ಬೆಲೆ ನೀಡುತ್ತೇನೆ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಹೋರಾಟ ಹೀಗೆ ಇರುತ್ತೆ. ನಾನು ತೆಲುಗು ಇಂಡಸ್ಟ್ರಿಯಲ್ಲಿರುವ ಈ ಸಮಸ್ಯೆ ಬಗ್ಗೆ ನಾನು ಫೈಟ್ ಮಾಡ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

  ಜೀವಿತಾ ಮೇಡಂ ಥ್ಯಾಂಕ್ ಯೂ

  ಜೀವಿತಾ ಮೇಡಂ ಥ್ಯಾಂಕ್ ಯೂ

  ಜೀವಿತಾ ರಾಜಶೇಖರ್ ಅವರ ವಿರುದ್ಧ ಕೂಡ ಕೆಲವು ಗಂಭೀರ ಆರೋಪಗಳನ್ನ ಮಾಡಿದ್ದರು. ಇದೀಗ, ನನ್ನ ಬಳಿ ಎಲ್ಲ ಸಾಕ್ಷಿಯೂ ಇದೆ. ಈ ವಿಷ್ಯಕ್ಕೆ ಸಂಬಂಧಪಟ್ಟಂತೆ ಜೀವಿತಾ ಅವರ ಮೇಲಿನ ಆರೋಪಕ್ಕೆ ಕಾನೂನಾತ್ಮಕವಾಗಿಯೇ ಹೋರಾಡುತ್ತೇನೆ'' ಎಂದು ಶ್ರೀರೆಡ್ಡಿ ಟ್ವೀಟ್ ಮಾಡಿದ್ದಾರೆ.

  ಗಾಯಿತ್ರಿ ಗುಪ್ತಾ ಬಗ್ಗೆಯೂ ಟ್ವೀಟ್

  ಗಾಯಿತ್ರಿ ಗುಪ್ತಾ ಬಗ್ಗೆಯೂ ಟ್ವೀಟ್

  ಸುರೇಶ್ ಬಾಬು ಅಭಿರಾಮ್ ಅವರ ಜೊತೆಯಲ್ಲಿ ನಾನು ಆಟವಾಡಿದ್ದೇನೆ ಎಂದು ಗಾಯಿತ್ರಿ ಗುಪ್ತಾ ಹೇಳಿದ್ದಾರೆ. ಸೋ, ಅದರ ಸತ್ಯಕತೆಯನ್ನ ನಾನು ಮಾಧ್ಯಮದವರ ಮುಂದೆಯೆ ಹೇಳುತ್ತೇನೆ. ಮತ್ತು ಗಾಯಿತ್ರಿ ಗುಪ್ತಾ ಅವರ ಬಗ್ಗೆಯೂ ಗೊತ್ತಿಲ್ಲದ ವಿಚಾರಗಳನ್ನ ಕೂಡ ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

  ಹಲವು ಅನುಮಾನಗಳಿಗೆ ಕಾರಣ

  ಹಲವು ಅನುಮಾನಗಳಿಗೆ ಕಾರಣ

  ಪವನ್ ಕಲ್ಯಾಣ್ ಅವರ ವಿರುದ್ಧ ಮಾಡಿದ್ದ ಆರೋಪವನ್ನ ಹಿಂತೆಗೆದುಕೊಂಡಿರುವ ಶ್ರೀರೆಡ್ಡಿ, ಕೆಲವರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಶ್ರೀರೆಡ್ಡಿ ಹೋರಾಟ ಹೇಗಿರುತ್ತೆ ಎಂಬುದು ಕಾದುನೋಡಬೇಕಿದೆ.

  English summary
  Actress Sri Reddy says sorry to Pawan Kalyan and his mother. When she was trolled by the social media users and Pawan Kalyan’s fans, Sri Reddy apologized to Pawan Kalyan’s mother because the swear word is normally used to abuse one’s mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X