»   » ನಟಿಗೆ ಬೆಂಬಲ ನೀಡಲು ಹೋಗಿ ವಿವಾದಾತ್ಮಕ ಟ್ವೀಟ್ ಮಾಡಿದ ವರ್ಮಾ.!

ನಟಿಗೆ ಬೆಂಬಲ ನೀಡಲು ಹೋಗಿ ವಿವಾದಾತ್ಮಕ ಟ್ವೀಟ್ ಮಾಡಿದ ವರ್ಮಾ.!

Posted By:
Subscribe to Filmibeat Kannada

ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಂಚಲನ ಸೃಷ್ಟಿಸುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಈಗ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಟ್ವೀಟ್ ಮಾಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ಟಾಲಿವುಡ್ ಇಂಡಸ್ಟ್ರಿಯಲ್ಲಿರುವ 'ಕಾಸ್ಟಿಂಗ್ ಕೌಚ್' ವಿರುದ್ಧ ನಟಿ ಶ್ರೀರೆಡ್ಡಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಟಿಗೆ ಸಂಪೂರ್ಣ ಬೆಂಬಲ ಸೂಚಿಸಿರುವ ರಾಮ್ ಗೋಪಾಲ್ ವರ್ಮಾ, ಈ ನಟಿ ಬಗ್ಗೆ ಮತ್ತು ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ, ಇಂತಹದ್ದೇ ಮೆಚ್ಚುಗೆ ವ್ಯಕ್ತಪಡಿಸುವ ಭರಾಟೆಯಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿ ಕೆಲವರು ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅಷ್ಟಕ್ಕೂ, ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ನಲ್ಲಿ ಏನಿದೆ.? ಮುಂದೆ ಓದಿ.....

ಶ್ರೀರೆಡ್ಡಿಯನ್ನ ಅಶೋಕನಿಗೆ ಹೋಲಿಸಿದ ವರ್ಮಾ

ಚಕ್ರವರ್ತಿ ಅಶೋಕನಿಗೆ ತೆಲುಗು ನಟಿ ಶ್ರೀರೆಡ್ಡಿಯನ್ನ ಹೋಲಿಸಿದ್ದಾರೆ ರಾಮ್ ಗೋಪಾಲ್ ವರ್ಮಾ. 'ಅಶೋಕನಂತೆ ಶ್ರೀರೆಡ್ಡಿ ಕೂಡ ಗ್ರೇಟ್' ಎಂದಿರುವ ವರ್ಮಾ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆರ್.ಜಿ.ವಿಯ ಟ್ವೀಟ್ ನಲ್ಲಿ ಏನಿದೆ.?

''ನಟಿ ಶ್ರೀರೆಡ್ಡಿಯ ಪ್ರತಿಭಟನೆಯನ್ನ ಕೆಲವರು ಖಂಡಿಸುತ್ತಿದ್ದಾರೆ. ಈ ಹಿಂದೆ ಶ್ರೀರೆಡ್ಡಿ ಮಾತನಾಡಿರುವ ಕೆಟ್ಟ ಭಾಷೆ ಇರಬಹುದು ಅಥವಾ ಆಕೆ ಬಳಸಿರುವ ಅವಾಚ್ಯ ಶಬ್ದಗಳಿಂದ ಬೇಸರಗೊಂಡು ವಿರೋಧ ಮಾಡ್ತಿದ್ದಾರೆ. ಆದ್ರೆ, ನೆನಪಿರಲಿ, ಕ್ರೂರಿಯಾಗಿದ್ದ ಸಾಮ್ರಾಟ್ ಅಶೋಕ ಕೂಡ ಬದಲಾದ ನಂತರವೇ ಗ್ರೇಟ್ ಆಗಿದ್ದು'' ಎಂದಿದ್ದಾರೆ.

ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!

ಶ್ರೀರೆಡ್ಡಿ ಗ್ರೇಟ್

''ಸಾಮ್ರಾಟ್ ಅಶೋಕ ಯುದ್ಧದಲ್ಲಿ ಮೊದಲು ಅನೇಕ ಜನರನ್ನ ಕೊಂದರು. ಅವರ ಹೃದಯದಲ್ಲಿ ಬದಲಾವಣೆ ಮೂಡಿದ ಬಳಿಕವೇ ಲಕ್ಷಾಂತರ ಜನರಿಗೆ ಸಂರಕ್ಷನಾಗಿದ್ದು. ಹೀಗೆ, ಯೋಚಿಸಿದರೇ, ನಟಿ ಶ್ರೀರೆಡ್ಡಿ ಕೂಡ ಸಾಮ್ರಾಟ್ ಅಶೋಕ ಅವರಂತೆ ಗ್ರೇಟ್'' ಎಂದು ಬಣ್ಣಿಸಿದ್ದಾರೆ.

ಶ್ರೀರೆಡ್ಡಿಯನ್ನ ಎದುರಿಸಲು ಭಯ ಪಡ್ತಿದ್ದಾರೆ

''ಇಂಡಸ್ಟ್ರಿಯಲ್ಲಿರುವ ಪುರುಷರು ಶ್ರೀರೆಡ್ಡಿಯ ಪ್ರಮಾಣಿಕತೆಯನ್ನ ಎದುರಿಸಲು ಎದುರುತ್ತಿದ್ದಾರೆ. ಹೀಗಿರುವಾಗ, ಶ್ರೀರೆಡ್ಡಿಗೆ ಸಿಗುತ್ತಿರುವ ಖ್ಯಾತಿಯಿಂದ ಅಸೂಯೆಗೊಂಡ ಕೆಲ ಮಹಿಳೆಯರು ನಟಿಯನ್ನ ಖಂಡಿಸುತ್ತಿದ್ದಾರೆ. ಧೈರ್ಯ ಮತ್ತು ಪ್ರಮಾಣಿಕತೆ ಹೊಂದಿರುವ ಮಹಿಳೆಯರು ಮಾತ್ರವೇ ಸ್ತ್ರೀ ಶಕ್ತಿಯನ್ನ ಅನುಸರಿಸುತ್ತಾರೆ'' ಎಂದು ಟ್ವೀಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶ್ರೀರೆಡ್ಡಿ ಮಾಡಿದ ಕೆಲಸಕ್ಕೆ ಸಲ್ಯೂಟ್ ಹೊಡೆದ ರಾಮ್ ಗೋಪಾಲ್ ವರ್ಮಾ

English summary
Controversial filmmaker Ram Gopal Varma took to Twitter on Saturday in support of actor Sri Reddy, who has cast a cloud on Tollywood by alleging rampant practice of the casting couch by many powerful men in the industry. Sri Reddy is as great as Ashoka the Great, says Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X