35 ಫೋಟೋ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ನಟಿ; ಏನಿದೆ ಆ ಫೋಟೋಗಳಲ್ಲಿ.?

By Bharath Kumar

ಶ್ರೀರೆಡ್ಡಿ.....ಈ ಹೆಸರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕಾರಣ, ಕಾಸ್ಟಿಂಗ್ ಕೌಚ್. ತೆಲುಗು ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್' ಸಮಸ್ಯೆ ಇದೆ ಎಂದು ಖಂಡಿಸಿ, ಬೀದಿಗಿಳಿದು, ವಾಣಿಜ್ಯ ಮಂಡಳಿ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದು ಇವರೇ.

ಈ ನಟಿ ಈಗ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಅಭಿರಾಮ್ ದಗ್ಗುಬಾಟಿ ಅವರ ಜೊತೆ ಖಾಸಗಿಯಾಗಿರುವ ಸುಮಾರು 35 ಫೋಟೋಗಳನ್ನ ಬಹಿರಂಗಪಡಿಸುವುದರ ಮೂಲಕ ಮತ್ತೆ ಚರ್ಚೆಯಾಗುತ್ತಿದ್ದಾರೆ.

ತೆಲುಗಿನ ಖ್ಯಾತ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ದಗ್ಗುಬಾಟಿ ಜೊತೆ ತುಂಬಾ ಆತ್ಮೀಯವಾಗಿದ್ದ ಕೆಲ ಫೋಟೋಗಳನ್ನ ಬಿಡುಗಡೆ ಮಾಡಿ ಅಚ್ಚರಿ ಉಂಟು ಮಾಡಿದ್ದರು. ಇದೀಗ, ಎಲ್ಲವೂ ತಣ್ಣಗಾಯಿತು ಎನ್ನುವಾಗಲೇ ಮತ್ತೆ 35 ಫೋಟೋ ರಿಲೀಸ್ ಮಾಡಿದ್ದಾರೆ. ಏನಿದೆ ಆ ಫೋಟೋಗಳಲ್ಲಿ.? ಮುಂದೆ ಓದಿ....

ಪೂರ್ತಿ ಸಿನಿಮಾ ತೋರಿಸಿದ ನಟಿ

ಈ ಹಿಂದೆ ಅಭಿರಾಮ್ ಜೊತೆಗಿನ ಕೆಲವು ಫೋಟೋ ಬಿಟ್ಟು ಬರಿ ಟ್ರೈಲರ್ ತೋರಿಸಿದ್ದ ಶ್ರೀರೆಡ್ಡಿ ಈಗ ಪೂರ್ತಿ ಸಿನಿಮಾನೇ ತೋರಿಸಿದ್ದಾರೆ. ಆಗ ಫೋಟೋ ನೋಡಿದ್ದ ಮಂದಿ ಒಂದೆರೆಡು ಸಲ ಇವರಿಬ್ಬರು ಭೇಟಿಯಾಗಿರಬಹುದು ಎಂದು ಯೋಚಿಸಿದ್ದರು. ಆದ್ರೆ, ಈಗಿನ ಫೋಟೋಗಳನ್ನ ಗಮನಿಸಿದ್ರೆ, ಇವರಿಬ್ಬರ ಸಂಬಂಧ ಹಲವು ದಿನಗಳದ್ದು ಎಂಬ ಅನುಮಾನವಿದೆ.

ಹುಡುಗಿಯರ ಜೀವನ ಹಾಳು ಮಾಡ್ತಾರೆ

'ಹುಡುಗಿಯರ ಜೀವನ ಹಾಳು ಮಾಡುವುದು ಸುಲಭ. ಆದ್ರೆ, ಅವರ ಜೀವನ ಯಶಸ್ಸುಗೊಳಿಸುವುದು ತುಂಬ ಚಾಲೆಂಜ್. ನಿರ್ದೇಶಕರು, ನಿರ್ಮಾಪಕರು ಮತ್ತು ಅವರ ಮಕ್ಕಳು ಸಿನಿಮಾ ಇಂಡಸ್ಟ್ರಿಯಲ್ಲಿರುವ ಹೆಣ್ಣು ಮಕ್ಕಳನ್ನ ವಸ್ತುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಕೆಲವು ಹೀರೋಗಳು ಕೂಡ ಅಷ್ಟೆ. ಸಂಕಷ್ಟದಲ್ಲಿರುವ ನಮ್ಮ ಪರವಾಗಿ ಹೋರಾಟ ಮಾಡಿ. ಹೆಣ್ಣಿ ಸ್ವತಂತ್ರವನ್ನ ಕಾಪಾಡಿ'' ಎಂದು ಅಳಲು ತೋಡಿಕೊಂಡಿದ್ದಾರೆ.

ಎನ್.ಆರ್.ಐ ಮೊರೆ ಹೋದ ನಟಿ

ಎನ್.ಆರ್.ಐ ಮಂದಿ ನಮ್ಮನ್ನ ಕಾಪಾಡಬೇಕಿದೆ. ಭಾರತದಲ್ಲಿ ಯುವತಿಯರ ಸ್ಥಿತಿ ತುಂಬ ಕಷ್ಟಕರವಾಗಿದೆ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಶ್ರೀರೆಡ್ಡಿ ಈಗ ದಿಢೀರ್ ಅಂತ ಮತ್ತೆ ಅಭಿರಾಮ್ ಫೋಟೋಗಳನ್ನ ಹಂಚಿಕೊಂಡಿರುವ ಹಿಂದಿನ ಮರ್ಮವೇನು ಎಂಬುದು ಕುತೂಹಲ ಮೂಡಿಸಿದೆ.

ನನ್ನ ಜೀವನದ ವಿಲನ್

ಅಭಿರಾಮ್ ದಗ್ಗುಬಾಟಿ ಅವರ ಜೊತೆಗಿನ ಫೋಟೋಗಳನ್ನ ಪೋಸ್ಟ್ ಮಾಡಿ ''ನನ್ನ ಜೀವನದ ವಿಲನ್'' ಎಂದು ಅಡಿ ಬರಹ ನೀಡಿದ್ದಾರೆ. ಮತ್ತಷ್ಟು ಫೋಟೋಗಳಿಗೆ ''ಅಭಿ ದಗ್ಗು'' ಎಂದು ಕ್ಯಾಪ್ಷನ್ ನೀಡಲಾಗಿದೆ.

ಸ್ಟುಡಿಯೋದಲ್ಲಿ ಬಳಸಿಕೊಂಡಿರುವ ಆರೋಪ

ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ಸ್ಟುಡಿಯೋದಲ್ಲಿ ನನ್ನನ್ನು ಕರೆಯಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಈ ಹಿಂದೆ ಆರೋಪಿಸಿದ್ದರು. ಈ ಬಗ್ಗೆ ಟಾಲಿವುಡ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು.

More from Filmibeat

English summary
Telugu actress Sri Reddy leaked more photos of Daggubati Abhiram. "Easy to spoil a life, but difficult to built a life, stop destroying women's dreams and future..producers and directors and their sons and relatives are main villains here in the industry they are using girls flesh as their property'' says sri reddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X