»   » 'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ

'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ

Posted By:
Subscribe to Filmibeat Kannada

ತೆಲುಗು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ 'ಕಾಸ್ಟಿಂಗ್ ಕೌಚ್' ಚರ್ಚೆ ದಿನೇ ದಿನೇ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ನಟಿ ಶ್ರೀ ರೆಡ್ಡಿ ಖ್ಯಾತ ನಟ ರಾಣಾ ಸಹೋದರ ಅಭಿರಾಮ್ ಜೊತೆಗಿನ ಖಾಸಗಿ ಫೋಟೋ ಬಿಡುಗಡೆ ಮಾಡಿ ದೊಡ್ಡ ಸಂಚಲನ ಸೃಷ್ಟಿದ್ದರು.

ಇದಾದ ಬಳಿಕ ಬರಹಗಾರ ಕೋನ ವೆಂಕಟ್ ಅವರು ಕಳುಹಿಸಿರುವ ವಾಟ್ಸಾಪ್ ಸಂಭಾಷಣೆ ಲೀಕ್ ಮಾಡಿದ್ದರು. ಇದೀಗ, ಮತ್ತೊಬ್ಬ ನಿರ್ಮಾಪಕನ ವಿರುದ್ಧ ಗಂಭೀರ ಆರೋಪ ಮಾಡಿರುವ ಶ್ರೀರೆಡ್ಡಿ ಮೆಗಾಸ್ಟಾರ್ ಚಿರಂಜೀವಿಗೆ ವಾರ್ನಿಂಗ್ ಮಾಡಿದ್ದಾರೆ.

ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

ಚಿರಂಜೀವಿ ಅವರ ಕೂಡ ಅಚ್ಚರಿಗೊಳಗಾಗುವ ಸಂಗತಿಯನ್ನ ಬಿಚ್ಚಿಟ್ಟಿರುವ ಶ್ರೀ ರೆಡ್ಡಿ ಈಗ ಟಾಲಿವುಡ್ ಇಂಡಸ್ಟ್ರಿಯನ್ನ ಬೆಂಬಿಡದೆ ಕಾಡುತ್ತಿದ್ದಾರೆ. ಮತ್ತೊಂದೆಡೆ ಆರೋಪಕ್ಕೆ ಒಳಗಾಗಿರುವ ನಿರ್ಮಾಪಕನ ಬಗ್ಗೆ ಹಲವು ಅನುಮಾನಗಳನ್ನ ಹುಟ್ಟಿಕೊಂಡಿದೆ. ಅಷ್ಟಕ್ಕೂ, ಶ್ರೀ ರೆಡ್ಡಿ ಬಹಿರಂಗಪಡಿಸಿರುವ ನಿರ್ಮಾಪಕ ಯಾರು.? ಆ ನಿರ್ಮಾಪಕನಿಗೂ ಚಿರಂಜೀವಿಗೂ ಏನ್ ಸಂಬಂಧ.? ಮೆಗಾಸ್ಟಾರ್ ಗೆ ನಟಿ ವಾರ್ನ್ ಮಾಡಿದ್ದೇಕೆ.? ಮುಂದೆ ಓದಿ.....

ನಿರ್ಮಾಪಕ ಅಪ್ಪಾರಾವ್ ಒಬ್ಬ ಕಾಮುಕ

ಸಂಭಾಷಣೆಕಾರ ಕೋನ ವೆಂಕಟ್ ನಂತರ ಈಗ ನಿರ್ಮಾಪಕ ವಾಕಡ ಅಪ್ಪಾರಾವ್ ಅವರ ಬಗ್ಗೆ ಶ್ರೀರೆಡ್ಡಿ ಆರೋಪ ಮಾಡಿದ್ದಾರೆ. ವಾಕಡ ಅಪ್ಪಾರಾವ್ ಒಬ್ಬ ಕಾಮುಕ. ''ನನ್ನ ಜೊತೆಯಲ್ಲಿ ದೈಹಿಕ ಸಂಪರ್ಕ ಹೊಂದಿದರೇ ಮಾತ್ರವೇ ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ ಎಂದು ನೇರವಾಗಿ ಮಾತನಾಡುತ್ತಾನೆ'' ಎಂದು ಶ್ರೀರೆಡ್ಡಿ ಸ್ಫೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ.

'ಕಾಸ್ಟಿಂಗ್ ಕೌಚ್'ನಲ್ಲಿ ಚಿರು ಹೆಸರು ದುರ್ಬಳಿಕೆ.!

ನಿರ್ಮಾಪಕ ವಾಕಡ ಅಪ್ಪಾರಾವ್ ಮೆಗಾಸ್ಟಾರ್ ಚಿರಂಜೀವಿ ಅವರ ಹೆಸರನ್ನ ಹೇಳಿಕೊಂಡು ಹಲವು ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದಾನಂತೆ. ಇಂತಹವರನ್ನ ಚಿರಂಜೀವಿ ಅವರು ಪ್ರೋತ್ಸಾಹ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶ್ರೀರೆಡ್ಡಿ ಸಂಚಲನ: ಮತ್ತೊಬ್ಬ ದೊಡ್ಡ ವ್ಯಕ್ತಿಯ ಹೆಸರು ಬಯಲುಗೆಳೆದ ನಟಿ

16 ವರ್ಷದ ಹುಡುಗಿಯರ ಮೇಲೆ ಕಣ್ಣು

ತೆಲುಗು ಚಿತ್ರಲೋಕದಲ್ಲಿ ಕಾರ್ಯಕಾರಿ ನಿರ್ಮಾಪಕನಾಗಿ ಕೆಲಸ ಮಾಡುತ್ತಿರುವ ಅಪ್ಪಾರಾವ್ ನೂರಾರು ಹೆಣ್ಣು ಮಕ್ಕಳು ಜೀವನ ಹಾಳುಮಾಡಿದ್ದಾನೆ. ಲೈಂಗಿಕ ಕಿರುಕುಳ ನೀಡಿದ್ದಾನೆ. ಅದರಲ್ಲೂ 16 ವರ್ಷ ಹುಡುಗಿಯರೇ ಬೇಕು ಎಂದು ಡಿಮ್ಯಾಂಡ್ ಮಾಡ್ತಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶ್ರೀರೆಡ್ಡಿಗೆ ಸಲ್ಯೂಟ್ ಹೊಡೆದ ವರ್ಮಾ

ಇನ್ನು ತೆಲುಗು ನಟಿ ಶ್ರೀರೆಡ್ಡಿ ಪ್ರತಿಭಟನೆಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಶ್ರೀರೆಡ್ಡಿ ಹೋರಾಟಕ್ಕೆ ನಾನು ಚಿರಋಣಿ. ಹೈದ್ರಾಬಾದ್ ಗೆ ಬಂದಾಗ ಅವರನ್ನ ಭೇಟಿ ಮಾಡಿ ಆಟೋಗ್ರಾಫ್ ಪಡೆಯುತ್ತೇನೆ ಎಂದಿದ್ದಾರೆ.

ರಕುಲ್ ಪ್ರೀತ್ ಗೆ ಶೂಟಿಂಗ್ ಸ್ಥಳಕ್ಕೆ ಹೋಗಿ ಹೊಡಿತೀನಿ ಎಂದು ಧಮ್ಕಿ ಹಾಕಿದ ನಟಿ

English summary
Telugu actress Sri Reddy claimed that, Vakada Appa Rao is using Megastar Chiranjeevi’s name to spoil lives of many girls. She also requested Chiru not to encourage such meaner people.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X